ಗೊರೇಬಾಳ: ಗ್ರಾ,ಪಂ ಅಧ್ಯಕ್ಷನಲ್ಲದಿದ್ದರು ಬ್ಯಾನರಿನಲ್ಲಿ ಅಧ್ಯಕ್ಷನೆಂದು ಭಾರಿಫೋಜ್ ವೈರಲ್!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಗೊರೇಬಾಳ ಗ್ರಾಮಪಂಚಾಯ್ತಿಯಲ್ಲಿ ತಾನು ಗ್ರಾಮಪಂಚಾಯ್ತಿ ಅಧ್ಯಕ್ಷ ಅಲ್ಲದಿದ್ದರು ನಾನೆ ಅಧ್ಯಕ್ಷನೆಂದು ವಿವಿಧ ಬ್ಯಾನರ್ ಗಳಲ್ಲಿ ಗಣ್ಯರ ಫೋಟೊಹಾಕಿಕೊಂಡು ಫೋಜ್ ನೀಡಿದ ದೃಶ್ಯಗಳು ಭಾರಿ ವೈರಲ್ ಆಗಿದ್ದು ನಿಜವಾದ ಅಧ್ಯಕ್ಷರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ
ಹೌದು ತಾಲೂಕಿನ ಗೊರೇಬಾಳ ಗ್ರಾಮಪಂಚಾಯ್ತಿಯಲ್ಲಿ ಇಂತಹದ್ದೊAದು ಬ್ಯಾನರ್ ಗಳು ಹರಿದಾಡುತ್ತಿವೆ ಅಲ್ಲಿ ನಿಜವಾದ ಅಧ್ಯಕ್ಷರು ವೀಜೆಮ್ಮ ಗಂ ಆನಂದ ರಾಠೋಡ ಅಂದರೆ ವೀಜಮ್ಮನ ಗಂಡ ಆನಂದ ಇಲ್ಲಿ ಆನಂದ ತಾನೆ ಗ್ರಾಮಪಂಚಾಯ್ತಿಯ ಅಧ್ಯಕ್ಷನೆಂದು ಹಬ್ಬ ಹರಿದಿನಗಳಲ್ಲಿ ಗಣ್ಯರ ಮಹಾತ್ಮರ ಜಯಂತಿ ಇತ್ಯಾದಿ ಸಂದರ್ಭದಲ್ಲಿ ಬ್ಯಾನರ್ ಗಳಲ್ಲಿ ಆನಂದ ವೈ ರಾಠೋಡ್ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಗೊರೇಬಾಳ ಎಂದು ಹಾಕಿಸಿಕೊಂಡು ಅಂತಹ ಪೋಷ್ಟ ಬ್ಯಾನರ್ ಗಳನ್ನು ವಿವಿಧ ಜಾಲತಾಣಗಳಲ್ಲಿ ಕಳುಹಿಸುತ್ತಿದ್ದು ನಿರಂತರವಾಗಿ ನಡೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಆನಂದನ ಹೆಂಡತಿ ಅಧ್ಯಕ್ಷೆಯಾಗಿದ್ದು ಮಾತ್ರ ಸತ್ಯ ಆದರೆ ಅವರ ಪದವಿಯನ್ನು ತಾನು ಹಾಕಿಕೊಂಡು ಬ್ಯಾನರ್ ಮಾಡಿಸುವದು ಎಷ್ಟು ಸರಿ ಎನ್ನುವ ಚರ್ಚೆಗಳು ನಡೆದಿವೆ ಇದಕ್ಕೆ ತಾ,ಪಂ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಕಾದುನೋಡಬೇಕು