ಅಂಗನವಾಡಿಗೆ ಆಯ್ಕೆ ಪಟ್ಟಿ ಪ್ರಕಟ,ಆರೋಪಗಳ ಸುರಿಮಳೆ!!
ವಿಧವೆಗೆ ಸಿಗಲಿಲ್ಲ ನ್ಯಾಯ,ಹೊರಗಿನವರಿಗೂ ದೊರಕಿದ ಹುದ್ದೆ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗೆ ಆಯ್ಕೆಪಟ್ಟಿ ಪ್ರಕಟವಾಗಿದ್ದು ಅದರಲ್ಲಿ ಸಾಕಷ್ಟು ಲೋಪಗಳಿವೆ ಎಂದು ಕಲ್ಯಾಣ ಕರ್ನಾಟಕ ಪತ್ರಿಕೆಗೆ ಹಲವಾರು ಜನ ಆರೋಪಗಳ ಸುರುಮಳೆ ಕೇಳಿಬಂದಿವೆ
ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರ ಆಯ್ಕೆಪಟ್ಟಿಗೆ ಕೆಲ ಮಾನದಂಡಗಳಿದ್ದು ಕೆಲವೆಡೆ ಅವುಗಳ ಉಲ್ಲಂಘಟನೆಯಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ ಹುದ್ದೆಗೆ ಅರ್ಜಿಸಲ್ಲಿಸುವವರು ಸ್ಥಳಿಯರಾಗಿರಬೇಕು ಮೂರುವರ್ಷ ಒಂದೇಕಡೆ ವಾಸವಾಗಿದ್ದಾರೆ ಎನ್ನುವ ನಿವಾಸಿಪತ್ರ ಎಂದು ಇದ್ದರು ಆರ್ ಎನ್ ನಾಯಕನದೊಡ್ಡಿಗೆ ಆಯ್ಕೆಯಾದವರು ಬೇರೆಡೆಗೆ ಮದುವೆ ಮಾಡಿಕೊಡಲಾಗಿದೆ ಅಲ್ಲದೆ ಅವರು ಬಹಳ ವರ್ಷಗಳಿಂದ ಬೇರೆ ಗ್ರಾಮದಲ್ಲಿ ವಾಸ ಮಾಡುತ್ತಾರೆ ಆದರೆ ಅವರ ಆಯ್ಕೆ ಮಾಡಲಾಗಿದ್ದು ಸ್ಥಳಿಯರಿಗೆ ಅನ್ಯಾಯವಾಗಿದೆ ಎಂದು ಅಮರೇಗೌಡ ಗುಂತಗೋಳ ಹಾಗೂ ಹಲವಾರು ಜನ ದೂರುತ್ತಾರೆ ಇದರ ಬಗೆಗೆ ಸಿಡಿಪಿಓ ಮಾತನಾಡಿ ನಮಗೆ ವಾಸಸ್ಥಳ ಮುಖ್ಯ ಇನ್ನು ಯಾವುದೆ ದಾಖಲೆ ಮಹತ್ವವಾಗುವುದಿಲ್ಲ ಅದು ಸ್ಥಳಿಯವಾಗಿ ತಂದಿದ್ದಾರೆ ಅದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಾರೆ ಹಾಗಾದರೆ ಕೇವಲ ವಾಸಸ್ಥಳ ತಂದವರಿಗೆಲ್ಲ ನೇಮಕಾತಿ ಮಾಡುತ್ತೀರಾ ಎಂದರೆ ನಿರುತ್ತರರಾಗುತ್ತಾರೆ
ತಾಲೂಕಿನ ಪೂಲಬಾವಿ ಗ್ರಾಮದಲ್ಲಿ ಇನ್ನು ಪದವಿಯನ್ನು ಓದುತ್ತಿರುವ ಯುವತಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು ಅಲ್ಲಿ ವಿಧವೇ ಶಾಂತಮ್ಮ ಅಮರಪ್ಪ ಎನ್ನುವವರು ಅರ್ಜಿ ಸಲ್ಲಿಸಿದ್ದು ಅವರ ಆಯ್ಕೆಗೆ ಬ್ರೇಕ್ ಹಾಕಲಾಗಿದೆ ಅಲ್ಲದೆ ವಯಸಿನಲ್ಲಿಯು ವಿಧವೇ ಹಿರಿಯಳಿದ್ದಾಳೆ ಇದರ ಬಗೆಗೆ ವಿಚಾರಿಸಿದರೆ ೨೦೨೨ರ ಆಯ್ಕೆ ನಿಯಮದ ಪಟ್ಟಿ ನೀಡುತ್ತಾರೆ ಅದರಲ್ಲಿಯು ವಿಧವೆ ಹಾಗೂ ಹೆಚ್ಚಿನ ವಯಸಿನವರಿಗೆ ಮೊದಲ ಆದ್ಯತೆ ಎಂದು ಹೇಳಲಾಗಿದೆ ೨೦೨೪ರ ನಿಯಮದಲ್ಲಿ ಸ್ಪಷ್ಟವಾಗಿ ವಿಧವೆಗೆ ಪ್ರಥಮ ಆದ್ಯತೆ ಎನ್ನಲಾಗಿದೆ ಆದರು ಸಹಿತಿ ಇಲ್ಲಿ ವಿಧವೆಯನ್ನು ಆಯ್ಕೆ ಮಾಡದ ಸಮಿತಿ ವಿಧವೆಗೆ ಅನ್ಯಾಯ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ತಾಲೂಕಿನ ಪರಾಂಪೂರ ಗ್ರಾಮದಲ್ಲಿ ಅಂಗನವಾಡಿ ಹಲವಾರು ವರ್ಷದಿಂದ ಬಂದ್ ಮಾಡಲಾಗಿತ್ತು ಆದನ್ನು ಗ್ರಾಮದ ಮಹಿಳೆ ಸುಮಾರು ೧೮ ತಿಂಗಳಿನಿAದ ನಡೆಸಿಕೊಂಡು ಬರುತ್ತಿದ್ದಾಳೆ ಅಲ್ಲದೆ ಅಂಗನವಾಡಿಯು ಆ ಮಹಿಳೆಯ ಸ್ಥಳದಲ್ಲಿಯೆ ಇದೆ ಎನ್ನಲಾಗುತ್ತಿದೆ ಆದರು ಅಲ್ಲಿ ಹೊಸಬರಿಗೆ ಆದ್ಯತೆ ನೀಡಲಾಗಿದೆ ನಮಗೆ ನೌಕರಿಯು ಇಲ್ಲ ವೇತನವು ಇಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ
ಯರಗೋಡಿಯಲ್ಲಿ ವಾಸಸ್ಥಳದಲ್ಲಿ ಯಳಗುಂದಿ ಎಂದಾಗಿದೆ ಎನ್ನುವ ಕಾರಣದಿಂದ ಮರುನೇಮಕಕ್ಕೆ ಬರೆದುಕಳಿಸಲಾಗಿದೆ ತಾಲೂಕಿನ ಕೊನೆಯ ಭಾಗದ ಗ್ರಾಮ ಹಲ್ಕಾವಟಿಗಿಯಲ್ಲಿ ಸುಮಾರು ೩-೪ ವರ್ಷಗಳಿಂದ ಅಂಗನವಾಡಿ ಶಿಕ್ಷಕಿ ಇಲ್ಲದಿದ್ದರು ಅಲ್ಲಿ ಇದುವರೆಗೂ ನೇಮಕಾತಿಗೆ ಅರ್ಜಿಕರೆದಿಲ್ಲ ಎನ್ನುವುದೇ ದುರಂತವಾಗಿದೆ
ಟಣಮಕಲ್ ಗ್ರಾಮದಲ್ಲಿ ಸುಮಾರು ಎರಡುವರ್ಷಗಳಿಂದ ಅಂಗನವಾಡಿ ಶಿಕ್ಷಕಿ ಇಲ್ಲದೆ ಕೇಂದ್ರವು ಸಹಾಯಕಿಯ ಮೇಲೆ ನಡೆಯುತ್ತಿದೆ ಆದರು ಅಲ್ಲಿ ಇದುವರೆಗೂ ಖಾಲಿಹುದ್ದೆಗೆ ಕಾಲ್ ಮಾಡಿಲ್ಲ ಇದರ ಗುಟ್ಟೇನು ಎಂದು ಮಲ್ಲೇಶ ಪ್ರಶ್ನೆ ಮಾಡುತ್ತಾರೆ
ಹೀಗೆ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ನೂತನ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆಯ್ಕೆ ಮಾಡುವಲ್ಲಿ ಸಾಕಷ್ಟು ಲೋಪಗಳಾಗಿವೆ ಎಂದು ಆಕ್ಷೇಪಣೆಗಳನ್ನು ಸಲ್ಲಿಸಿದ್ದು ವಂಚಿತರಿಗೆ ನ್ಯಾಯದೊರೆಯಬಹುದೇ ಕಾದುನೋಡಬೇಕಾಗಿದೆ
ಅಂಗನವಾಡಿಗೆ ಆಯ್ಕೆ ಪಟ್ಟಿ ಪ್ರಕಟ,ಆರೋಪಗಳ ಸುರಿಮಳೆ!! ವಿಧವೆಗೆ ಸಿಗಲಿಲ್ಲ ನ್ಯಾಯ,ಹೊರಗಿನವರಿಗೂ ದೊರಕಿದ ಹುದ್ದೆ!!?
