ಖಾಸಗಿಶಾಲಾ ಮುಖ್ಯಸ್ಥರೊಂದಿಗೆ ಸಭೆ
ನಿಷ್ಕಾಳಜಿವಹಿಸಿದರೆ ನಿರ್ದಾಕ್ಷಿಣ್ಯ ಕ್ರಮ ಸಹಾಯಕ ಆಯುಕ್ತರ ಖಡಕ್ ಎಚ್ಚರಿಕೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಕ್ಕಳನ್ನು ತಮ್ಮ ವಾಹನಗಳಲ್ಲಿ ಶಾಲೆಗೆ ಕರೆತರುವಾಗ ಮತ್ತು ಮರಳಿಸುವಾಗ ನಿಷ್ಕಾಳಜಿವಹಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರಾದ ಬಸವಣ್ಯಪ್ಪ ಕಲಶಟ್ಟಿಯವರು ಹೇಳಿದರು
ಅವರು ಪಟ್ಟಣದ ತಾಲೂಕಾ ಪಮಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಾ ಇತ್ತೀಚೆಗೆ ಮಾನ್ವಿಯ ಹತ್ತಿರ ನಡೆದ ಶಾಲಾವಾಹನದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮರಣಹೊಂದಿದ್ದು ಅದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ ಜಿಲ್ಲಾಧಿಕಾರಿಗಳು ಬಹಳ ಕಟ್ಟುನಿಟ್ಟಿನ ಆದೇಶ ಮಾಡಿದ್ದು ಅದರಂತೆ ಖಾಸಗಿ ಶಾಲೆಯವರು ತಮ್ಮ ವಾಹನದ ಸುರಕ್ಷತೆ ಹಾಗೂ ಚಾಲಕನ ಪೂರ್ವಪರ ತಿಳಿದುಕೊಂಡು ನೇಮಕ ಮಾಡಿಕೊಳ್ಳಬೇಕು ವಾಹನವು ಎಲ್ಲಾ ರೀತಿಯಿಂದ ಸುರಕ್ಷಿತವಾಗಿರಬೇಕು ವಾಹನ ಕಾಯ್ದೆ ಪ್ರಕಾರ ಸುರಕ್ಷಿತಾ ಕ್ರಮಗಳು ವಹಿಸಬೇಕು ಚಾಲಕರನ್ನು ನೇಮಕ ಮಾಡುವಾಗ ಆತನ ಮೇಲೆ ಪೊಲಿಸ್ ಸ್ಟೇಷನ್ ನಲ್ಲಿ ಗಂಭೀರ ಪ್ರಕರಣಗಳಿವೆಯಾ ಅಥವ ಕುಡಿದು ವಾಹನ ಚಲಾಯಿಸುತ್ತಾನೆಯೆ ಎಂದು ತಿಳಿಸುಕೊಳ್ಳಬೇಕು ಸಮವಸ್ತç ಇರಬೇಕು ಚಾಲಕರ ಜೊತೆಗೆ ಒಬ್ಬ ಸಹಾಯಕರು ಇರಬೇಕು ವಾಹನ ೪೦ ಕಿಮೀ ವೇಗದಲ್ಲಿ ಚಲಿಸಬೇಕು ಹತ್ತುವಾಗ ಮತ್ತು ಇಳಿಯುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು
ಶಾಲಾ ಹಂತದಲ್ಲಿ ಸುರಕ್ಷಿತಾ ಸಮಿತಿಯನ್ನು ನೇಮಕ ಮಾಡಬೇಕು ಅದು ಆಗಿಂದಾಗ್ಗೆ ಸಭೆ ನಡೆಸಿ ಕುಂದು ಕೊರತೆಗಳನ್ನು ಚರ್ಚಿಸಬೇಕು ಇನ್ನೊಂದು ವಾರದಲ್ಲಿ ಅನುದಾನ,ಅನುದಾನ ರಹಿತ ಎಲ್ಲಾ ಖಾಸಗಿ ಶಾಲೆಯ ಮುಖ್ಯಸ್ಥರು ಸುರಕ್ಷತೆಯ ಬಗೆಗೆ ತೆಗೆದುಕೊಂಡ ಎಲ್ಲಾ ಮಾಹಿತಿಯನ್ನು ನೀಡಬೇಕು ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಿದರು
ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ ಮಾತನಾಡಿ ಖಾಸಗಿ ಶಾಲಾ ಮುಖ್ಯಸ್ಥರು ಸುರಕ್ಷತೆಯ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ಇಲ್ಲವಾದರೆ ಕ್ರಮಕೈಗೊಳ್ಳಲಾಗುವುದು ಎಂದರು
ಬಿಇಓ ಹುಂಬಣ್ಣ ರಾಠೋಡ ಮಾತನಾಡಿ ತಾಲೂಕಿನಲ್ಲಿ ೧೧೧ ಅನುದಾನ ರಹಿತ ೨೧ ಅನುದಾನ ಸಹಿತ ಖಾಸಗಿ ಶಾಲೆಗಳು ಇದ್ದು ೪೮ ವಾಹನಗಳು ಇರುತ್ತವೆ ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವುದು ಅಗತ್ಯವಾಗಿರುತ್ತದೆ ಎಂದರು
ತಹಸೀಲ್ದಾರ ಶಂಶಾಲಂ, ತಾ,ಪಂ ಕಾಐðನಿರ್ವಾಹಕ ಅಧಿಕಾರಿ ಉಮೇಶ ಆರ್ ಟಿ ಓ ವಿನಯ್ಯಾ ಸಿಪಿಐ ಪುಂಡಲಿಕ ಪಟತ್ತರ, ವಸಗೇರಪ್ಪ ಸೇರಿದಂತೆ ಇದ್ದರು