ಏಮ್ಸ್ ಹೋರಾಟ ೧೦೦೦ದಿನಕ್ಕೆ ಪಾದಾರ್ಪಣೆ
ಎಮ್ಸ್ಗಾಗಿ ಲಿಂಗಸುಗೂರನಲ್ಲಿ ಬೃಹತ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ :ರಾಯಚೂರು ಜಿಲ್ಲೆಯಲ್ಲಿ ಎಮ್ಸ್ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಎಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯುತಿರುವ ಸುಧೀರ್ಘ ಹೊರಟ ೧೦೦೦ ದಿನಗಳನ್ನು ದಿನಾಂಕ ೫ ರಂದು ಪೂರೈಸಿದ್ದು ತಾಲೂಕು ಎಮ್ಸ ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಬೃಹತ ಹೋರಾಟ ಮಾಡುವ ಮೂಲಕ ಸಹಾಯಕ ಆಯುಕ್ತರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು

ಎಮ್ಸ್ ಹೋರಾಟ ಸಮಿತಿ ಗೌರವ ಅಧ್ಯಕ್ಷ ಡಾ ಶಿವಬಸಪ್ಪ ಮಾತನಾಡಿ ಈಗಾಗಲೇ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಏಶ್ಯಕ ಸಕ್ರಿಯ ಗಣಿ ಆಗಿದ್ದು ಕೋಟಿ ಕೋಟಿ ಆದಾಯವನ್ನು ಕೇಂದ್ರ ಹಾಗೂ ರಾಜ್ಯಕ್ಕೆ ಪೂರೈಸುತ್ತಿದೆ, ಕೃಷಿ ಕ್ಷೇತ್ರದಲ್ಲಿಯು ಸಹ ಜಿಲ್ಲೆಯು ಅತೀ ವಿಶಾಲವಾದ ಕಾಟನ್ ಮಾರುಕಟ್ಟೆ ಹೊಂದಿದೆಹಾಗೂ ಅಮೆರಿಕದಲ್ಲಿ ಬಹಳಷ್ಟು ಬೇಡಿಕೆ ಇರುವ ನಮ್ಮ ಜಿಲ್ಲೆಯ ಅಕ್ಕಿ ಎಕ್ಸ್ ಪೋರ್ಟ್ ಆಗುವುದರಿಂದ, ಇನ್ನಿತರೆ ಎಲ್ಲಾ ತೆರಿಗೆ ಹಣ ಕೇಂದ್ರ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ.
ಏಮ್ಸ್ ಹೋರಾಟ ಸಮಿತಿ ಇಂದ ೧೦೫೨೧ ಜನರ ರಕ್ತ ಸಹಿ ಸಂಗ್ರಹ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು, ಜಿಲ್ಲೆಯ ಸರ್ವ ಧರ್ಮಗಳ, ವಿದ್ಯಾರ್ಥಿ ಯುವ ಜನರ ಸಮಾವೇಶ, ಲಕ್ಷಾಂತರ ಪತ್ರ ಚಳುವಳಿ ಯನ್ನು ಎಮ್ಸ್ ಹೋರಾಟ ಸಮಿತಿ ವತಿಯಿಂದ ಜರುಗಿವೆ ಇದರ ಫಲಪ್ರದವಾಗಿ ರಾಜ್ಯದ ಮುಖ್ಯಮಂತ್ರಿಗಳು ೪ ಪ್ರತ್ಯೇಕ ಪತ್ರಗಳನ್ನೂ ಸಹ ಪ್ರಧಾನ ಮಂತ್ರಿಗಳಿಗೆ ರಾಯಚೂರು ಜಿಲ್ಲೆಯಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಬರೆದಿದ್ದರು ಎಂದು ಹೇಳಿದರು.
ಸಮಿತಿ ಸದಸ್ಯ ಬಸವಂತರಾಯ ಕುರಿ ಹಾಗೂ ಇತರರು ಮಾತನಾಡಿದರು ಹೋರಾಟವು ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಪ್ರಾಂಭವಾಗಿ ಗಡಿಯರ ಚೌಕ್, ಬಸ್ ಸ್ಟ್ಯಾಂಡ್ ಸರ್ಕಲ್ ಮುಖಾಂತರ ಸಹಾಯಕ ಆಯುಕ್ತರ ಕಛೇರಿವರಗೆ ತಲುಪಿತ್ತು.
ಈ ಸಂಧರ್ಬದಲ್ಲಿ ತಾಲೂಕು ಎಮ್ಸ್ ಸಮಿತಿ ಅಧ್ಯಕ್ಷ ವಿನಯ ಗಣಾಚಾರಿ, ಡಿ.ಬಿ ಸೋಮನಮರಡಿ, ವೈದ್ಯಾರಾದ ಡಾ.ಲಕ್ಷಮ್ಮ, ಡಾ ಡಿ.ಎಚ್.ಕಡದಳ್ಳಿ, ಡಾ.ರಂಗನಾಥ, ಡಾ. ಆನಂದ ಚೌದ್ರಿ, ಡಾ.ವಿಜಯ ಕುಮಾರ, ರೈತರಾದ ಶಿವುಪುತ್ರಗೌಡ ನಂದಿಹಾಳ, ಮಲ್ಲನಗೌಡ, ಪುರಸಭೆ ಅಧ್ಯಕ್ಷ ಬಾಬು ರೆಡ್ಡಿ ಮುನ್ನೂರ, ಕಾಂಗ್ರೆಸ್ಸ ಮುಖಂಡರಾದ ಗೋವಿಂದ ನಾಯಕ, ಸಂಜೀವಪ್ಪ ಹುನಕುಂಟಿ, ಅಲ್ಲಾವುದ್ದಿನ ಪಟೇಲ್, ವಿಜಯಲಕ್ಷಿö್ಮ ದೇಸಾಯಿ,ಜ್ಯೋತಿ ಸುಂಕದ , ವಕೀಲರಾದ ಕುಪ್ಪಣ್ಣ ಮಾಣಿಕ, ನಾಗರಾಜ ಗಸ್ತಿ, ದಲಿತ ಮುಖಂಡರಾದ ಲಿಂಗಪ್ಪ ಪರಂಗಿ, ಹನುಮಂತಪ್ಪ ಕುಣೆಕೆಲ್ಲೂರು, ಕರವೇ ಅಧ್ಯಕ್ಷ ತಿಮ್ಮಾರೆಡ್ಡಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇದ್ದರು.