ಬಿಜೆಪಿಗೆ ಓಟು ಹಾಕಿ ಎಂದಿದ್ದರೆ ನಾಲಿಗೆಯನ್ನು ಕೊಯ್ದುಕೊಳ್ಳುತ್ತೇನೆ-ಭೂಪನಗೌಡ ಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು.ಏ.1- ಗಣವೇಷ ದಾರಿಗಳ ರಕ್ತದಲ್ಲಿಯೇ ಬಿಜೆಪಿ ಇರುತ್ತದೆ. ಇನ್ನು ನಾನು ಮೂಲ ಕಾಂಗ್ರೆಸ್ ಎಂದು ಪದೇ ಪದೇ ಹೇಳಿಕೊಳ್ಳುವ ಮೂಲಕ ತಮ್ಮ ಮೂಲವನ್ನು ತಾವೇ ಕೆದಿಕಿಕೊಳ್ಳು ತ್ತಿದ್ದಾರೆ ನಾನು ಬಿಜೆಪಿಗೆ ಓಟು ಹಾಕಿ ಎಂದಿದ್ದರೆ ನಾಲಿಗೆಯನ್ನು ಕೊಯ್ದುಕೊಳುವೆ ಎಂದು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಹೇಳಿದರು
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂಪನಗೌಡರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿ ದ್ದಾರೆಂದು ಕಾಂಗ್ರೆಸ್ ರಾಜ್ಯಾ ಧ್ಯಕ್ಷರಿಗೆ ಮತ್ತು ಕಾರ್ಯಾಧ್ಯಕ್ಷರಿಗೆ ಪತ್ರ ಬರೆದಿರುವ ಗೋವಿಂದನಾ ಯಕರವರು, ಎಂಎಲ್‌ಸಿ ಚುನಾವ ಣೆಯಲ್ಲಿ ಯಾವ ಪಕ್ಷದಲ್ಲಿದ್ದಾರೆಂಬುವುದನ್ನು ನೆನಪು ಮಾಡಿಕೊಳ್ಳ ಬೇಕು. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಗೆ ಓಟು ಹಾಕಿ ಎಂದು ಹೇಳಿದ್ದರೆ ನನ್ನ ನಾಲಿಗೆ ಯನ್ನು ಕೊಯ್ದುಕೊಳ್ಳುತ್ತೇನೆ. ಹಿರಿಯ ಶಾಸಕರ ಬಗ್ಗೆ ಮಾತನಾಡು ವಾಗ ತನ್ನ ಇತಿಮಿತಿಗಳನ್ನು ಅರಿತು ಕೊಂಡು ಮಾತನಾಡಬೇಕು ಅವರು ಹಂಗ ಮಾಡ್ಯಾರ, ಇವರು ಹಿಂಗ್ ಮಾಡ್ಯಾರ ಅಂತ ಹೇಳಿಕೊಂಡು ತಿರುಗಾಡುವುದನ್ನು ಬಿಟ್ಟು ಪಕ್ಷ ಕಟ್ಟುವ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಇದೇ ಏಪ್ರಿಲ್ 3 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಪದಗ್ರಹಣ, ಕಾರ್ಯಕರ್ತರ ಹಾಗೂ ಮುಖಂಡರ ಸಭೆಯನ್ನು ಏರ್ಪಡಿಸ ಲಾಗಿದೆ ಈ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯ ಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ ಎಂ.ಎಲ್.ಸಿ ಚುನಾವಣೆ ಯಲ್ಲಿ ಹಾಗೂ 2013ರ ಚುನಾವ ಣೆಯಲ್ಲಿ ಗೋವಿಂದ ನಾಯಕರು ಎಲ್ಲಿದ್ದರು ಎಂದು ನೆನಪು
ಮಾಡಿಕೊಳ್ಳಬೇಕು. ಇನ್ನೊಬ್ಬರ ಮುಖವಾಣಿಯಾಗಿ ಕೆಲಸ ಮಾಡುವುದನ್ನು ಬಿಡಿ, ಪಕ್ಷವನ್ನು ಕಟ್ಟುವ ಕೆಲಸ ಮಾಡಿ. ಅದು ಪಕ್ಷ ಒಡೆಯುವ ಕೆಲಸ ಬಿಟ್ಟು ಪಕ್ಷ ಮಾಡಬೇಡಿ ಎಂದರು.
3 ಚುನಾವಣೆಗಳಲ್ಲಿ ಡಿಎಸ್ ಹೂಲಗೇರಿಯವರ ಪರ ಕೆಲಸ ಮಾಡಿದ್ದೇವೆ. ಆದರೆ ಹೂಲಗೇ ರಿಯವರು ನಮ್ಮನ್ನು ವಿರೋಧಿ ಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ವಿವಿಧ ಹುದ್ದೆಗಳಿಗೆ ಹಲವರನ್ನು ನಾಮ ನಿರ್ದೇಶನ ಮಾಡಿರುವ ಹೂಲಗೇರಿಯವರು ಯಾವ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡಿದ್ದಾ ರೆಂದು ಮನನ ಮಾಡಿಕೊ ಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಡಿಜಿ ಗುರಿಕಾರ, ಗುಂಡಪ್ಪ ನಾಯಕ, ಬಸನಗೌಡ ಗಣೆಕಲ್, ಸೋಮ ಶೇಖರ ಐದನಾಳ, ಇಬ್ರಾಹಿಂ ಗ್ಯಾರಂಟಿ, ಲಾಲಪ್ಪ ರಾಠೋಡ್, ಚನ್ನರೆಡ್ಡಿ ಬಿರಾದರ್ ಸೇರಿ ಇತರರು ಇದ್ದರು.