ಬಯ್ಯಾಪುರ ಕಾಂಗ್ರೆಸ್ ಭರಾಟೆಯಲಿ, ಹೂಲಿಗೇರಿ ಕಾಂಗ್ರೆಸ್ ತೇಲುತ್ತಾ..? ಇಲ್ಲಾ ಮುಳುಗುತ್ತಾ..?

Laxman Bariker
ಬಯ್ಯಾಪುರ ಕಾಂಗ್ರೆಸ್ ಭರಾಟೆಯಲಿ, ಹೂಲಿಗೇರಿ ಕಾಂಗ್ರೆಸ್ ತೇಲುತ್ತಾ..? ಇಲ್ಲಾ ಮುಳುಗುತ್ತಾ..?
WhatsApp Group Join Now
Telegram Group Join Now

ಬಯ್ಯಾಪುರ ಕಾಂಗ್ರೆಸ್ ಭರಾಟೆಯಲಿ, ಹೂಲಿಗೇರಿ ಕಾಂಗ್ರೆಸ್ ತೇಲುತ್ತಾ..? ಇಲ್ಲಾ ಮುಳುಗುತ್ತಾ..?

ಕಲ್ಯಾಣ ಕರ್ನಾಟಕ ವಾರ್ತೆ

(ಲಕ್ಷ್ಮಣ ಬಾರಿಕೇರ್)
ಲಿಂಗಸಗೂರು:ಕ್ಷೇತ್ರದ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೆ ಗೌಜು ಗದ್ದಲಗಳಿಲ್ಲ ಆಡಳಿತ ಪಕ್ಷ ವಿರೋಧ ಪಕ್ಷಗಳು ಮೌನವಾಗಿಯೆ ಮುನ್ನಡೆಯುತಿದ್ದು ರಾಜಕಾರಣ ಸದ್ಯ ಮೌನವಾದಂತೆ ಕಾಣುತ್ತಿದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪರ ವಿರೋಧದ ಭರಾಟೆಗಳು ನಡೆದಿದ್ದು ಇದರಲ್ಲಿ ಯಾರ ಬಲವಾಗುತ್ತೋ ಎಂಬುದನ್ನು ಮತದಾರ ಮಾತ್ರ ಬಹಳ ಕುತುಹಲದಿಂದ ಮೌನವಾಗಿಯೇ ವೀಕ್ಷಿಸುತ್ತಿದ್ದಾನೆ
ಲಿಂಗಸಗೂರು ತಾಲೂಕಿನಲ್ಲಿ ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದು ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಇತ್ತ ಕಾಂಗ್ರೆಸ್ ಕ್ಷೇತ್ರದಲ್ಲಿ ವಿರೋಧ ಪಕ್ಷವಾಗಿದ್ದರು ಯಾವುದೆ ವಿರೋಧ ಮಾಡದಂತೆ ಮುನ್ನಡೆಯುತ್ತಿದೆ ಇನ್ನು ಜೆಡಿಎಸ್ ಒಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ
ಕ್ಷೇತ್ರದಲ್ಲಿ ಬಿಜೆಪಿ ಆಡಳಿತದಲಿದ್ದು ಕಾಂಗ್ರೆಸ್ ವಿರೋಧದಲ್ಲಿದ್ದರು ಅವೆರಡರ ನಡುವೆ ಯಾವುದೆ ಜಿದ್ದಾಜಿದ್ದಿ ಕಂಡು ಬರುತ್ತಿಲ್ಲ ಇಲ್ಲಿ ಕಂಡು ಬರುತ್ತಿರುವುದು ಕಾಂಗ್ರೆಸ್ ವರ್ಚಸ್ ಕಾಂಗ್ರೆಸ್ ಎನ್ನುವಂತಾಗಿದ್ದು ಇಲ್ಲಿ ಮಾಜಿ ಶಾಸಕ ಡಿ ಎಸ್ ಹೂಲಿಗೇರಿ ಕಾಂಗ್ರೆಸ್ ಹಾಗೂ ಬಯ್ಯಾಪುರ ಕಾಂಗ್ರೆಸ್ ಎನ್ನುವಂತಾಗಿದ್ದು ಇವರಿಬ್ಬರ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದ್ದು ನಾ ಮೇಲು ತಾಮೇಲು ಎನ್ನುವಂತೆ ಪ್ರೆಸ್ ಮೀಟ್ ಮಾಡುವುದು ಹೇಳಿಕೆಗಳನ್ನು ನೀಡುವುದು ನಡೆಸುತ್ತಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ ಎನ್ನುವ ಆರೋಪಗಳು ತಾರಕಕ್ಕೇರುತ್ತಿದ್ದು ಎರಡು ಕಡೆಯೂ ಸೆಡ್ಡು ಹೊಡೆದು ಬಹಿರಂಗ ಚರ್ಚೆಗೆ ಆಹ್ವಾನ ನಿಡುತ್ತಿವೇ ಆದರೆ ಇದುವರೆಗೂ ಬಹಿರಂಗ ಚರ್ಚೆಗೆ ಮಾತ್ರ ಬಂದಿಲ್ಲ ಎನ್ನುವುದೆ ಸೋಜಿಗ
ಮಾಜಿ ಶಾಸಕ ಡಿ ಎಸ್ ಹೂಲಿಗೇರಿಯವರು ತಮ್ಮ ಚುನಾವಣೆಯಲ್ಲಿ ಹೆಚ್ಚು ಶ್ರಮವಹಿಸಿ ಗೆಲ್ಲಲು ರಣರಂಗ ಸಜ್ಜುಗೊಳಿಸಿದರು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಆಗಿರುವುದರಿಂದ ಅಲ್ಲದೆ ಹೂಲಿಗೇರಿ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದು ತನ್ನದೆಯಾದ ಪ್ರಭಾವವನ್ನು ಹೊಮದಿದ್ದು ಕಾಂಗ್ರೆಸ್ ಪಕ್ಷದ ತಾಲೂಕಾಧ್ಯಕ್ಷರನ್ನಾಗಿ ಗೋವಿಂದನಾಯಕರನ್ನು ನೇಮಕವಾಗಲು ಶ್ರಮಿಸಿದರು ಇದರಿಂದ ಈ ಹಿಂದೆ ಅಧ್ಯಕ್ಷರಾಗಿ ಭೂಪನಗೌಡ ಪಾಟೀಲ್ ಹಾಗೂ ಅವರ ತಂಡ ಸಹಜವಾಗಿಯೆ ಹೂಲಿಗೇರಿಯಿಂದ ಅಂತರವನ್ನು ಕಾಯ್ದುಕೊಂಡಿತು ಅಲ್ಲದೆ ಹೂಲಿಗೇರಿ ತಾಲೂಕಾ ಮಟ್ಟದ ಗ್ಯಾರಂಟಿ ಸಮಿತಿಗೆ ನಾಮನಿರ್ದೇಶನ, ಆರಾಧನಾಸಮಿತಿ,ಭೂನ್ಯಾಯಮಂಡಳಿ, ಕೆಡಿಪಿ ಸಭೆಗೆ ತನ್ನ ಹಿಂಬಾಲಕರಿಗೆ ನಾಮನಿರ್ದೇಶನ ತಂದರು ಅತ್ತ ಒಳಗೊಳಗೆ ಭಿನ್ನತೆಯನ್ನು ಕಾಯ್ದುಕೊಂಡಿದ್ದ ಬಯ್ಯಾಪುರ ಬಣವು ಗ್ಯಾರಂಟಿ ಯೋಜನೆಯ ಜಿಲ್ಲಾ ಸಮಿತಿಗೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷತೆ ಸೇರಿ ಹಲವು ನಾಮನಿರ್ದೇಶನಗಳನ್ನು ತಂದರು
ಹೀಗೆ ಪಕ್ಷದಲ್ಲಿಯೆ ಭಿನ್ನತೆ ತೋರಿ ಬಯ್ಯಾಪುರವರು ಕಾಂಗ್ರೆಸ್ ಗೆ ಬೆಂಬಲ ಮಾಡಿಲ್ಲ ಅದಕ್ಕಾಗಿ ನಾನು ಸೋಲಬೇಕಾಯಿತೆಂದು ಹೂಲಿಗೇರಿ ಹೇಳಿದರೆ ನಾವು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ ಬೇಕಾದರೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದ ಪಡಿಸಿ ನಾವು ಸಿದ್ದರಿದ್ದೇವೆಂದು ಬಯ್ಯಾಪುರ ಗುಡುಗಿದರೆ ಇತ್ತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗೋವಿಂದನಾಯಕ ನಾನು ಬೇರೆ ಪಕ್ಷದಿಂದ ಬಂದಿದ್ದು ನಿಜ ಆದರೆ ಯಾವ ಪಕ್ಷದಲ್ಲಿ ಇರುತ್ತೇವೆ ಆ ಪಕ್ಷ ನಮ್ಮ ತಾಯಿ ಇದ್ದಂತೆ ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ನೀವು ಮಾಡಿದ್ದೀರಿ ನಿಮ್ಮ ಪಿಎ ನನ್ನು ರಾಜೀನಾಮೆ ಕೊಡಿಸಿ ರುದ್ರಯ್ಯನವರ ಬೆಂಬಲಕ್ಕೆ ಕಳಿಸಿದ್ದೀರಿ ಎಮದು ಆರೋಪಿಸುತ್ತಾರೆ
ಹೀಗೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯುತಿದ್ದು ಇದು ತಾರಕಕ್ಕೆ ಏರಿದ್ದು ಇತ್ತೀಚೆಗೆ ಬಯ್ಯಾಪುರ ಬಣವು ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಿ ತನ್ನ ತೋಳ್ಬಲವನ್ನು ಪ್ರದರ್ಶನ ಮಾಡಿತು ಮತ್ತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದೆ
ಆದರೆ ಇದೆಲ್ಲವನ್ನು ಕೇಳಿಸಿಕೊಂಡಿರುವ ಡಿ ಎಸ್ ಹೂಲಿಗೇರಿ ಇದುವರೆಗೂ ತುಟಿಪಿಟಕ್ ಎಂದಿಲ್ಲ
ಹೀಗೆ ಮೌನವಾಗಿದ್ದರೆ ಬಯ್ಯಾಪುರ ಬಣ ಭರಾಟೆಯಿಂದ ಮುನ್ನಡೆಯಬಹುದೆ? ಅಥವ ಅದಕ್ಕೆ ತಡೆಹಾಕಿ ನಾವು ಇದ್ದೇವೆ ಎಂದು ಹೂಲಿಗೇರಿ ಉತ್ತರ ಕೊಡುತ್ತಾರೆಯೋ ಈಗಾಗಲೆ ಬಯ್ಯಾಪುರ ಬಣದಿಂದ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಹೊಸಬರ ಆಯ್ಕೆ ಸೂಚನೆಗಳು ನಡೆದಿವೆ ಎನ್ನಲಾಗುತ್ತಿದೆ ಜೊತೆಗೆ ಎಪಿಎಸಿಯ ಅಧ್ಯಕ್ಷರ ಬದಲಾವಣೆಯು ಸನಿಹದಲ್ಲಿ ಎನ್ನುವ ಮಾತುಗಳು ಕೇಳಿಬರುತ್ತಿವೆ
ಇದೆಲ್ಲವನ್ನು ಗಮನಿಸಿದರೆ ಹೂಲಿಗೇರಿ ಬಣ, ಬಯ್ಯಾಪುರ ಬಣದಲ್ಲಿ ತೇಲುತ್ತಾ? ಅಥವ ಮುಳುಗುತ್ತಾ? ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ

WhatsApp Group Join Now
Telegram Group Join Now
Share This Article