ಲಿಂಗಸ್ಗೂರು ಕ್ಷೇತ್ರ ಸಾಮಾನ್ಯವಾದರೂ ನಾನು ಸ್ಪರ್ಧಿಸುವುದಿಲ್ಲ – ಅನ್ವರಿ ಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ಮೇ. 17.- ನಮ್ಮ ಹಿತೈಷಿಗಳು ಲಿಂಗಸ್ಗೂರು ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಆದರೆ ನಾನು ಯಾವುದೇ ಕಾರಣಕ್ಕೂ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲವೆಂದು ಮಾಜಿ ಕೇಂದ್ರ ಸಚಿವರಾದ ಬಸವರಾಜ ಪಾಟೀಲ್ ಅನ್ವರಿ ಹೇಳಿದರು.
ಅವರು ತಾಲೂಕಿನ ಈಚನಾಳ ಗ್ರಾಮದ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ನಾನು ರಾಜಕಾರಣದಲ್ಲಿ ಅನುಭವಿಯಾಗಿರಬಹುದು ಆದರೆ ಇಂದಿನ ದಿನಮಾನಗಳಲ್ಲಿ ರಾಜಕೀಯ ಎಂಬುದು ಹದೆಗೆಟ್ಟು ಹೋಗಿದ್ದು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬ ತೀರ್ಮಾನ ನಾನಿ ನ್ನು ಮಾಡಿಲ್ಲ.
ಲಿಂಗಸ್ಗೂರು ಕ್ಷೇತ್ರದಲ್ಲಿ ಹತ್ತಾರು ಸಾವಿರ ನನ್ನ ಅಭಿಮಾನಿಗಳು ಲಿಂಗಸ್ಗೂರು ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರುವುದು ನಿಜ. ಆದರೆ ಪ್ರಸ್ತುತ ರಾಜಕಾರಣದಲ್ಲಿ ನ್ಯಾಯ ನೀತಿ ಧರ್ಮ ಎಂಬುದು ಅಳಿಸಿ ಹೋಗಿದ್ದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಾನು ಈ ಹಿಂದೆ ಚುನಾವಣೆಯನ್ನು ಮಾಡಿದ್ದು ಅದರಂತೆ ಪ್ರಸ್ತುತವಾಗಿ ಇಂದು ನಡೆಯುತ್ತಿಲ್ಲ.
ಹೀಗೆನಿದ್ದರೂ ಚುನಾವಣೆಯಲ್ಲಿ ದುಡ್ಡು ಮಾತ್ರ. ಜನತೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಚುನಾವಣೆಯ ಸಂದರ್ಭದಲ್ಲಿ ಬರಿ ಆಸೆ ಆಮಿಷಗಳಿಗೆ ಬಲಿ ಆಗುತ್ತಿದ್ದಾರೆ ವಿನಃ ಮಾನವಿಯತೆ ಎಂಬುದು ಮರೆತುಹೋಗಿದೆ.
ಇಂತಹ ಸಂದರ್ಭದಲ್ಲಿ ನಾನು ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಕ್ಷೇತ್ರದ ಜನತೆ ಕೈಗೊಂಡರು ಸಹ ಸ್ಪರ್ಧೆಗೆ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ.
ಆರ್ಥಿಕವಾಗಿ ಸಮಾಜಿಕವಾಗಿ ಶೈಕ್ಷಣಿಕವಾಗಿ ತಳಮಟ್ಟದ ಹಿಂದುಳಿದ ಜನಾಂಗವನ್ನು ಮೇಲೆತ್ತಲು ನಾನು ಈ ಹಿಂದೆ ಕೇಂದ್ರ ಸಚಿವನಾಗಿದ್ದಾಗ ಹಲವಾರು ರೀತಿಯಲ್ಲಿ ಯೋಚಿಸಿದ್ದೆ ನನ್ನ ಕೈಲಾದಷ್ಟು ಈ ಹಿಂದೆ ನಾನು ಶಾಸಕನಾಗಿ ಕೇಂದ್ರ ಸಚಿವನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುತ್ತೇನೆ.
ಅದೆಲ್ಲವನ್ನು ಅರಿತ ಲಿಂಗಸ್ಗೂರು ಕ್ಷೇತ್ರದ ಜನತೆ ನನ್ನನ್ನು ಮತ್ತೊಮ್ಮೆ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿರುವುದು ಅವರ ವೈಯುಕ್ತಿಕ ಅಭಿಪ್ರಾಯವಾಗಿದ್ದು ಅದರ ಬಗ್ಗೆ ನಾನೇನು ಹೇಳುವುದಿಲ್ಲ.
ಒಟ್ಟಾರೆಯಾಗಿ ಯಾರೇ ಸ್ಪರ್ಧೆ ಮಾಡಿ ಚುನಾಯಿತರಾದರು ಸಹ ಕ್ಷೇತ್ರ ಅಭಿವೃದ್ಧಿ ಆದರೆ ಸಾಕು ಅದೇ ನಾನು ಬಯಸುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಅಯ್ಯಪ ಮಾಳೂರು ವಕೀಲರು, ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷರಾದ ದ್ಯಾಮಣ್ಣ ನಾಯಕ್,ಮುಖಂಡರಾದ ಸೋಯಲ್, ಪೀರ್ ಸಾಬ್ ಪಂಚಮ, ಆದಪ್ಪ ಎನ್ ಮೇಟಿ,ಅಮರೇಶ್ ಜಿ ಪೂಜಾರ್, ಯಂಕನಗೌಡ ಮೇಟಿ, ಅಮರೇಶ ಮೇಟಿ, ಪುಂಡನಗೌಡ ಆರ್ ಪಾಟೀಲ್,ಶಾಂತಕುಮಾರ ಸಾಹುಕಾರ್, ದೇವರೆಡ್ಡಿ ಮೇಟಿ, ವಿಜಯಕುಮಾರ್ ಮೇಟಿ, ದೇವರೆಡ್ಡಿ ಮೇಟಿ, ಶಂಕರಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.