ಚಿಕ್ಕಹೆಸರೂರು:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ,ಸದುಪಯೋಗಕ್ಕೆ ಬಯ್ಯಾಪುರ ಕರೆ

Laxman Bariker
ಚಿಕ್ಕಹೆಸರೂರು:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ,ಸದುಪಯೋಗಕ್ಕೆ ಬಯ್ಯಾಪುರ ಕರೆ
WhatsApp Group Join Now
Telegram Group Join Now

ಚಿಕ್ಕಹೆಸರೂರು:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ,ಸದುಪಯೋಗಕ್ಕೆ ಬಯ್ಯಾಪುರ ಕರೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಎಂ ಎಲ್ ಸಿ ಶರಣಗೌಡ ಪಾಟೀಲ ಬಯ್ಯಾಪುರ ನೆರವೇರಿಸಿ ರೈತರು ಅದರ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು
ಅವರು ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಾಕರಿ ಸಂಘದ ಉದ್ಘಾಟನೆ ಮಾಡಿ ಮಾತನಾಡುತ್ತಾ ತಾಲೂಕಿನಲಿ ಹಲವಾರು ಪ್ರಾಥಮಿಕ ಸಹಕಾರಿ ಸಂಘಗಳಿದ್ದರು ಸ್ವಂತ ಕಟ್ಟಡವಿರುವುದು ಅಪರೂಪ ಅಂತಹದರಲ್ಲಿ ಚಿಕ್ಕಗ್ರಾಮ ಚಿಕ್ಕಹೆಸರೂರಿನಲ್ಲಿರುವ ಪ್ರಾಥಮಿ ಸಹಕಾರಿ ಸಂಘ ಸ್ವಂತ ಕಟ್ಟಡ ಹೊಂದಿರುವುದು ಉತ್ತಮ ಬೆಳವಣಿಗೆಯಾಗಿದೆ ರೈತರಿಗೆ ಸಹಾಯ ಸಹಕಾರ ಮಾಡುತ್ತಾ ಬಂದಿರುವ ನಾನು ರೈತರು ಪ್ರಾಥಮಿಕ ಸಹಕಾರಿಯಲ್ಲಿ ಲೇವಾದೇವಿಯನ್ನು ಸರಿಯಾಗಿ ಮಾಡುತ್ತಾ ಸರಿಯಾಗಿ ಹಣವನ್ನು ಕಟ್ಟಿದರೆ ಅಂತಹ ರೈತರಿಗೆ ಸುಮಾರು ೫೦ ಲಕ್ಷದವರೆಗೂ ನೀಡಲಾಗುವುದೆಂದು ಭರವಸೆಯನ್ನು ನೀಡಿದರು ಅಲ್ಲದೆ ರೈತರಿಗೆ ಸಿಗುವ ರಸಗೊಬ್ಬರವನ್ನು ಸರಿಯಾಗಿ ಪೊರೈಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ನಾಡಗೌಡವಹಿಸಿದ್ದರು
ಈ ಸಂದರ್ಭದಲ್ಲಿ ಗ್ರಾರಂಟಿ ಯೀಜನಾ ಸಮಿತಿಯ ಜಿಲ್ಲಾಧ್ಯಕ್ಷರಾದ ಪಾಮಯ್ಯ ಮುರಾರಿ, ಆರ್‌ಡಿಸಿಸಿ ಬ್ಯಾಂಕ ನಿರ್ದೇಶಕರಾದ ಬಸವರಾಜಗೌಡ ಗಣೇಕಲ್, ಜಿ,ಪಂ, ಮಾಜಿ ಅಧ್ಯಕ್ಷರಾದ ಗುಂಡಪ್ಪ ನಾಯಕ, ಶರಣಪ್ಪ ಮೇಟಿ ಹೆಸರೂರು, ಏಕಮರಣ್ಣ, ಬಸವರಾಜಗೌಡ ಬಸಾಪುರ, ಯಮನಪ್ಪ ಸರ್ಜಾಪೂರ,ವಿಎಸ್ ಎಸ್ ಎಲ್ ಸದಸ್ಯರಾದ ಶ್ರೀದೇವಿ ಅಮರೇಗೌಡ, ಶಾಂತಕುಮಾರ ಪಟ್ಟೇದ,ಶಿವಮ್ಮ, ಗುಂಡಪ್ಪ,ಹೊನ್ನಪ್ಪ,ಅಮರೇಗೌಡ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article