ವೈದ್ಯರ ಕಳ್ಳಾಟ ಆಪರೇಷನ್ ಮಾಡದೆ ಲಕ್ಷಾಂತರಹಣ ವಂಚನೆ,ಆರೋಪ,ಮತ್ತೊಂದು ಆಸ್ಪತ್ರೆಯಲ್ಲಿ ಹಗರಣ ಬಯಲು!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರೋಗಿಗೆ ಬೆನ್ನುಮೂಳೆಯ ಸಮಸ್ಯೆ ಇದೆ ಅದಕ್ಕೆ ಆಪರೇಷನ್ ಮಾಡಬೇಕು ಎಂದು ಹೇಳಿ ವೈದ್ಯರು ಆಪರೇಷನ್ ನಾಟಕವಾಡಿ ಲಕ್ಷಾಂತರ ಹಣವನ್ನು ಪಡೆದು ವಂಚಿಸಿದ್ದು ಗುಣಮುಖವಾಗದ ರೋಗಿ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ವೈದ್ಯರ ಹಗರಣ ಬಯಲಾಗಿದೆ ಎಂದು ಚಿಕಿತ್ಸೆ ಪಡೆದ ಸಂಗನಗೌಡ ಪಾಟೀಲ್ ಹಾಗೂ ರೈತಸಂಘದ ಅಧ್ಯಕ್ಷರುಗಳು ತಿಳಸಿದ್ದಾರೆ
ಏನಿದು ಪ್ರಕರಣ:ತಾಲೂಕಿನ ಕನಸಾವಿ ಗ್ರಾಮದ ಸಂಗನಗೌಡ ಪೊಲೀಸ್ ಪಾಟೀಲ್ ಎನ್ನುವವರು ಬೆನ್ನುಮೂಳೆ ಸಮಸ್ಯೆಯಿಂದ ಬಳುತ್ತಿದ್ದರು ಅವರು ನವಂಬರ ೨೦೨೨ರಂದು ಬಾಗಲಕೋಟೆಯ ಆಶಿರ್ವಾದ ಆಸ್ಪತ್ರೆಯಲ್ಲಿ ಡಾ ಶ್ರೀನಿವಾಸ ಹ ಓದುಗೌಡರ ಎನ್ನುವವರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಅವರಿಗೆ ಸಮಸ್ಯೆ ಇದೆ ಎನ್ನುವುದನ್ನು ಬಾಗಲಕೋಟೆಯ ಸರಕಾರಿ ಆಸ್ಪತ್ರೆಗಳು ಖಚಿತ ಪಡಿಸಿವೆ ಅದನ್ನು ಗಮನಿಸಿದ ವೈದ್ಯರು ಇದಕ್ಕೆ ಬೆನ್ನುಮೂಳೆಯ ಸರಿಪಡಿಸಬೇಕು ಅದಕ್ಕೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ ಅದರಂತೆ ರೋಗಿಯು ಆಪರೇಷನ್ ಗೆ ಒಪ್ಪಿದ್ದಾನೆ ೧೮-೧೧-೨೦೨೨ರಲ್ಲಿ ದಾಖಲಾಗಿದ್ದಾನೆ ೨೧,೧೧,೨೦೨೨ರಂದು ರೋಗಿಯನ್ನು ಬಿಡುಗಡೆ ಮಾಡಲಾಗಿದೆ ಬೆನ್ನು ಹುರಿ ಸರ್ಜರಿ ಮಾಡಿ ಸ್ಪಿçಂಗ್ ಹಾಗೂ ಸಬ್ ಬೋಲ್ಟ ಹಾಕಲಾಗಿದೆ ಎಂದು ತಿಳಿಸಿದ್ದಾರೆ ಸದರಿ ಆಪರೇಷನ್ ಗಾಗಿ ಸರಕಾರದಿಂದ ಹಣಪಡೆದಿದ್ದಾರೆ ಮತ್ತು ರೋಗಿಯಿಂದಲೂ ಸಾಕಷ್ಟು ಹಣ ಖರ್ಚು ಮಾಡಿಸಿದ್ದಾರೆ ಪುನಃ ಪುನಃ ಚಿಕಿತ್ಸೆಗಾಗಿ ಸಾಕಷ್ಟು ಸಲ ಬಾಗಲಕೋಟೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ ಆದರೂ ರೋಗಿಗೆ ಯಾವುದೆ ರೀತಿಯ ಗುಣಮುಖ ಕಂಡುಬAದಿಲ್ಲ ಆಗ ಅನಿವಾರ್ಯವಾಗಿ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಹೋದಾಗ ಇವರಿಗೆ ಯಾವುದೆ ರೀತಿಯ ಸರ್ಜರಿಯನ್ನು ಮಾಡಿರುವುದಿಲ್ಲ ಆಪರೇಷನ್ ಮಾಡಬೇಕೆಂದು ತಿಳಿಸಿದ್ದಾರೆ ಆಗ ಬಾಗಲಕೋಟೆಯ ವೈದ್ಯರ ಕಳ್ಳಾಟ ಹೊರಬಿದ್ದಿದೆ
ರೋಗಿ ಸಂಗನಗೌಡ ಪಾಟೀಲ್ ಬಾಗಲಕೋಟೆಗೆ ಪ್ರತಿತಿಂಗಳು ತಿರುಗಾಡಿ ಚಿಕಿತ್ಸೆಯ ನೆಪದಲ್ಲಿ ೫ರಿಂದ ೬ಲಕ್ಷ ಅವರ ಕುಟುಂಬ ಖರ್ಚು ಮಾಡಿದೆ ಅಲ್ಲದೆ ಸರಕಾರದಿಂದ ಬರುವ ಹಣವನ್ನು ಪಡೆದು ವಂಚಿಸಲಾಗಿದೆ ಎಂದರು ಆರೋಪಿಸಲಾಗುತ್ತಿದೆ
ಮತ್ತೊಬ್ಬ ರೋಗಿಗೂ ಇದೆಗತಿ: ಈ ಪ್ರಕರಣ ಹೊರಬರುತ್ತಿರುವಂತೆ ಅದೆ ಕನಸಾವಿ ಗ್ರಾಮದ ಮತ್ತೊಬ್ಬ ವ್ಯಕ್ತಿ ಶರಣಪ್ಪ ಎಂಬುವವರಿಗೂ ಬಾಗಲಕೋಟೆಯ ಆಶಿರ್ವಾದ ಆಸ್ಪತ್ರೆಯಲ್ಲಿ ಇದೆ ರೀತಿ ಚಿಕಿತ್ಸೆ ನೀಡಿ ವಂಚಿಸಲಾಗಿದ್ದು ಆ ವ್ಯಕ್ತಿಯ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿದೆ ಎನ್ನಲಾಗುತ್ತಿದೆ
ವೈದ್ಯ ಬರುವುದನ್ನು ಕಾದುಕುಳಿತ ರೈತಸಂಘ: ಸದರಿ ಡಾ,ಶ್ರೀನಿವಾಸ ಓದುಗೌಡರ ಚಿಕಿತ್ಸೆ ನೀಡಲು ಲಿಂಗಸಗೂರಿನ ಆಸ್ಪತ್ರೆಯೊಂದಕ್ಕೆ ಬರುತ್ತಿರುವದಾಗಿ ತಿಳಿದು ರೈತಸಂಘಟನೆಯವರು ಮುತ್ತಿಗೆ ಹಾಕಲು ತೆರಳಿದಾಗ ಬಾಗಲಕೋಟೆಯಿಂದ ಲಿಂಗಸಗೂರಿಗೆ ಬರುತ್ತಿರುವ ಡಾ ಶ್ರೀನಿವಾಸ ಪ್ರಯಾಣ ರದ್ದು ಪಡಿಸಿರುವುದಾಗಿ ತಿಳಿದುಬಂದಿದೆ ಆಸ್ಪತ್ರೆ ಮುಂದೆ ಕಾಯ್ದುನಿಂತ ರೈತರು ನಂತರ ವೈದ್ಯರ ವಿರುದ್ದ ಪ್ರಕರಣದಾಖಲಿಸುವುದಾಗಿ ಸ್ಟೇಷನ್ ತೆರಳಿದ ಘಟನೆ ಜರುಗಿದೆ
ಈ ಸಂದರ್ಭದಲ್ಲಿ ರೈತಸಂಗದ ಜಿಲ್ಲಾಧ್ಯಕ್ಷ ಶಿವುಪುತ್ರಗೌಡ ತಾಲೂಕಾಧ್ಯಕ್ಷ ದುರ್ಗಾಪ್ರಸಾದ ಸಂಗನಗೌಡ ಹಾಗೂ ನೂರಾರು ರೈತರು ಸೇರಿದಂತೆ ಇದ್ದರು