ಭೀಕರ ರಸ್ತೆ ಅಪಘಾತ :ಲಿಂಗಸಗೂರಿನ ಬಿ ಎ ನಂದಿಕೋಲ್ ಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು

Laxman Bariker
ಭೀಕರ ರಸ್ತೆ ಅಪಘಾತ :ಲಿಂಗಸಗೂರಿನ ಬಿ ಎ ನಂದಿಕೋಲ್ ಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು
WhatsApp Group Join Now
Telegram Group Join Now

ಮಹಬೂಬ್ ನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ :ಲಿಂಗಸಗೂರಿನ ಬಿ ಎ ನಂದಿಕೋಲ್ ಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ.


ಎರ್ಟಿಗಾ ಕಾರು ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಹೇಬೂಬು ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅವರಲ್ಲಿ ಮಲ್ಲಣ್ಣ ವಾರದ,ಹಾಗೂ ಚನ್ನಯ್ಯ ಕಾಳಹಸ್ತಿಮಠ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಯಲ್ಲಿ ಕರ್ನಾಟಕದ ಲಿಂಗಸೂಗೂರು ನಿವಾಸಿಗಳಾದ ಆರು ಮಂದಿ ಕೊಲ್ಲಿ ಪಾಕಕ್ಕೆ ತೆರಳಿ ಹಿಂದಿರುಗುವ ಮಾರ್ಗದಲ್ಲಿ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎರ್ಟಿಗಾ ಕಾರು ಡ್ರೈವರ್‌ನ ಅತಿವೇಗ ಮತ್ತು ಅಜಾಗ್ರತೆಯೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಈ ಅಪಘಾತದಲ್ಲಿ ಜಂಗಮಮೂರ್ತಿ ಮತ್ತು ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಬಸವರಾಜ್ ನಂದಿಕೋಲಮಠ, ಜಂಗಮಮೂರ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚಿನ್ನಯ್ಯ ತಾತ, ಮಲ್ಲಿಕಾರ್ಜುನ್, , ಅಮರೇಶ್ ಮತ್ತು ಮಲ್ಲಣ್ಣ ಅವರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article