ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಬಗೆಗೆ ದೂರು,ನೋಡಲ್ ಅಧಿಕಾರಿಯಿಂದ ತನಿಖೆ ಪ್ರಾರಂಭ

Laxman Bariker
ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಬಗೆಗೆ ದೂರು,ನೋಡಲ್ ಅಧಿಕಾರಿಯಿಂದ ತನಿಖೆ ಪ್ರಾರಂಭ
WhatsApp Group Join Now
Telegram Group Join Now

ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಬಗೆಗೆ ದೂರು,ನೋಡಲ್ ಅಧಿಕಾರಿಯಿಂದ ತನಿಖೆ ಪ್ರಾರಂಭ

ವಸತಿ ನಿಲಯಗಳಿಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಲು ಅಗತ್ಯ ಕ್ರಮ,

ಪೀಠೋಪಕರಣ ಖರೀದಿ ನಿಯಮ ಮೀರಿದ್ದರೆ ಕ್ರಮ. ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರೆ ಕ್ರಮಕ್ಕೆ ಬರೆಯಲಾಗುವುದು-ಚಂದ್ರುನಾಯ್ಕ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ::ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಟೆಂಡರ್ ಇಲ್ಲದೆ ಪೀಠೋಪಕರಣ ಖರೀದಿ, ಹೆಚ್ಚವರಿ ಬಿಲ್, ಹಾಗೂ ವಸತಿ ನಿಲಯದಲ್ಲಿ ಗೈರು ಇದ್ದರು ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ತೋರಿಸಿ ಹೆಚ್ಚಿನ ಬಿಲ್ ಪಡೆದಿರುವುದು ಸೇರಿದಂತೆ ವಸತಿ ನಿಲಯಗಳ ಅವ್ಯವಹಾರ ನಡೆದಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಭೋವಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಮತ್ತು ತನಿಖಾಧಿಕಾರಿ ಚಂದ್ರ ನಾಯ್ಕ ಸಮಾಜ ಕಲ್ಯಾಣ ಇಲಾಖೆಗೆ ಆಗಮಿಸಿ ತನಿಖೆಯನ್ನು ನಡೆಸಿದರು
ಅಧಿಕಾರಿಗಳು ಹಾಗೂ ವಸತಿ ನಿಲಯಗಳ ವಾರ್ಡನಗಳ ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸದೆ ಕಾನೂನುಬಾಹಿರ ನಡೆದುಕೊಂಡಿದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ ಮಾಡಲಾಗುವದೆಂದು ಅವರು ತಿಳಿಸಿರುವರು.
ಅವರು ಸ್ಥಳೀಯ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕರ ಕಛೇರಿಗೆ ಆಗಮಿಸಿದಾಗ ಪತ್ರಕರ್ತರೊಂದಿಗೆ ಮಾತನಾಡುತ್ತ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿಯ ಪರಸ್ಥಿತಿ ಪರಿಶಿಲಿಸುವುದಾಗಿ ಹಾಗೂ ಪ್ರತಿಯೊಂದು ವಸತಿ ನಿಲಯಗಳಲ್ಲಿ ವಾರ್ಡನ ಹಾಗೂ ವಿದ್ಯಾರ್ಥಿಗಳ ಬಯೋಮೇಟ್ರಿಕ ಸಿಸ್ಟಮ್ ಅಳವಡಿಸಲು ಕ್ರಮ ತೆಗೆದುಕೂಳ್ಳಲಾಗುವದು ಹಾಗೂ ವಾರ್ಡನಗಳು ಪ್ರತಿ ನಿತ್ಯ ಸಂಬಂಧಿಸಿದ ವಸತಿ ನಿಲಯಗಳಿಗೆ ಭೇಟಿ ನೀಡಿ ಬಯೋಮೇಟ್ರಿಕ್ ಹಾಗೂ ಸಾರ್ವಜನಿಕರಿಗೆ ವಿದ್ಯಾರ್ಥಿಗಳ ಆಹಾರ ಸೌಲಭ್ಯಗಳನ್ನು ನಿತ್ಯ ವೆಬ್‌ಸೈಟ್ ಹಾಗೂ ಆನಲೈನ್‌ನಲ್ಲಿ ಪ್ರಕಟಿಸಬೇಕು.
ವಸತಿ ನಿಲಯಗಳಿಗೆ ಆಹಾರ ಸರುಬರಾಜ ಮಾಡುವ ಗುತ್ತೆದಾರ ಸಮಸ್ಯೆ ರಾಜ್ಯಾದಂತಯಿದೆ ಈಗ ಪದ್ಧತಿ ಬದಲಾವಣೆ ಆಗಿದ್ದು ಮತ್ತು ಹಳೆಯ ಟೆಂಡರ್‌ದಾರರನ್ನು ಬದಲಾಯಿಸಿದ್ದು ಪ್ರತಿ ತಿಂಗಳು ವಸತಿ ನಿಲಯಗಳಿಗೆ ಆಹಾರ ನೇರವಾಗಿ ಸರಬರಾಜವಾಗಬೇಕು ಆಹಾರ ಸರಬರಾಜ ಕುರಿತು ಬಯೋಮೇಟ್ರಿಕ್ ಆಧರಿಸಿ ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ನೀಡಬೇಕು ಇದರ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಸಿಗಬೇಕು ಹೀಗಾಗಿ ವಸತಿ ನಿಲಯ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಊಟ ಟ್ವೀಟರ್ ಮೂಲಕ ಮಾಹಿತಿ ನೀಡಲಾಗುವದು ಹಾಗೂ ಇಲಾಖೆಗೆ ಪ್ರತಿ ನಿತ್ಯ ಫೋಟೋ ಆಪಲೋಡ್ ಮಾಡಬೇಕು.
ವಸತಿ ನಿಲಯಗಳ ಮೂಲ ಸೌಕರ್ಯಗಳಾದ ಶೌಚಾಲಯ, ಹೊದಿಕೆ, ಬೆಡ್ ಇತರೆ ಸೌಲಭ್ಯಗಳನ್ನು ಸರಿಯಾಗಿ ವ್ಯವಸ್ಥೆ ಮಾಡಲಾಗುವದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ ಹಾಕಲಾಗುತ್ತಿದ್ದು ಇದ್ದು ಸಾರ್ವಜನಿಕರ ಹಣವಾಗಿದ್ದು ದುರ್ಬಳಕೆ ಆಗಬಾರದು ಕಳೆದ ೧೦ ವರ್ಷದಿಂದ ತಾಲೂಕಿನಲ್ಲಿ ಬೀಡುಬಿಟ್ಟಿರುವ ವಾರ್ಡನಗಳ ವರ್ಗಾವಣೆಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವದು ಹಾಗೂ ಟೆಂಡರ್ ಕರೆಯದೆ ಆಕ್ರಮವಾಗಿ ಪೀಠೋಪಕರಣ ಸಾಮಗ್ರಿ ಖರಿದೀಸಿದರೆ ಆಕ್ರಮ ಕಂಡುಬಂದರೆ ಕ್ರಮ ಕೈಗೂಳ್ಳಲಾಗುವದು ಎಂದು ಚಂದ್ರು ನಾಯ್ಕ ತಿಳಿಸಿರುವರು. ಅಲ್ಲದೆ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳ ಬಗೆಗೂ ಮಾಹಿತಿಯನ್ನು ಪಡೆಯಲಾಗುವುದೆಂದು ಹೇಳಿದರು
ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೆಶಕ ಕೆ.ಚಿದಾನಂದ, ತಾಲೂಕು ಸಹಾಯಕ ನಿರ್ದೇಶಕ ರಾಜುಕುಮಾರ, ಇದ್ದರು.
ಇಲಾಖೆ ಬಗ್ಗೆ ದೂರು ನೀಡಿದ ದಲಿತ ಮುಖಂಡ ಬಸವರಾಜ ಮರಳಿ ಇವರಿಂದ ತನಿಖಾಧಿಕಾರಿ ಚಂದ್ರು ನಾಯ್ಕ ವಿಚಾರಣೆ ನಡೆಸಿದರು.

WhatsApp Group Join Now
Telegram Group Join Now
Share This Article