ಬಾಕಿ ವೇತನಕ್ಕಾಗಿ ಅಂಗನವಾಡಿ ನೌಕರರ ಪ್ರತಿಭಟಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಕಳೆದ ೪ ದಶಕಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಸ್.ಡಿ.ಎಸ್. ಯೋಜನೆ ಸಮಗ್ರ ಅಭಿವೃದ್ಧಿಗಾಗಿ, ಕರ್ನಾಟಕ ರಾಜ್ಯದಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರು ೩ತಿಂಗಳು ಬಾಕಿ ಗೌರವಧನ ಹಾಗೂ ಹಲವು ಬೇಡಿಕೆಗಳನ್ನು ಸರಕಾರ ಕೂಡಲೆ ಈಡೆರಿಸಲು ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಅಯುಕ್ತರಿಗೆ ಸಿ.ಐ.ಟಿ.ಯು ತಾಲೂಕು ಅಧ್ಯಕ್ಷೆ¸ ಸರಸ್ವತಿ ಈಚನಾಳ ನೇತೃತ್ವದಲ್ಲಿ ಕಾರ್ಯಕರ್ತೆ ಯರು ಸಲ್ಲಿಸಿದರು.
ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ೨೦೨೩ ಫೆಬ್ರವರಿ ೦೩ರಂದು ಘೋಶಿಸಿದ ಹೆಚ್ಚುವರಿ ಗೌರವಧನ ಹಾಗೂ ರಾಜ್ಯz ಪ್ರಸ್ತುತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜುಲೈ-೨೦೨೩ರಂದು ಘೋಷಿಸಿದ ಗೌರವಧನ ಹಾಗೂ ೬ನೇ ಗ್ಯಾರಂಟಿಯಾಗಿ ೧೫ಸಾವಿರ ರೂಪಾಯಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದು ತಕ್ಷಣ ಜಾರಿ ಮಾಡಬೇಕು ಹಾಗೂ ಮೊಟ್ಟೆ ವಿತರಣೆ ಮಾಡಲು ಬಾಲವಿಕಾಸ ಸಮಿತಿಗೆ ಮುಂಗಡ ಹಣ ಜಮಾ ಮಾಡುವಂತೆ ಸರಕಾರದ ಆದೇಶವಿದ್ದು, ಅದನ್ನು ಪಾಲನೆ ಮಾಡಬೇಕು. ೨-೩ ತಿಂಗಳು ಕಳೆದರೂ ಮೊಟ್ಟೆಯ ಹಣ ವಿತರಣೆ ಮಾಡಿರುವುದಿಲ್ಲ ಇದರಿಂದ ಕಾರ್ಯಕರ್ತೆಯರಿಗೆ ಫಲಾನುಭವಿಗಳಿಗೆ ತೊಂದರೆಯಾಗಿದ್ದು ಕೂಡಲೆ ಸರಿಪಡಿಸಿ. ಸುಪ್ರೀಂ ಕೋರ್ಟ ಆದೇಶದಂತೆ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕೀಯರಿಗೆ ೧೯೭೨ರ ಆದೇಶದ ಗ್ರಾಜ್ಯುಟಿ ಕಾಯ್ದೆಯಂತೆ ನಿವೃತ್ತಿಯಾದವರಿಗೆ ಮೊದಲು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮಾತೃ ವಂದನಾ ಕಾರ್ಯಕ್ರಮದ ಖರ್ಚು-ವೆಚ್ಚಗಳಿಗೆ ೨೦೨೩ರಿಂದ ಹಣ ಮಂಜೂರು ಮಾಡದೇ ಇರುವುದರಿಂದ ಸದರಿ ಕಾರ್ಯಕ್ರಮಕ್ಕೆ, ತೊಂದರೆಯಾಗಿದ್ದು ಹಣ ಬಿಡುಗಡೆ ಮಾಡಬೇಕು. ಆಹಾರ ಧಾನ್ಯಗಳ ಗುಣಮಟ್ಟದಲ್ಲಿ ಬಹಳ ಅಸಮರ್ಪಕವಿದ್ದು. ಬೆಲ್ಲ, ರವಾ, ಇತ್ಯಾದಿ ಆಹಾರ
ಧಾನ್ಯಗಳ ಪೂರೈಕೆ ನಿಗದಿತ ಅವಧಿಯ ಒಳಗೆ ತೂಕ ಅಳತೆ ನಿಯಮಾನುಸಾರ ಕೊಡಬೇಕು ಮತ್ತು ಎಲ್.ಕೆ.ಯು.ಕೆ.ಜಿ. ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭಿಸಿ ಅರ್ಹ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿರಿರುವರು.
ಸಂದರ್ಭದಲ್ಲಿ ಮಹೇಶ್ವರಿ ಹಟ್ಟಿ, ಸುಮಿತ್ರ ಗುರುಗುಂಟ, ಸಂಗಯ್ಯ ಸ್ವಾಮಿ, ಹನಿಫ, ಮಲ್ಲನಗೌಡ ಮುದಗಲ್, ವಿಜಯ ಲಕ್ಷಿö್ಮ, ಶ್ಯಾವಂ, ನಾಗರತ್ನ ರೊಡಲಬಂಡಾ, ಬಾಬಾ ಜಾನಿ ಹಾಗೂ ಇತರರು ಇದ್ದರು.