ಅಮೀನಗಡ: ಬಂಗಾಲಿ ವೈದ್ಯನ ಇಂಜೆಕ್ಷನ್ ಅಡ್ಡಪರಿಣಾಮಕ್ಕೆ ವಿದ್ಯಾರ್ಥಿನಿ ಸಾವು,ಪ್ರಕರಣ ದಾಖಲು

Laxman Bariker
ಅಮೀನಗಡ: ಬಂಗಾಲಿ ವೈದ್ಯನ ಇಂಜೆಕ್ಷನ್ ಅಡ್ಡಪರಿಣಾಮಕ್ಕೆ ವಿದ್ಯಾರ್ಥಿನಿ ಸಾವು,ಪ್ರಕರಣ ದಾಖಲು
WhatsApp Group Join Now
Telegram Group Join Now

ಅಮೀನಗಡ: ಬಂಗಾಲಿ ವೈದ್ಯನ ಇಂಜೆಕ್ಷನ್ ಅಡ್ಡಪರಿಣಾಮಕ್ಕೆ ವಿದ್ಯಾರ್ಥಿನಿ ಸಾವು,ಪ್ರಕರಣ ದಾಖಲು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು/ ಕವಿತಾಳ :

ಕವಿತಾಳ ಸಮೀಪದ
ಅಮೀನಗಡ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಿಂಧೂ (15) ವಿದ್ಯಾರ್ಥಿನಿ ಹೊಟ್ಟೆ ನೋವಿಗೆ ಬಂಗಾಲಿ ವೈದ್ಯನಲ್ಲಿ ಚಿಕಿತ್ಸೆ ಪಡೆದಿದ್ದು ಇಂಜೆಕ್ಷನ್ ಅಡ್ಡಪರಿಣಾಮದಿಂದ ಸಾವಿಗೀಡಾದ ಘಟನೆ ಜರುಗಿದ್ದು ಪ್ರಕರಣ ದಾಖಲಾಗಿದೆ

26 ರಂದು ಅಮೀನಗಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಷಯದ ಪರೀಕ್ಷೆ ಬರೆದು ಮನೆಗೆ ತೆರಳಿದಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಅಜ್ಜಿ ಯಲ್ಲಮ್ಮ ಗ್ರಾಮದ ಬಂಗಾಲಿ ವೈದ್ಯ ಉತ್ತಮ ಕುಮಾರ್ ಬಳಿ ಚಿಕಿತ್ಸೆ ಕೊಡಿಸಿದ್ದಾಳೆ.

ಚಿಕಿತ್ಸೆ ನಂತರ ವಿದ್ಯಾರ್ಥಿನಿ ಸಿಂಧೂ ತಂದೆ ದುರಗಪ್ಪ ವ. 15 ಅಸ್ವಸ್ಥಳಾಗಿದ್ದಾಳೆ.

ಬಂಗಾಲಿ ವೈದ್ಯ ಉತ್ತಮ ಕುಮಾರ ತಂದೆ ಆಶಿತ ಸರಕಾರ ನೀಡಿದ ಇಂಜಕ್ಷನ್ ಅಡ್ಡಪರಿಣಾಮದಿಂದ ಇಂಜೆಕ್ಷನ್ ನೀಡಿದ ಭಾಗ ಬಾವು ಬಂದಿರುವದಲ್ಲದೆ ಕಪ್ಪಾಗಿದೆ ಮತ್ತು ಸಣ್ಣಸಣ್ಣ ಬೊಬ್ಬೆ ಬಂದಿವೆ ಹುಡುಗಿಯ ತಂದೆತಾಯಿ ಬೆಂಗಳೂರಿಗೆ ದುಡಿಯಲು ಹೋಗಿದ್ದು ಅಜ್ಜಿ ಯಲ್ಲಮ್ಮನ ಹತ್ತಿರ ಇದ್ದ ವಿದ್ಯಾರ್ಥಿ ನಿಗೆ ಪುನಃ ಹೊಟ್ಟೆ ನೋವು ಕಾಣಿಸಿಕೊಂಡಿದೆ.ವಿಷಯ ವನ್ನು ಅಜ್ಜಿ ಯಲ್ಲಮ್ಮ ಬೆಂಗಳೂರಿನ ಲ್ಲಿರುವ ಮಗನಿಗೆ ತಿಳಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಾನ್ವಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಮೃತ ವಿದ್ಯಾರ್ಥಿನಿಯ ಶವವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಯಿಂದ ರಾಯಚೂರಿನ ಸರ್ಕಾರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಸತ್ಯಾ ಸತ್ಯತೆ ಬಯಲಿಗೆ ಬರಲಿದೆ.

ವೈದ್ಯನ ವಿರುದ್ದ ಪ್ರಕರಣ ದಾಖಲು:ವಿದ್ಯಾರ್ಥಿ ನಿಯ ಸಾವಿನ ವಿಷಯ ತಿಳಿಯುತ್ತಿರುವಂತೆ ಬೆಂಗಳೂರಿನಲಿ ದುಡಿಯಲು ಹೋಗಿದ್ದ ತಂದೆ ತಾಯಿ ಮಾನ್ವಿಗೆ ಬಂದು ಘಟನೆಯನ್ನು ಕಂಡು ದಂಗಾಗಿ ಶವವನ್ನು ಪಡೆದು ಮರಣೋತ್ತರ ಪರೀಕ್ಷೆ ಗೆ ಕಳುಹಿಸಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಬೆಂಗಾಲಿ ವೈದ್ಯ ಉತ್ತಮ ಕುಮಾರನ ವಿರುದ್ದ ಪ್ರಕರಣ ದಾಖಲಾಗಿದ್ದು ಪೊಲೀಸ್ ತನಿಖೆ ಕೈಗೊಂಡಿದೆ

ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ:10ನೇ ತರಗತಿಯನ್ನು ಪಾಸಾಗದ ಎಷ್ಟೊ ಬಂಗಾಲಿಗಳು ನಾವು ವೈದ್ಯರು ಎಂದು ಗ್ರಾಮೀಣ ಭಾಗದಲ್ಲಿ ಬಾಡಿಗೆ ಮನೆ ಪಡೆದು ಚಿಕಿತ ನೀಡುತ್ತಿರುವ ಬಗೆಗೆ ಕಲ್ಯಾಣ ಕರ್ನಾಟಕ ಪತ್ರಿಕೆ ಮೇಲಿಂದ ಮೇಲೆ ಸುದ್ದಿ ಪ್ರಕಟಿಸುತ್ತಿದ್ದರು ಆರೋಗ್ಯ ಇಲಾಖೆ ಮಾತ್ರ ಇನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ ಹೀಗೆ ಮುಂದುವರೆದರೆ ಮತ್ತೆಷ್ಟು ಬಡಜೀವಗಳು ಬಲಿಯಾಗುತ್ತವೆಯೊ ತಿಳಿಯದು ಇನ್ನೂ ಮುಂದಾದರು ಕ್ರಮವಹಿಸಬಹುದೃ ಕಾದುನೀಡೋಣ

WhatsApp Group Join Now
Telegram Group Join Now
Share This Article