ಲಿಂಗಸುಗೂರ ವಸತಿ ನಿಲಯಗಳಿಗೆ ಬಯ್ಯಾಪೂರ ಹಠಾತ್ ಭೇಟಿ, ಅಧಿಕಾರಿಗಳಿಗೆ ತರಾಟೆ!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:: ಪಟ್ಟಣದ ಮೆಟ್ರಿಕ್ ನಂತರದ ಅಂಬೇಡ್ಕರ ಬಾಲಕೀಯರ ಹಾಗೂ ಹಿಂದುಳಿದ ವರ್ಗಗಳ ವಸತಿನಿಲಯ ಹಾಗೂ ಸರಕಾರಿ ಪಾಲಿಟೆಕ್ನಿಕ ಕಾಲೇಜ ವಸತಿನಿಯಗಳಿಗೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ ತಮ್ಮ ಬೆಂಬಲಿಗರೊಂದಿಗೆ ಹಠಾತ ಭೇಟಿ ನೀಡಿ ವಸತಿ ನಿಲಯಗಳ
ಮೂಲಭೂತಸೌಕರ್ಯಗಳು ಮತ್ತು ಗುಣಮಟ್ಟದ ಆಹಾರ ನೀಡದಿರುವುದನು ಕಂಡು ಅಕ್ರೋಶಗೊಂಡು ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಸಿದ್ನಾಳ ಹಾಗೂ ಬಿಸಿಎಮ ಅಧಿಕಾರಿ ಮಾನಪ್ಪ ಇವರುಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಅಂಬೇಡ್ಕರ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯರು ಶೌಚಾಲಯ ನೀರಿನ ಕೊರತೆ ಸಮಯಕ್ಕೆ ಸರಿಯಾಗಿ ಆಹಾರ ನೀಡದೆ ಇರುವದು ಮತ್ತು ಗ್ರಂಥಾಲಯ ಆರಂಭೀಸಲು ಮನವಿ ಮಾಡಿದರು
ಹಿಂದುಳಿದವರ್ಗ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಹಾಸಿಗೆ ಎಲ್ಲೂ ಬೆಡಶೀಟಗಳು ಹಾಕಿದ್ದಿಲ್ಲ ಹಾಗೆ ಶುದ್ದ ನೀರಿಲ್ಲ ಸರಿಯಾದ ಫ್ಯಾನಗಳ್ಳಿಲ್ಲ ಸೂಕ್ತ ರಕ್ಷಣೆ ಇರುವದಿಲ್ಲ ಕಟ್ಟಡಗಳು ಹಳೆಯದಾಗಿದ್ದು ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ ಎಂದು ದೂರಿದರು.
ಅಲ್ಲದೆ ಬಿಸಿಎಂ ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಕಟ್ಟಡ ಕಾಮಗಾರಿಯು ಕಳಪೆಯಾಗಿದೆ ಕಾಮಗಾರಿಯನ್ನು ಕಳಪೆ ಮಾಡಲು ಬಿಡುವುದಿಲ್ಲ ಕೂಡಲೇ ಸರಿಪಡಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ವಿಧಾನಪರಿಷತ ಸದಸ್ಯ ಶರಣಗೌಡ ಬಯ್ಯಾಪೂರ ಕೂಡಲೆ ಕ್ರಮಜರುಗಿಸಿ ಸಮಸ್ಯೆಗಳ ಬರದಂತೆ ಎಚ್ಚರವಹಿಸಿ ಅಲ್ಲದೆ ಅನುದಾನ ಕೊರತೆ ಇದ್ದರೆ ತಿಳಿಸಿ ಎಂದು ತಿಳಿಸಿದರು.
ನಂತರ ಡಿಪ್ಲೊಮಾ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದ್ದು ಕಾಯಂ ಉಪನ್ಯಾಸಕರನ್ನು ತರುವ ಯತ್ನ ಮಾಡಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ ಎಂ ಎಲ್ ಸಿ ಶರಣಗೌಡರು ಬೆಂಗಳುರುಇನಲ್ಲಿ ಸಂಬಂದಿಸಿದ ಇಲಾಖೆಗೆ ಭೇಟಿ ನೀಡಿ ಆಯುಕ್ತರು ಹಾಗೂ ಸಚಿವರಿಗೆ ವಿಷಯ ತಿಳಿಸಿ ಕಾಯಂ ಉಪನ್ಯಾಸಕರನ್ನು ತರಲು ಯತ್ನಿಸಲಾಗುವುದು ಎಂದರು
ಬಂದ್ ಆಗಿರುವ ವಸತಿ ನಿಲಯದ ಆರಂಭಕ್ಕೆ ಸೂಚನೆ: ಡಿಪ್ಲೋಮಾ ಕಾಲೇಜಿನ ಹತ್ತಿರವೇ ನಿರ್ಮಾಣವಾಗಿರುವ ವಸತಿ ನಿಲಯ ಉಪಯೋಗವಿಲ್ಲದೆ ನಿರುಪಯುಕ್ತವಾಗಿದ್ದು ಅದನ್ನು ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳುವಂತೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗೆ ಸೂಚಿಸಿದರು ಹೆಚ್ಚವರಿಯಾಗಿರುವ ವಿದ್ಯಾರ್ಥಿನಿಯರನ್ನು ಹಾಗೂ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿನಿಯರನ್ನು ಸದರಿ ವಸತಿ ನಿಲಯದಲ್ಲಿ ಉಳಿಯಲು ಏರ್ಪಾಡು ಮಾಡಬೇಕೆಂದು ಹೇಳಿದರು ನಂತರ ಜಿಟಿಟಿಸಿ ಕಾಲೇಜಿಗೆ ಭೇಟಿಕೊಟ್ಟು ಸದರಿ ಕಾಲೇಜಿನಲ್ಲಿರುವ ವ್ಯವಸ್ಥೇಗಳ ಬಗೆಗೆ ಮಾಹಿತಿಯನ್ನು ಪಡೆದರು ಹಾಗೂ ವಿದ್ಯಾರ್ಥಿಗಳೊಂದಿಗೆ ಭೇಟಿಯಾಗಿ ಸಮಸ್ಯೆಯನ್ನು ಆಲಿಸಿದರು ಕಾಲೇಜು ಹಾಗೂ ವಸತಿ ನಿಲಯದಲ್ಲಿ ಯಾವುದೆ ಸಮಸ್ಯೆ ಇರಲಿ ನನ್ನ ಗಮನಕ್ಕೆ ತಂದರೆ ಅದರ ಪರಿಹಾರಕ್ಕೆ ಯತ್ನಿಸಲಾಗುವುದು ಎಂದರು
ಈಸAದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಉಮೇಶ ಸಿದ್ನಾಳ ಬಿಸಿಎಮ ಅಧಿಕಾರಿ ಮಾನಪ್ಪ ಬಡಿಗೇರ ವಾರ್ಡನಗಳಾದ ಶರಣಪ್ಪ, ಬೀಮಣ್ಣ, ನಾಗರತ್ನ ಹಾಗೂ ಮುಖಂಡರಗಳಾದ ಪಾಮಯ್ಯ ಮುರಾರಿ ಭೂಪನಗೌಡ ಪಾಟೀಲ್, ಮಲ್ಲಣ್ಣ ವಾರದ, ಸೋಮಶೇಖರ ಯದನಾಳ, ಶಶಿಧರ ಪಾಟೀಲ್,ಚನ್ನಾರಡ್ಡಿ ಬಿರಾದಾರ ಸೇರಿದಂತೆ ಇದ್ದರು.