ರಾಹುಲ್ ಗಾಂಧಿ ಮೀಸಲಾತಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರಾಹುಲ್ ಗಾಂಧಿಯವರು ಇತ್ತೀಚೆಗೆ ಅಮೆರಿಕಾದಲ್ಲಿ ಮೀಸಲಾತಿಯ ರದ್ದತಿಯ ಬಗೆಗೆ ಮಾತನಾಡಿದ್ದಾರೆ ಎಂದು ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿಯು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು
ರಾಹುಲ್ ಗಾಂಧಿಯವರು ಬುಡಕಟ್ಟು,ದಲಿತ ಹಾಗೂ ಹಿಂದುಳಿದವರಿಗೆ ಸರಿಯಾದ ಪ್ರಾತಿನಿದ್ಯ ಸಿಗುತ್ತಿಲ್ಲ ಶೇ೯೦ರಷ್ಟು ಈ ಜನರು ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸರಕಾರದಲ್ಲಿ ಸರಿಯಾದ ಪ್ರಾತಿನಿದ್ಯ ಸಿಗಬೇಕಿದೆ ಮೀಸಲಾತಿಯೊಂದೆ ಪರಿಹಾರವಲ್ಲ ಬೇರೆ ಪರಿಹಾರಗಳಿವೆ ಎನ್ನುವ ಬಗೆಗೆ ರಾಹುಲ್ ಗಾಂಧಿಯವರು ಮಾತನಾಡಿದ್ದರು
ರಾಹುಲ್ ಗಾಂಧಿಯವರು ಮೀಸಲಾತಿಯ ವಿರುದ್ದ ಹೇಳಿಕೆ ನಿಡಿದ್ದಾರೆ ಅವರು ದಲಿತ ವಿರೋಧಿಯಾಗಿದ್ದಾರೆಂದು ಬಿಜೆಪಿ ಮುಖಂಡರು ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು
ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಹೊಸಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿ ಹೊಸಬಸ್ ನಿಲ್ದಾಣ ವೃತ್ತದಲ್ಲಿ ರಾಹುಲ್ ಗಾಂಧಿಯವರು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು
ಘಟನೆಯ ಕುರಿತು ಜಗನ್ನಾಥ ಕುಲಕರ್ಣಿ, ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಂಡಲ ಅಧ್ಯಕ್ಷರಾದ ಅಯ್ಯಪ್ಪ ವಕೀಲ ಮಾಳೂರು, ಹುಲ್ಲೇಶ ಸಾಹುಕಾರ ಸೇರಿದಂತೆ ಹಲವರು ಮಾತನಾಡಿದರು
ಈ ಸಂದರ್ಭದಲ್ಲಿ ಈಶ್ವರ ವಜ್ಜಲ್, ಗಿರಿಮಲ್ಲನಗೌಡ ಪಾಟೀಲ್, ನಾರಾಯಣಪ್ಪನಾಯ್ಕ, ಶರಣಪ್ಪನಾಯಕ,ಮಲ್ಲಣ್ಣ ಹೂಗಾರ,ಫಕೀರಪ್ಪ ಕುರಿ,ಅನಂತದಾಸ,ಸೇರಿದಂತೆ ಇದ್ದರು