ಲಿಂಗಸಗೂರು:ಮುಕ್ತ ವಿವಿಯ ಬಿಎಡ್ ಪರೀಕ್ಷೆ ಇಲ್ಲಿ ಮುಕ್ತ,ಮುಕ್ತ!! ನಿಯಮಮೀರಿ ಗುಂಪು ಗುಂಪು ಕುಳಿತು ಸುಸೂತ್ರ ಪರೀಕ್ಷೆ!! ಪರೀಕ್ಷಾ ವೀಕ್ಷಕರ ಸುಳಿವೇ ಇಲ್ಲ!! ಮಾಹಿತೆಗೆ ಸಿಗದ ವಿವಿ ವಿಸಿ

Laxman Bariker
ಲಿಂಗಸಗೂರು:ಮುಕ್ತ ವಿವಿಯ ಬಿಎಡ್ ಪರೀಕ್ಷೆ ಇಲ್ಲಿ ಮುಕ್ತ,ಮುಕ್ತ!! ನಿಯಮಮೀರಿ ಗುಂಪು ಗುಂಪು ಕುಳಿತು ಸುಸೂತ್ರ ಪರೀಕ್ಷೆ!! ಪರೀಕ್ಷಾ ವೀಕ್ಷಕರ ಸುಳಿವೇ ಇಲ್ಲ!! ಮಾಹಿತೆಗೆ ಸಿಗದ ವಿವಿ ವಿಸಿ
WhatsApp Group Join Now
Telegram Group Join Now

ಲಿಂಗಸಗೂರು:ಮುಕ್ತ ವಿವಿಯ ಬಿಎಡ್ ಪರೀಕ್ಷೆ ಇಲ್ಲಿ ಮುಕ್ತ,ಮುಕ್ತ!!
ನಿಯಮಮೀರಿ ಗುಂಪು ಗುಂಪು ಕುಳಿತು ಸುಸೂತ್ರ ಪರೀಕ್ಷೆ!!
ಪರೀಕ್ಷಾ ವೀಕ್ಷಕರ ಸುಳಿವೇ ಇಲ್ಲ!! ಮಾಹಿತೆಗೆ ಸಿಗದ ವಿವಿ ವಿಸಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಬಿಎಡ್ ಪರೀಕ್ಷೆಗಳು ಪಟ್ಟಣದಲ್ಲಿ ನಡೆಯುತಿದ್ದು ಪರೀಕ್ಷಾರ್ಥಿಗಳು ಗುಂಪು ಗುಂಪಾಗಿ ಕುಳಿತು ಸಾಮೂಹಿಕವೆಂಭಮತೆ ಪರೀಕ್ಷೆ ಬರೆಯುತ್ತಿರುವ ದೃಶ್ಯಕಂಡು ಬಂದಿದ್ದು ನೋಡಿದವರು ಇದು ಪರೀಕ್ಷೆಯೆ ಎಂದು ಹುಬ್ಬೇರಿಸುವಂತೆ ಮಾಡಿದ್ದು ಮುಕ್ತ ವಿಶ್ವವಿದ್ಯಾಲಯದ ಶಿಸ್ತಿಗೆ ದೊಡ್ಡಪೆಟ್ಟು ನಿಡಿದಂತಾಗಿದೆ
ಹೌದು ಸಾಮಾನ್ಯವಾಗಿ ಬಿಎಡ್ ಪರೀಕ್ಷೆ ಬರೆಯಬೇಕಾದರೆ ವಿದ್ಯಾರ್ಥಿಗಳು ಏನೆಲ್ಲಾ ಕಷ್ಟಪಟ್ಟು ತರಗತಿಗೆ ಹಾಜರಾಗಿ ಕಲಿಕೆ ತರಗತಿ ನಡೆಸಿ ಪಠ್ಯಕ್ರಮ ರಚಿಸಿ ಸಾಕಷ್ಟು ಕಷ್ಟಪಟ್ಟು ಕಲಿತು ಪರೀಕ್ಷಾ ಸಮಯದಲ್ಲಿ ಶಿಸ್ತಿನಿಂದ ಪರೀಕ್ಷೆ ಬರೆದು ಪಾಸಾಗಿ ಹೊರಬರಬೇಕಾದರೆ ಸಾಕಷ್ಟು ಶ್ರಮಪಡುತ್ತಾರೆ ಆದರೆ ಮುಕ್ತವಿವಿಯ ಈ ಪರೀಕ್ಷೆಯನ್ನು ಕಂಡರೆ ನಾವೇಕೆ ಕಷ್ಟಪಡಬೇಕು ಹೀಗೆ ಸುಲಭ ಸುಲಲಿತವಾಗಿ ಬರೆಯಬಹುದಲ್ಲವೇ ಎನ್ನುವ ಭಾವನೆ ಬಂದೆ ಬರುತ್ತದೆ ಯಾಕೆಂದರೆ ಇಲ್ಲಿ ನಡೆಯುವ ಪರೀಕ್ಷೆಯನ್ನು ನೀವೊಮ್ಮೆ ಗಮನಿಸಿದರೆ ಪ್ರಾಥಮಿಕ ಹಂತದಲ್ಲಿಯು ಈ ಮಾದರಿಯಲ್ಲಿ ಪರೀಕ್ಷೆ ನಡೆಸಲಾರರು

ಆಗಿದ್ದಾದರು ಏನು?ಮೈಸೂರು ಮುಕ್ತ ವಿವಿಯಿಂದ ರಾಜ್ಯದ ಐದು ಕೇಂದ್ರದಲ್ಲಿ ಅಂದರೆ ಮೈಸೂರು,ಬೆಂಗಳುರು ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದ ಧಾರವಾಡ ಹಾಗೂ ಲಿಂಗಸಗೂರಿನಲ್ಲಿ ಮಾತ್ರ ಮುಕ್ತ ವಿವಿಯ ಬಿಎಡ್ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ ಅದರಂತೆ ಜು೨೪ರಿಂದ ಬಿಎಡ್ ಪರೀಕ್ಷೆಗಳು ಪಟ್ಟಣದ ವಾಣಿಜ್ಯ ಮಳಿಗೆಯೊಂದರಲ್ಲಿ ನಡೆಸುತ್ತಿರುವ ಕಲಿಕಾರ್ತಿ ಸಹಾಯ ಅಧ್ಯಯನ ಕೇಂದ್ರದಲ್ಲಿ ಪರೀಕ್ಷೆಗಳನ್ನು ನಡೆಯುತಿದ್ದು ಅದರಲ್ಲಿ ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಈಗಾಗಲೆ ಹಲವಾರು ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು ಪರೀಕ್ಷೆಗಳು ಮಾತ್ರ ಯಾರ ಅಂಜಿಕೆಯು ಇಲ್ಲದೆ ಯಥಾಸ್ಥಿತಿಯಲ್ಲಿ ನಡೆಯುತ್ತಿರುವುದು ದುರಂತವೇ ಸರಿ

ಪರೀಕ್ಷಾಕೇಂದ್ರ ಯಾವಮಾನದಂಡದ ಮೇಲೆ ನೀಡಿದರು?:ಹೌದು ಒಂದು ಪರೀಕ್ಷಾ ಕೇಂದ್ರ ನೀಡಬೇಕಾದರೆ ಕನಿಷ್ಟ ಮೂಲಭೂತ ಸೌಕರ್ಯಗಳು ಇರಲೇಬೇಕು ಆದರೆ ಪಟ್ಟಣದಲ್ಲಿ ನಡೆಸುತ್ತಿರುವ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಂಥಹ ಯಾವುದೆ ಸೌಕರ್ಯವಿಲ್ಲ ಪರೀಕ್ಷಾರ್ಥಿಗಳಿಗೆ ಕುಳಿತುಕೊಳ್ಳಲು ವಿಶಾಲವಾದ ಕೋಣೆಗಳಿಲ್ಲ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ ಸ್ಥಳಾವಕಾಶವಿಲ್ಲದೆ ಪರೀಕ್ಷಾರ್ಥಿಗಳು ಅಕ್ಕಪಕ್ಕ ಕುಳಿತು ರಾಜಾರೋಷವಾಗಿ ಚರ್ಚೆಮಾಡುತ್ತಾ ಗುಂಪುಗುAಪಾಗಿ ಕುಳಿತು ಬರೆಯುತ್ತಿರುವುದು ಕಂಡರೆ ಇಲ್ಲಿಗೆ ಪರೀಕ್ಷಾಕೇಂದ್ರವನ್ನು ಕೊಟ್ಟವರಾದರು ಎಂಥವರು ಎಂಬ ಭಾವನೆ ಬರದೆ ಇರದು ಅಲ್ಲದೆ ಸದರಿ ಪರೀಕ್ಷಾಕೇಂದ್ರದಲ್ಲಿ ಯಾವುದೆ ಪರೀಕ್ಷಾ ವೀಕ್ಷಕರು ಸ್ಥಳದಲ್ಲಿ ಇರುವುದೆ ಇಲ್ಲ ಯಾವುದೆ ಅಡೆತಡೆ ಇಲ್ಲದೆ ಪರೀಕ್ಷೆ ಸುಸೂತ್ರ!!
ಸ್ಥಳಿಯ ಶಿಕ್ಷಣ ಪ್ರೇಮಿಗಳು ಪೋಷಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸದರಿ ಪರೀಕ್ಷಾಕೇಂದ್ರದ ಮೇಲೆ ಸೂಕ್ತಕ್ರಮವಹಿಸಲು ಸಂಬಂಧಪಟ್ಟ ಇಲಾಖೆಗಳಾದ ಪರೀಕ್ಷಾ ಪ್ರಾಧಿಕಾರ,ಉನ್ನತ ಶಿಕ್ಷಣ ಇಲಾಖೆ ಮುಕ್ತ ವಿವಿಗೆ ಒತ್ತಾಯಿಸಿದ್ದಾರೆ ಇನ್ನು ಮುಂದಾದರು ಸಂಬಂಧಿಸಿದವರು ಸೂಕ್ತಕ್ರಮವಹಿಸಬಹುದೆ ಕಾದುನೋಡೋಣ?

*ಪರೀಕ್ಷಾ ವೀಕ್ಷಿಸಲು ಬಂದ ರಜೀಸ್ಟರ ಖಾಸಗಿ ಕಲ್ಯಾಣ ಮಂಟಪದಲಿ ಪ್ರತ್ಯಕ್ಷ-*

ಸದರಿ ಪರೀಕ್ಷಾ ಕೇಂದ್ರಕ್ಕೆ ವಿಜಯಪುರ ಮಹಿಳಾ ವಿವಿಯ ರಜೀಸ್ಟರ ಪರೀಕ್ಷೆ ವೀಕ್ಷಿಸಲು ಬಂದಿದ್ದನೆಂದ ಹೇಳಲಾಗುತಿದ್ದು ಅವರು ಪರೀಕ್ಷಾ ಕೇಂದ್ರಕ್ಕೆ ಬರದೆ ಖಾಸಗಿ ಕಲ್ಯಾಣಮಂಟಪದಲಿ ಪ್ರತ್ಯಕ್ಷನಾಗಿದ್ದು ಸಂಘಟನೆಯವರ ಪ್ರಶ್ನೆ ಕೇಳುತ್ತಲೆ ಕಾರುಹತ್ತಿ ತಿರುಗಿ ನೋಡದೆ ಹೋದನೆಂದು ಹೇಳಲಾಗುತ್ತಿದೆ

ಮಾಹಿತಿಗೆ ಸಿಗದ ಮುಕ್ತವಿವಿ ವಿಸಿ:ಪಟ್ಟಣದಲ್ಲಿ ನಿಯಮಗಳನ್ನು ಗಾಳಿಗೆತೂರಿ ನಡೆಸುತ್ತಿರುವ ಪರೀಕ್ಷೆಯ ಬಗೆಗೆ ಮುಕ್ತವಿವಿಯ ವಿಸಿಗೆ ಕರೆಮಾಡಿದರೆ ಒಂದುಸಲ ಪ್ರೆಸ್‌ನಲಿ ಇರುದಾಗಿ ಹೇಳಿದ ವಿಸಿ ನಂತರ ಕರೆ ಸ್ವೀಕರಿಸಲಿಲ್ಲ ಇದರ ಹಿಂದೆ ಏನಿದೆಯೋ ಒಳಮರ್ಮ ಬಲ್ಲವರಾರು?

WhatsApp Group Join Now
Telegram Group Join Now
Share This Article