ಮಗಳ ಪ್ರಶ್ನೆಗೆ ದಣಿವಿಲ್ಲದ ಉತ್ತರ… ಇಂತವರು ಇರುತಾರೆ!!? (ಒಂದು ಲೇಖನ)

Laxman Bariker
ಮಗಳ ಪ್ರಶ್ನೆಗೆ ದಣಿವಿಲ್ಲದ ಉತ್ತರ… ಇಂತವರು ಇರುತಾರೆ!!? (ಒಂದು ಲೇಖನ)
WhatsApp Group Join Now
Telegram Group Join Now

ಮಗಳ ಪ್ರಶ್ನೆಗೆ ದಣಿವಿಲ್ಲದ ಉತ್ತರ… ಇಂತವರು ಇರುತಾರೆ!!? (ಒಂದು ಲೇಖನ)

ಕೆಮ್ಮಣ್ಣು ಗುಂಡಿಯಲ್ಲೊಂದು ಘಟನೆ

ಇದು ಮೊಬೈಲ್ ಯುಗ ಮೊಬೈಲ್ ಕೈಯಲ್ಲಿ ಹಿಡಿದುಕುಳಿತರೆ ಸಾಕು ಎಲ್ಲ ಮರೆತು ಮೊಬೈಲ್ ನಲಿ ಬೆರೆತು ಅದರಲ್ಲಿಯೆ ಕಳೆದುಹೋಗಿ ಬಿಡುತ್ತಾರೆ ಇಂತಹ ಮೊಬೈಲ್ ಯುಗದಲಿ ಅಲ್ಲಿ ಅಪ್ಪ ಮಗಳು ಕೂತಿದ್ದರು ನಾನು ಬಹಳಷ್ಟು ಅವರನ್ನೆ ಗಮನಿಸುತಿದ್ದೆ ಇಬ್ಬರ ನಡುವೆ ನಿರಂತರ ಸಂಭಾಷಣೆ ಮುಂದುವರೆದಿತ್ತು

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿಯಲಿ ಇಂತಹದ್ದೊಂದು ಅಪರೂಪದ ದೃಶ್ಯವನ್ನು ಬಹಳ ಕುತೂಹಲದಿಂದ ವೀಕ್ಷಿಸುತಿದ್ದೆ

ನಾನು ಅವರ ಮಾತುಗಳನ್ನು ಕ್ಷಣವೊತ್ತು ಕೇಳುತಲಿದ್ದೆ ಅಷ್ಟುಹೊತ್ತು ಮಾತನಾಡುತಿದ್ದರು ಅವರು ಮಾತ್ರ ಮೊಬೈಲ್ ನಿಂದ ದೂರವೇ ಇದ್ದರು ಬಹಳ ಸಂತೋಷವಾಗಿ ಕೆಮ್ಮಣ್ಣು ಗುಂಡಿ ನಿಸರ್ಗ ತಾಣವನು ವೀಕ್ಷಿಸುತಾ ಅಪ್ಪ ಮಗಳು ಮಾತನಾಡುತಲೆ ಇದ್ದರು

ಅಪ್ಪ ಅಲ್ಲಿ ನೋಡು ಈ ಕಾಡಿನ ಮಧ್ಯ ದಾರಿ ಹೇಗೆ ಸೀಳಿಕೊಂಡು ಬಂದಿದೆ ಹೌದು ಮಗಳೆ ಅಲ್ಲಿ ನಿಸರ್ಗ ಪ್ರಿಯರು ಓಡಾಡಲು ಅರಣ್ಯ ಇಲಾಖೆಯವರು ರಕ್ಷಕರು ಓಡಾಡಲು ದಾರಿಗಳು ಅವು ಇಲ್ಲಿ ವಿಧವಿಧವಾದ ಗಿಡಮರಗಳು ಬೆಳೆಯುತ್ತವೆ ಸಾಕಷ್ಟು ಔಷಧೀಯ ಸಸ್ಯಗಳು ಇಲ್ಲಿವೆ ಈ ಹಿಂದೆ ಈ ಕೆಮ್ಮಣ್ಣು ಗುಂಡಿ ಇನ್ನೂ ಸುಂದರವಾಗಿತ್ತು ಬಹಳ ಸುಂದರವಾದ ಹೂಗಿಡಗಳು ಇಲ್ಲಿ ಗಮನಸೆಳೆಯುತಿದ್ದವು ಈ ಕಾಡಿನಲಿ ಹಲವಾರು ಕಾಡು ಪ್ರಾಣಿಗಳು ಓಡಾಡುತ್ತವೆ ಕೆಲ ಹಣ್ಣು ಎಲೆ ಹೂ ಕಾಯಿ ತಿಂದರೆ ಮತ್ತು ಕೆಲವು ಮಾಂಸಹಾರಿ ಪ್ರಾಣಿಗಳು ಈ ಕಾಡಿನಲಿ ಇರುತ್ತವೆ
ಹೀಗೆ ಕಾಡಿನ ಬಗೆಗೆ, ಅಲ್ಲಿರುವ ಪ್ರಾಣಿ ಪಕ್ಷಿಗಳ ಬಗೆಗೆ ಕೆಮ್ಮಣ್ಣು ಗುಂಡಿ ಸಂರಕ್ಷಣೆ ಬಗೆಗೆ ಹೀಗೆ ಮಾತುಗಳು ನಡೆದಿತ್ತು ಅವರ ಮಾತುಗಳನ್ನು ನಾನು ತದೇಕ ಚಿತ್ತದಿಂದಲೆ ಕೇಳಿಸಿಕೊಳ್ಳುತಿದ್ದೆ ನಂತರ ಹುಡುಗಿಯ ಕಾಲೇಜಿನ ಬಗೆಗೆ ಅಪ್ಪನ ಆರೋಗ್ಯದ ಬಗೆಗೆ ಹೀಗೆ ಮಾತು ಓತಪ್ರೋತವಾಗಿ ಸಾಗಿತ್ತು
ಹಾಗೆ ಮಾತನಾಡುತ್ತಾ ಅವರು ಇನ್ನೇನು ಹೊರಡಬೇಕೆಂದು ಮೇಲೆದ್ದರು ನಾನು ಕುತೂಹಲದಿಂದ ಅವರನ್ನು ಮಾತನಾಡಿಸಿದೆ ಇಂತ ಮೊಬೈಲ್ ಕಾಲದಲಿ ಮೊಬೈಲ್ ಮುಟ್ಟದೆ ಗಂಟೆಗಟ್ಟಲೆ ಈ ಕಾಡು ನಾಡು ಮತ್ತು ನಿಮ್ಮ ಸಾಧನೆ ಆರೋಗ್ಯ ಹೀಗೆ ಮಾತನಾಡಿದ್ದು ನನಗೆ ತುಂಬಾ ಇಷ್ಟವಾಯಿತು ಎಲ್ಲಿಯವರು ನೀವು ಎಂದೆನು ಆಗ ಅವರು ಪರಿಚಯ ಹೇಳಿದರು ನಾವು ಮೈಸೂರಿನ ವರು ಪ್ರವಾಸಕ್ಕೆ ಬಂದೆವು ನನ್ನ ಮಗಳು ಈಡೆ ಬಿಎಎಮ್ ಎಸ್ ಓದುತಿದ್ದಾಳೆ ಈಕೆಗೆ ಸುಮ್ಮನೆ ಕಾಡು ಗಿಡಮರ ಇಲ್ಲಿಯ ಜನಜೀವದ ಬಗೆಗೆ ಮಾಹಿತಿ ಕೊಡುತಿದ್ದೆ ನಾನು ಎಲ್ ಐ ಸಿಯಲ್ಲಿ ಕೆಲಸ ಮಾಡುತಿದ್ದೆ ನನ್ನ ಮಗಳು ಹಲವಾರು ಸಲ ನನಗೆ ಮಾರ್ಗದರ್ಶನ ನೀಡಿದ್ದಾಳೆ ಕೆಲದುಶ್ಚಟಗಳಿಂದ ಆರೋಗ್ಯ ಕೆಡುವ ಸಂದರ್ಭದಲ್ಲಿ ವೈದ್ಯರಂತೆ ಮನಪರಿವರ್ತಿಸಿ ಚಟ ಬಿಡಿಸಿ ಉತ್ತಮ ಆರೋಗ್ಯ ದ ಸಲಹೆ ನೀಡಿ ಆರೋಗ್ಯ ಸುಧಾರಿಸಿದ್ದಾಳೆ ಎಂದು ಆತ ವಿವರಿಸಿದ ಅವರ ಮಾತುಗಳನ್ನು ಕೇಳುತ್ತಾ ಓ ಇಂತವರು ಇರುತ್ತಾರೆ ಎನಿಸಿತು ಆ ಅಪ್ಪಮಗಳಿಗೆ ಶುಭವಾಗಲಿ ಏನಂತಿರಾ..!!?

ಎಲ್ ಬಿ ಲಿಂಗಸಗೂರು

WhatsApp Group Join Now
Telegram Group Join Now
Share This Article