ಕೇಂದ್ರ ತನಿಖಾ ತಂಡಭೇಟಿ:ಜಲಜೀವನ್ ಮಿಷನ್ ಯೋಜನೆ ಪರಿಶೀಲನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ವಿವಿಧ ಗ್ರಾಮಪಂಚಾಯ್ತಿಗಳಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಹಾಗೂ ಶೌಚಾಲಯ ಘನತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೇಂದ್ರ ತನಿಖಾ ತಂಡದ ನಿವೃತ್ತ ಐಎಎಸ್ ಅಧಿಕಾರಿಗಳಾದ ಜಗಜೀತಸಿಂಗ್ ಸೂಡಿ, ಮನೋಹರ ಕುಮಾರ ಗುಪ್ತಾ ಪರಿಶೀಲನೆ ನಡೆಸುತ್ತಿದೆ
ತಾಲೂಕಿನ ನಾಗಲಾಪುರ ಬನ್ನಿಗೋಳ ಆಮದಿಹಾಳ ಗ್ರಾಮಫಚಾಯ್ತಿಗಳಿಗೆ ಭೇಟಿ ನೀಡಿದ್ದು ಇಂದು ಕಾಳಾಪುರ,ಗೊರೇಬಾಳ, ಈಚನಾಳ,ಆನೆಹೊಸೂರು ಹಾಗೂ ರೋಡಲಬಂಡ (ತವಗ) ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದರು
ರಾಷ್ಟಿçÃಯ ಜಲಜೀವನ್ ಮಿಷನ್ ಕಾರ್ಯಕ್ರಮದ ಪ್ರಗತಿ ಅದರ ಜೊತೆಯಲ್ಲಿ ನೀರು ಪರೀಕ್ಷಾ ರೀತಿ, ಶೌಚಾಲಯಗಳ ಬಳಕೆ, ಘನತ್ಯಾಜ್ಯ ವಿಲೇವಾರಿ, ತಾಯಿಮನೆ, ಅಂಗನವಾಡಿಗಳ ಸಮಸ್ಯೆ ಕಸವಿಂಗಡಣೆ ಗ್ರಂಥಾಲಯ,ಸೇರಿದAತೆ ಹಲವಾರು ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ಹೇಗೆ ತಲುಪಿವೆ ಅವುಗಳ ನಿರ್ವಹಣೆ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಸಮಗ್ರವಾಗಿ ಜನರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು ಶೌಚಾಲಯಗಳ ಬಳಕೆಯ ಬಗೆಗೆ ಅವುಗಳ ಬಳಕೆ ಗ್ರಾಮೀಣ ಪ್ರದೇಶದಲ್ಲಿ ಇನ್ನು ಹೆಚ್ಚಬೇಕು ಅದಕ್ಕೆ ಸಕಾರಾತ್ಮವಾಗಿ ಪಂಚಾಯಿತಿಗಳು ಕೆಲಸ ಮಾಡಬೇಕು ಎಂದರು ಅಲ್ಲದೆ ಕುಡಿಯುವ ನೀರನ್ನು ಹೇಗೆ ಪರೀಕ್ಷೆ ಮಾಡಲಾಗುತ್ತದೆ ಅದನ್ನು ಯಾರು ಮಾಡುತ್ತಾರೆ ಎಂದು ಕೇಳಿದ ತಂಡ ನೀರು ಪರೀಕ್ಷಕರಿಂದ ನೀರನ್ನು ಪರೀಕ್ಷೆ ತಮ್ಮ ಎದುರಿನಲ್ಲಿಯೆ ಮಾಡಿಸಿದರು
ಜಲಜೀವನ್ ಮಿಷನ್ ಕಾಮಗಾರಿಯು ಈಗಾಗಲೆ ಮುಗಿಯುವ ಹಂತಕ್ಕೆ ಬಂದಿದ್ದು ಅದನ್ನು ಬೇಗ ಪೂರ್ಣಗೊಳಿಸಬೇಕೆಂದು ಹೇಳುತ್ತಾ ಕಾಮಗಾರಿಯ ಸದುಪಯೊಗಕ್ಕೆ ಇಲಾಖೆ ಅಧಿಕಾರಿಗಳು ಶ್ರಮಿಸಬೇಕೆಂದು ಹೇಳಿದರು
ಜಿಲ್ಲಾ ಯೋಜನಾ ಅಧಿಕಾರಿ ಪ್ರಕಾಶ ವಡ್ಡರ, ತಾ,ಪಂ ಅಧಿಕಾರಿ ಅಮರೇಶ,ನರೇಗಾ ಅಧಿಕಾರಿ ವೆಂಕಟೇಶ, ಮಂಜುನಾಥ, ಭೀಮಣ್ಣ,ನವಾಜ್ ಪಿಡಿಓ ಬಸವರಾಜ ಕಟ್ಟಿಮನಿ ಸೇರಿದಂತೆ ಇದ್ದರು