ಕರಡಕಲ್:ನಾಗರಪಂಚಮಿಯಂದು ಮಕ್ಕಳಿಗೆ ಹಾಲುನೀಡಿ ಹಬ್ಬ ಆಚರಣೆ

Laxman Bariker
ಕರಡಕಲ್:ನಾಗರಪಂಚಮಿಯಂದು ಮಕ್ಕಳಿಗೆ ಹಾಲುನೀಡಿ ಹಬ್ಬ ಆಚರಣೆ
WhatsApp Group Join Now
Telegram Group Join Now

ಕರಡಕಲ್:ನಾಗರಪಂಚಮಿಯಂದು ಮಕ್ಕಳಿಗೆ ಹಾಲುನೀಡಿ ಹಬ್ಬ ಆಚರಣೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ನಾಗರ ಪಂಚಮಿ ಹಬ್ಬದ ನಿಮಿತ್ಯವಾಗಿ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಹಲವರು ಹಾಲು ಕಲ್ಲನಾಗನಿಗೆ ಹಾಕದೆ ಮಕ್ಕಳಿಗೆ ನೀಡಿ ಹಬ್ಬ ಆಚರಣೆ ಮಾಡಿರುವುದು ವಿಶೇಷವಾಗಿತ್ತು


ನಾಗರಪಂಚಮಿಗೆ ನಾಗಪ್ಪನಿಗೆ ಹಾಲು ಎರೆಯುವುದು ಸಾಮಾನ್ಯವಾಗಿ ಕಂಡುಬರುವ ಆಚರಣೆಯಾದರು ಬಸವಧರ್ಮಿಯರು ಹಾಲು ಕಲ್ಲನಾಗರನಿಗೆ ಹಾಕಿ ವ್ಯರ್ಥಮಾಡುವುದಕಿಂತ ಮಕ್ಕಳಿಗೆ ನೀಡಿದರೆ ಉಪಯೋಗವಾಗುತ್ತದೆ ಮಗು ಬೆಳೆದು ಮುಂದೆ ಸದೃಢಯುವಶಕ್ತಿಪಡೆಯಾಗಿ ಬೆಳೆಯಬಲ್ಲರು ಎನ್ನುವ ವಿಚಾರದೊಂದಿಗೆ ಕರಡಕಲ್ ಗ್ರಾಮದ ಹಲವಾರು ಜನರು ಮಹಾಂತೇಶ್ವರ ಮಠದಲ್ಲಿ ಮಕ್ಕಳಿಗೆ ಹಾಲು ನೀಡುವುದರ ಮೂಲಕ ಹಬ್ಬ ಆಚರನೆಯನ್ನು ಮಾಡಿದರು
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್, ಶರಣಗೌಡ ಪಾಟೀಲ್, ಶರಣಪ್ಪ ಸುಂಕದ, ಸುಮಿತ್ರ ಶಂಕರಗೌಡ, ವೀರೇಶ ಚಕ್ರಸಾಲಿ, ಶಿವಾನಂದ ಪಾಟೀಲ್, ಹಾಗೂ ಮಕ್ಕಳು ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article