ಲಿಂಗಸುಗೂರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬಯ್ಯಾಪುರ ಗುಂಪಿನ ಭೂಪನಗೌಡ ಅಧಿಕಾರ ಸ್ವೀಕಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಮಾಜಿ ಸಚಿವ ಕಾಂಗ್ರೆಸ್ಸ ಹಿರಿಯ ಮುಖಂಡ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಎಂ ಎಲ ಸಿ ಶರಣಗೌಡ ಪಾಟೀಲ ಬಯ್ಯಾಪುರ ಇವರ ಗುಂಪಿನ ಹಿರಿಯ ನಿಷ್ಟಾವಂತ ಕಾಂಗ್ರೆಸ್ಸ ಮುಖಂಡ ಭೂಪನಗೌಡ ತಂದೆ ಶಿವುರುದ್ರಪ್ಪಗೌಡ ಪಾಟೀಲ ಕರಡಕಲ್ ಇವರು ಇಂದು ಗುರುವಾರ ಲಿಂಗಸುಗೂರ ಪಟ್ಟಣದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿ ನಗರದ ಸೌಂದರ್ಯ ಹಾಗೂ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರ, ಕರಡಕಲ್, ಹುಲಿಗುಡ್ಡ ಯಲಗಳದಿನ್ನಿ ಗ್ರಾಮಗಳಲ್ಲಿ ಅನಧಿಕೃತ ಬಡಾವಣೆ ಇರುª Àದೂರುಗಳು ಇದ್ದು ಸೂಕ್ತ ಕ್ರಮ ಜರುಗಿಸುವೆ ನಾನು ಅಧ್ಯಕ್ಷನಾಗಿ ಎಲ್ಲರ ಸಹಕಾರ ಹೊಂದಿ ಹಿರಿಯರಾದ ಅಮರೆಗೌಡ ಪಾಟೀಲ ಬಯ್ಯಾಪುರ ಹಾಗೂ ಶರಣಗೌಡ ಪಾಟೀಲ ಬಯ್ಯಾಪುರ ಮಾರ್ಗದರ್ಶನದಲ್ಲಿ ನನ್ನ ನೇಮಕಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವುಕುಮಾರ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಅಭಿಂನAದಿಸುವೆ ಎಂದು ತಿಳಿಸಿದರು.
ಲಿಂಗಸುಗೂರ ಪಟ್ಟಣದ ನಗರಾಭಿವೃದ್ಧಿ ಯೋಜನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ಮುಖಂಡ ಮಾಜಿ ಶಾಸಕ ಡಿ.ಎಸ ಹುಲಗೇರಿ ಹಾಗೂ ಎಂಎಲಸಿ ಶರಣಗೌಡ ಬಯ್ಯಾಪುರ ಗುಂಪುಗಳ ಮಧ್ಯ ಭಾರಿ ಪೈಪೋಟಿ ನಡೆದಿದ್ದು ಕೂನೆಗೂ ಶರಣಗೌಡ ಪಾಟೀಲ ಬಯ್ಯಾಪುರ ಗುಂಪಿನ ಭೂಪನಗೌಡ ಅಧ್ಯಕ್ಷರಾಗುವ ಮೂಲಕ ಮೇಲಗೈ ಸಾಧಿಸಿದ್ದಾರೆ.
ಲಿಂಗಸುಗೂರ ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷರಾಗಿ ಭೂಪನಗೌಡರನ್ನು ನೇಮಕ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ದಿನಾಂಕ ೧೯-೦೩-೨೦೨೫ರಂದು ಆದೇಶ ಜಾರಿ ಮಾಡಿದ್ದು ಆದೇಶ ಬಂದ ಹಿನ್ನಲೆಯಲ್ಲಿ ೨೪ ಗಂಟೆಯೊಳಗೆ ಭೂಪನಗೌಡರು ಅಧ್ಯÄಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ
ಈ ಸಂದರ್ಭದಲ್ಲಿ ಕಾಂಗ್ರೆಸ್ಸ ಮುಖಂಡರಾದ ಗುಂಡಪ್ಪ ನಾಯಕ, ಅನಿಷ ಪಾಷಾ, ಶಶಿಧರ ಆಸಿಹಾಳ, ಶರಣಬಸವ ವಾರದ, ಶಿವರೆಡ್ಡಿ ಪಾಟೀಲ, ಪುರಸಭೆ ಸದಸ್ಯ ಸೋಮನಗೌಡ ಪಾಟೀಲ ಕರಡಕಲ, ಬಸವರಾಜ, ನಾಗಯ್ಯ ಕರಡಕಲ್, ಇಬ್ರಾಹಿಂ ಗ್ಯಾರಂಟಿ, ಅಮರೇಶ ಮೇದನಾಪೂರ, ಚನ್ನರೆಡ್ಡಿ ಬಿರಾದರ, ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಪರಶುರಾಮ ಇದ್ದರು.
ಭೂಪನಗೌಡ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಕಾರ್ಯಕರ್ತರು ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದ್ದರು.