ಸರಕಾರದ ಯೋಜನೆಗಳ ಸದುಪಯೋಗ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು-ಬಾಬುರೆಡ್ಡಿ ಮುನ್ನೂರು

Laxman Bariker
ಸರಕಾರದ ಯೋಜನೆಗಳ ಸದುಪಯೋಗ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು-ಬಾಬುರೆಡ್ಡಿ ಮುನ್ನೂರು
WhatsApp Group Join Now
Telegram Group Join Now

ಸರಕಾರದ ಯೋಜನೆಗಳ ಸದುಪಯೋಗ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು-ಬಾಬುರೆಡ್ಡಿ ಮುನ್ನೂರು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಸರಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಪುರಸಭೆಯ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಹೇಳಿದರು

ಅವರು ಪಟ್ಟಣದಲಿ ನಿವೃತ್ತ ನೌಕರರ ಸಂಘ,ಸ್ತಿçÃಶಕ್ತಿ ಒಕ್ಕೂಟ ನಮ್ಮ ಕರವೇ ಸೇರಿದಂತೆ ಸಂಘಟನೆಗಳಿAದ ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿ ನಂತರ ಮಾತನಾಡಿದ ಅವರು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಸದ್ಭಳಕೆಯನ್ನು ಮಾಡಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದುವುರ ಜೊತೆಗೆ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಸಾರ್ವಜನಿಕರು ಸಂಘಟನೆಗಳು ತಮ್ಮ ವಾರ್ಡುಗಳಲ್ಲಿ ಯಾವುದೆ ಸಮಸ್ಯೆಗಳು ಇದ್ದರೆ ಅವುಗಳನ್ನು ನಮ್ಮ ಗಮನಕ್ಕೆ ತನ್ನಿ ಸಾಧ್ಯವಾದಷ್ಟು ಸರಿಪಡಿಸಲು ಪ್ರಯತ್ನಿಸಲಾಗುವುದು ತಮ್ಮ ಸಹಾಯ ಸಹಕಾರ ಇರಲಿ ಎಂದರು
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಅಮರೇಶಪ್ಪ ಹೂನೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಾ ನಮ್ಮವ ವಾರ್ಡಿನಲ್ಲಿ ದೀಪದ ಕೊರತೆ ರಸ್ತೆ ಸರಿಪಡಿಸಿವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅಧ್ಯಕ್ಷರು ಗಮನಹರಿಸಬೇಕೆಂದರು
ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶರಣಮ್ಮ ಹೂನೂರು ಮಾತನಾಡಿ ಮಹಿಳೆಯರು ಒಂದೆಡೆ ಸೇರಿ ಸಭೇ ಸಮಾರಂಭ ಮಾಡಲು ಸ್ತೀಶಕ್ತಿ ಭವನದ ಅವಶ್ಯಕತೆ ಇದ್ದು ಅದಕ್ಕೆ ಜಾಗೆ ಮಂಜೂರಿಯಾಗಿದೆ ಹಣವು ಮಂಜೂರಿಯಾಗಿದೆ ಕಾಐð ವಿಳಂಬವಾಗಿದೆ ತಮ್ಮ ಅವಧಿಯಲಿ ಚಾಲನೆ ದೊರೆಯಲಿ ಎಂದರು
ಬಾಬು ರೆಡ್ಡಿ ಮುನ್ನುರು ಕಿರಿಯ ವಯಸಿನಲಿ ಹಿರಿಯ ಸ್ಥಾನ ದೊರಕಿದ್ದು ಅವರು ನಮ್ಮ ವಾರ್ಡಿನವರೆ ಆಗಿರುವುದರಿಂದ ಸಂತಸವಾಗಿದೆ ಉತ್ತಮ ಕೆಲಸ ಕಾರ್ಯ ಮಾಡುವ ಮೂಲಕ ರಾಜಕೀಯವಾಗಿ ಬೆಳೆಯಲಿ ಎಂದು ಮಕ್ಕಳ ಒಕ್ಕೂಟದ ಅಧ್ಯಕ್ಷೆ ಜೋತಿ ಸುಂಕದ ಆಶಯ ವ್ಯಕ್ತಪಡಿಸಿದರು ಜಿ,ಪಂ ಮಾಜಿ ಅಧ್ಯಕ್ಷೆ ಲಲಿತಮ್ಮ ನಮ್ಮ ಕರವೇ ಅಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು ವೇದಿಕೆಯಲ್ಲಿದ್ದರು
ಈ ಸಂದರ್ಭದಲ್ಲಿ ಶರಣಬಸವರಾಜ ನಾಡಗೌಡ, ಹನಮಂತಪ್ಪ ಮೇಟಿ, ಯಲ್ಲಪ್ಪ, ಹನಮೇಶ ರಡ್ಡಿ, ಜಯಸಿಂಗ್ ಠಾಕೂರು, ರಾಚಪ್ಪ ಬಡ್ಡಿ, ಸಿದ್ರಾಮಪ್ಪ ಕಾಡ್ಲೂರು,ಚನ್ನಮ್ಮ, ವಿಜಯಲಕ್ಷಿö್ಮÃ, ಬಸಮ್ಮ, ವನಮಾಲಾ, ಗಿರಿಜಾ ರೋಹಿಣಿ ಸವಿತಾಅಯ್ಯಮ್ಮ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article