*ಸಿಂಧನೂರು ದಸರಾ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ*
=================
*ಹಬ್ಬಗಳನ್ನು ಜಾತಿ, ಧರ್ಮಗಳನ್ನು ಮೀರಿ ಆಚರಣೆ ಮಾಡಿ; ಮುಖಮಂತ್ರಿ ಸಿದ್ದರಾಮಯ್ಯ*
ರಾಯಚೂರು,ಅ.04,(ಕಲ್ಯಾಣ ಕರ್ನಾಟಕ ವಾರ್ತೆ):-* ಸಿಂಧನೂರಿನ ಎಲ್ಲ ಜನ. ಎಲ್ಲ ಪಕ್ಷದವರು ಸೇರಿ ದಸರಾ ಆಚರಣೆ ಮಾಡುತ್ತಿದ್ದು, ಇದು ನನಗೆ ಬಹಳ ಸಂತೋಷವಾಗಿದೆ. ದಸರಾ ಮಹೋತ್ಸವದಲ್ಲಿ ಎಲ್ಲ ಜನಾಂಗದವರು ಭಾಗವಹಿಸಬೇಕು.ಇದಕ್ಕೆ ಯಾವ ಧರ್ಮ, ಭಾಷೆ, ಮತ್ತೊಂದು ಮಗದೊಂದು ಬೇಕಿಲ್ಲ. ಹಾಗಾಗಿ ಇವತ್ತು ಸುಮಾರು 2 ಕಿಮೀ ಸೌಹಾರ್ಧ ನಡಿಗೆಯನ್ನ ಮಾಡಿದಾರೆ. ಹೀಗಾಗಿ ಸಮಾಜದಲ್ಲಿ ತಾವೆಲ್ಲರೂ ಜಾತಿ ಧರ್ಮಗಳನ್ನು ಮೀರಿ ನಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಅ.04ರ ಶುಕ್ರವಾರ ದಂದು ಜಿಲ್ಲೆಯ ಸಿಂಧನೂರು ಸರ್ಕಾರಿ ಪದವಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸಿಂಧನೂರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ, ನಗರ ಯೋಜನಾ ಪ್ರಾಧಿಕಾರ, ಕೃಷಿ ಇಲಾಖೆಯ ವತಿಯಿಂದ ಸಿಂಧನೂರು ದಸರಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಇಂತಹ ಹಬ್ಬವನ್ನು ಪಕ್ಷಾತೀತವಾಗಿ ಎಲ್ಲರೂ ಸೇರಿ ಮಾಡ್ತಾ ಇರೋದು ಸಂತೋಷ. ಈ ದಸರಾ ಮೈಸೂರಿನಲ್ಲಿ ಮಾತ್ರ ಅಲ್ಲ ಅನೇಕ ಜಿಲ್ಲೆಗಳಲ್ಲಿ ಮಾಡ್ತಾ ಇದಾರೆ. ನಾನು ಈ ಸಾರಿ ಅದ್ಧೂರಿಯಾಗಿ ದಸರಾ ಮಾಡಿ ಎಂದು ಸೂಚಿಸಿದ್ದೆ. ಕಳೆದ ವರ್ಷ ಬರಗಾಲ ಇದ್ದಿದ್ದಕ್ಕೆ ಅದ್ದೂರಿ ಮಾಡಬೇಡಿ ಎಂದಿದ್ದೆ. ಆದರೆ ಈ ಬಾರಿ ಸಮೃದ್ಧವಾಗಿ ಮಳೆಯಾಗಿದೆ. ನಾಲ್ಕು ಕಡೆಗೆ ನದಿಗಳು ತುಂಬಿ ಹರಿಯುತ್ತಿವೆ. ಒಳ್ಳೆ ಮಳೆ ಬೆಳೆ ಇದೆ. ಹಾಗಾಗಿ ಸಮೃದ್ಧಿಯನ್ನು ಕಾಣ್ತೇವೆ ಎಂಬ ಆಶಾಭಾವನೆ ಇದೆ ಎಂದರು.
ಸರ್ಕಾರದಲ್ಲಿ ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಅಪಪ್ರಚಾರ ಮಾಡ್ತಾರೆ. ಹಾಗಾದ್ರೆ ಈ ಭಾಗದ ರಸ್ತೆ ಅಭಿವೃದ್ಧಿಗೆ 1695.84ಇಷ್ಟು ದುಡ್ಡು ಎಲ್ಲಿಂದ ಕೊಟ್ಟೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 5000 ಕೋಟಿ ಎಲ್ಲಿಂದ ಕೊಟ್ಟೆ. ಒಂದೇ ಒಂದು ಕ್ಯಾಬಿನೆಟ್ ಮೀಟಿಂಗ್ ದಲ್ಲಿ 11000 ಕೋಟಿ ರೂಪಾಯಿಗಳನ್ನು ಘೋಷಿಸಿ ನೀಡಲಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳಿರಬೇಕು. ಅದೇ ಅದರ ಜೀವಾಳ. ಆದ್ರೆ ಜನರಿಗೆ ಸತ್ಯ ಗೊತ್ತಿರಬೇಕು. ಅಲ್ಲವೇ.? ಅಂದರು ಮುಂದಿನ ಮೂರು ವರ್ಷಗಳಲ್ಲಿ ಈ ರಸ್ತೆ 3 ವರ್ಷದಲ್ಲಿ ಮುಗೀಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಇಲ್ಲಿ ಒಂದು ಪ್ರತೀತಿ ಇದೆ. ಅಂಬಾದೇವಿ ಅಧಿದೇವತೆ. ನಮ್ಮ ಚಾಮುಂಡೇಶ್ವರಿ ಅವತಾರ ಈ ಅಂಬಾದೇವಿ ಅಂತ ಕರೀತಾರೆ. ನಾನು ನಿನ್ನೆ ತಾನೆ ದಸರಾ ಉತ್ಸವವನ್ನು ಉದ್ಘಾಟನೆ ಮಾಡಿದ್ದೇವೆ ಅಲ್ಲದೆ ಹಂಪ ನಾಗರಾಜಯ್ಯ ಅವರು ಉದ್ಘಾಟಿಸಿದರು. ಸುಮಾರು 9 ದಿನಗಳ ನವರಾತ್ರಿ ಉತ್ಸವ ಅದು. 10 ನೇ ದಿನ ಅಂಬಾರಿಯಲ್ಲಿ ಮೆರವಣಿಗೆಯಾಗಿ ಅರಮನೆಗೆ ಹೋಗುತ್ತೆ. ಇಲ್ಲಿ 9 ದಿನಗಳ ಕಾರ್ಯಕ್ರಮ ಇಟ್ಕೊಂಡಿದಿರಿ. ವಿವಿದ ದಸರಾ ಕಾರ್ಯಕ್ರಮಗಳಾದ ರೈತರ ದಸರಾ, ಯುವ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೊನೇ ದಿನ ಆನೆ ಮೇಲೆ ಅಂಬಾರಿ ಹೊರಿಸಿ ಅಂಬಾದೇವಿ ಮೆರವಣಿಗೆ ಮಾಡ್ತಿದಿರಿ. ಇದು ಖುಷಿ ಸಂತೋಷ ಸೌಹಾರ್ದತೆಯನ್ನು ರಾಜ್ಯಕ್ಕೆ ದೇಶಕ್ಕೆ ಸಾರುವಂತಹ ಹಬ್ಬ ಎಂದರು.
371 (ಜೆ) 2013 ರಲ್ಲಿ ತಿದ್ದುಪಡಿಯಾಗಿ ಕಲ್ಯಾಣ ಕರ್ನಾಟಕ್ಕಕ್ಕೆ ವಿಶೇಷ ಸೌಲಭ್ಯಗಳನ್ನು ಕೊಡುವಂತ ಅವಕಾಶವನ್ನು ಒದಗಿಸಿಕೊಡಲಾಗಿದೆ. ಇಂತಹದ್ದೊಂದು ವಿಧೇಯಕಕ್ಕೆ ತಿದ್ದುಪಡಿ ತರೋದಕ್ಕೆ ಉಪಸಮಿತಿ ವರದಿ ಕೊಟ್ಟಮೇಲೆ ಯಥಾವತ್ತಾಗಿ ವರದಿ ಜಾರಿ ಮಾಡುವ ನಿರ್ಣಯವನ್ನು ನಮ್ಮ ಸರ್ಕಾರ ಮಾಡಿತು ಎಂದರು.
ಈ ವಿಚಾರವಾಗಿ ಅಂದು ಸಾವಿರಾರು ಜನರ ಹೋರಾಟ ಮಾಡಿದ್ರ ಅಲ್ಲದೆ ಮಲ್ಲಿಕಾರ್ಜುನ ಖರ್ಗೆಯವರ ಸತತ ಪ್ರಯತ್ನದಿಂದ 371 (ಜೆ) ಜಾರಿ ಆಯಿತು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮ ಸಿಂಗ್ ಅವರಿಗೆ ನಾವು ಗೌರವವನ್ನು ಸಲ್ಲಿಸಿಬೇಕಾಗುತ್ತೆ. ಧರ್ಮಸಿಂಗ್ ಇವತ್ತು ನಮ್ಮ ಜೊತೆ ಇಲ್ಲ ಅವರ ಆತ್ಮಕ್ಕೆ ಶಾಂತಿಕೋರೋಣ ಎಂದರು.
ಸೆಪ್ಟೆಂಬರ್ 17 ರಂದು ಗುಲ್ಬರ್ಗದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಮಾಡಲಾಯಿತು. ಅವತ್ತೆ ನಾಲ್ಕು ಗಂಟೆಗೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸುಮಾರು 57 ವಿಷಯಗಳನ್ನು ಚರ್ಚಿಸಿದೆವು. ಅವುಗಳಲ್ಲಿ 47 ವಿಷಯ ಕಲ್ಯಾಣ ಕರ್ನಾಟಕಕ್ಕೆ ಸೇರಿದವು. ಸುಮಾರು 11, 770 ಕೋಟಿ ರೂಪಾಯಿಗಳನ್ನು ಹೈದ್ರಾಬಾದ್ ಕರ್ನಾಟಕಕ್ಕೆ ನೀಡಲಾಗಿದ್ದು, ಇದನ್ನ ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.
ನಂಜುಂಡಪ್ಪ ವರದಿಯಿಂದ ರಾಜ್ಯದಲ್ಲಿ ನಡೆದ ಅಸಮಾನತೆ ಏನು ಎಂಬುದು ತಿಳಿಯಬೇಕು. ಇದನ್ನು ಅರ್ಥೈಸಿಕೊಳ್ಳೋದಕ್ಕೆ ನಾನು ಗೋವಿಂದರಾವ್ ಅವರ ಅದ್ಯಕ್ಷತೆಯಲ್ಲಿ ವರದಿ ತಯಾರಿಸಲು ಸಮಿತಿ ರಚಿಸಿದ್ದೇನೆ. ಅವರ ವರದಿ ಬಂದ ಬಳಿಕ ಅದನ್ನು ಮತ್ತೆ ಜಾರಿಗೊಳಿಸುತ್ತೇನೆ. ಇಲ್ಲಿಯವರೆಗೆ 19000 ಕೋಟಿ ರೂ ಮಂಜೂರಾಗಿದೆ. 13000 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ 11000 ಕೋಟಿ ಖರ್ಚಾಗಿದೆ. ಈಗ ಮತ್ತೆ ಪುನಃ 5000 ಕೋಟಿ ಇಟ್ಟಿದ್ದೇವೆ. ಎಂದರು.
ಈ ವೇಳೆ ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಮಾತನಾಡಿ, 371(ಜೆ) ಐತಿಹಾಸಿಕ ನಿರ್ಣಯವು ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಈ ಭಾಗದ ಯುವಕರಿಗೆ ಶೇಕಡಾ 8 ರಷ್ಟು ಉದ್ಯೋಗ ಮೀಸಲಾತಿ ನೀಡಲಾಗಿದೆ. 371(ಜೆ)ಯಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿ ಪೂರ್ಣ ಪ್ರಮಾಣ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಮಾತನಾಡಿ, 371 ಜೆ ಕಾಲಂ ಕ್ಯಾಬಿನೆಟ್ ಸಬ್ ಕಮಿಟಿಗೆ ಮಾಡಿದ್ರು ಆ ನಿಟ್ಟಿನಲ್ಲಿ ಎಸ್ ಕೆ ಪಾಟೀಲ್ ಸೇರಿದಂತೆ ಆನೇಕ ನಾಯಕ ಲ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಈ ಭಾಗದ ಎಲ್ಲಾ ಸಚಿವರು ಸೇರಿ ಇಲ್ಲಿ ರೂಲ್ಸ್ ಅನ್ನ ಫ್ರೇಮ್ ಮಾಡಿ ನಮ್ಮ ಭಾಗಕ್ಕೆ ಮೂರು ಬಾಳ ವಿಶೇಷವಾಗಿರತಕ್ಕಂಥ ಕೊಡುಗೆಗಳು ಅದಕ್ಕೆ ಸಾವಿರಾರು ಕೋಟಿ ಹಣವನ್ನು ಕೊಟ್ಟು ಈ ಭಾಗದಲ್ಲಿ 10 ವರ್ಷದಲ್ಲಿ ಅದರ ಅನೇಕ ಲಾಭ ಪಡೆದಿರ್ತಕ್ಕಂತವರಿಗೆ ಏನು ಭಾಗದ ಮಕ್ಕಳಿಂದ ಅದರ ಲಾಭವನ್ನು ಪಡೆದು ಸುಮಾರು 80,000 ಮಕ್ಕಳಿಗೆ ಅದರಿಂದ ಲಾಭ ಆಗಿದೆ.
ಕಲ್ಯಾಣ ಕರ್ನಾಟಕದ ಅನೇಕ ಯೋಜನೆಗಳಿಗೆ ಮುಖ್ಯಮಂತ್ರಿಗಳು ಚಾಲನೆಯನ್ನು ಕೊಟ್ಟಿದ್ದಾರೆ. ಸುಮಾರು 1170 ಕೋಟಿ ಇಷ್ಟು ದೊಡ್ಡ ಮಟ್ಟದ ಒಂದು ಅಭಿವೃದ್ಧಿ ಕಾಮಗಾರಿಗೆ ಈ ಭಾಗಕ್ಕೆ ಮಂಜೂರಿ ಮಾಡಿ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯನವರು ಇವತ್ತು ಕಲ್ಯಾಣ ಕರ್ನಾಟಕದ ಏಳಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಅಂತಕಂತ ಒಂದು ಪದ್ದತಿಯನ್ನು ಪ್ರದರ್ಶನ ಮಾಡಿದ್ದಾರೆಂದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಮಸ್ಕಿ ಕ್ಷೇತ್ರದ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೊಪ್ಪಳ ಲೋಕಸಭಾ ಸಂಸದರು ಕೆ.ರಾಜಶೇಖರ ಹಿತ್ನಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ್ ಬಯ್ಯಾಪೂರ, ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಹಂಪಯ್ಯ ನಾಯಕ್, ಅಮರೇಗೌಡ ಬಯ್ಯಾಪೂರ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಕೊಪ್ಪಳ ಶಾಸಕ ರಾಘವೇಂದ್ರ, ಶಿರುಗುಪ್ಪ ಶಾಸಕ ನಾಗರಾಜ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
*******************