ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ,ಕುಕ್ಕೆಶ್ರೀ ಖಾಸಗಿ ಬಸ್ ಹತ್ತುವ ಮುನ್ನ ಎಚ್ಚರ ಗ್ರಾಹಕರೆ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಿಂದ ಬೆಂಗಳೂರಿಗೆ ಪ್ರತಿನಿತ್ಯ ಹಲವಾರು ಸ್ಲೀಪರ್ ಬಸ್ ಗಳು ಹೋಗುತ್ತಿದ್ದು ಅದರಲ್ಲಿ ಕುಕ್ಕೆಶ್ರೀ ಬಸ್ ಗಳು ಇತ್ತೀಚೆಗೆ ಎಲ್ಲೆಂದರಲ್ಲಿ ಕೆಟ್ಟುನಿಂತು ಅಪರಾತ್ರಿಯಲ್ಲಿ ಗ್ರಾಹಕರು ತೊಂದರೆಯನ್ನು ಅನುಭವಿಸುವಂತಾಗುತ್ತದೆ ಅದಕ್ಕಾಗಿ ಕುಕ್ಕೆಶ್ರೀ ಬಸ್ ಗಳನ್ನು ಹತ್ತುವ ಮುನ್ನ ಪ್ರಯಾಣಿಕರೆ ಎಚ್ಚರ ಎಚ್ಚರ!!
ದಿನಾಂಕ ೦೪-೦೩-೨೦೨೬ರಂದು ಬೆಂಗಳೂರಿಗೆ ತೆರಳಲು ಗ್ರಾಹಕರೊಬ್ಬರು ಟಿಕೇಟ್ ಬುಕ್ ಮಾಡಿದ್ದು ಬಸ್ ನಂಬರು ಕೆಎ-೫೧ ಎಬಿ-೩೫೭೬ ಸೀಟ್ ನಂಬರ ೨ಎಲ್ ಆಗಿತ್ತು ಸದರಿ ಬಸ್ ಲಿಂಗಸಗೂರಿನಿಂದ ೯ಗಂಟೆಗೆ ಬಿಡುವ ಬಸ್ ಆಗಿತ್ತು ಅದು ಗಂಗಾವತಿ ಹತ್ತಿರ ಹೋಗುವಷ್ಟರಲ್ಲಿ ಸುಮಾರು ೧೨ ಗಂಟೆ ಸಮಯ ಅಂತಹ ಅಪರಾತ್ರಿಯಲ್ಲಿ ಬಸ್ ಹೋಗುವುದಿಲ್ಲ ತಾಂತ್ರಿಕ ತೊಂದರೆಯಾಗಿದೆ ಎಂದು ಬಸ್ ನಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ ಅದರಲ್ಲಿ ಆಸ್ಪತ್ರೆಗೆ ತೆರಳುವ ಅನಾರೋಗ್ಯವಂತರು ಕಾಲಿನ ತೊಂದರೆ ಪಡುವ ರೋಗಿಗಳು ಇದ್ದಾರೆ ನಿಮಗೆ ಬೇರೆ ಬಸ್ ನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಸ್ ನಿಂದ ಎಲ್ಲರನ್ನು ಇಳಿಸಿ ಬೇರೆ ಬೇರೆ ಬಸ್ ಗಳಲ್ಲಿ ಎಲ್ಲಿ ಸೀಟು ಸಿಗುತ್ತವೆಯೊ ಅಲ್ಲಲ್ಲಿ ಕೂಡಿಸಿ ಕಳಿಸಿದ್ದಾರೆ ಗ್ರಾಹಕರು ಬುಕ್ ಮಾಡಿದ ಸೀಟುಗಳೆ ಬೇರೆ ಇವರು ಕೊಡುವ ಸೀಟುಗಳೇ ಬೇರೆ ಅಲ್ಲದೆ ಕಾಲಿನ ತೊಂದರೆ ಇರುವ ಪೇಷಂಟನ್ನು ಒಂದು ಬಸ್ಸಿನಿಂದ ಇನ್ನೊಂದು ಬಸ ಗೆ ಬಹಳ ತೊಂದರೆ ತೆಗೆದುಕೊಂಡು ಬಸದಲಾಯಿಸಲಾಯಿತು
ಹಾಗೆಯೆ ಕೆಲದಿನಗಳ ಹಿಂದೆ ಇದೆ ಕುಕ್ಕೆಶ್ರೀ ಬಸ್ ಬೆಂಗಳೂರಿನಿಂದ ಲಿಂಗಸಗೂರಿಗೆ ಬರುವಾಗ ಬೆಂಗಳೂರಿನ ಹೊರವಲಯದಲ್ಲಿ ತಾಂತ್ರಿಕ ದೋಷದಿಂದ ನಿಂತಿತು ಬಸ್ ಹತ್ತುಗಂಟೆಗೆ ನಿಂತರು ೧೨ಗಂಟೆಯ ನಂತರ ಮೆಕ್ಯಾನಿಕ್ ಬಂದು ರಿಪೇರಿ ಮಾಡಬೇಕಾದರೆ ರಾತ್ರಿ ಒಮದುಗಂಟೆ ಮೇಲಾಯಿತು ದೂರು ನೀಡುವ ನಂಬರಿಗೆ ಕಾಲ್ ಮಾಡಿದರೆ ಸರಿಯಾದ ಏನೊಂದು ಉತ್ತರವಿಲ್ಲ
ಬಸ್ ಗಳು ಸರಿಯಾದ ಸ್ವಚ್ಚತೆಯನ್ನು ಕಾಪಾಡುವುದಿಲ್ಲ ಕೆಲವರು ಧೂಮಪಾನ ಮಾಡಿದರು ಯಾರು ಕೇಳುವುದಿಲ್ಲ ಗ್ರಾಹಕರ ದೂರುಗಳಿಗೆ ಮೌನವೇ ಉತ್ತರವಾಗಿರುತ್ತವೆ ಹೀಗೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಮತ್ತು ಪ್ರಯಾಣಿಕರಿಗೆ ತೊಂದರೆ ನೀಡುವ ಕುಕ್ಕೆಶ್ರೀ ಬಸ್ ಗಳನ್ನು ಹತ್ತುವ ಮುನ್ನ ಗ್ರಾಹಕರೆ ಎಚ್ಚರ! ಎಚ್ಚರ!!


