ಉಪಚುನಾವಣೆ ನಂತರ ಮುಖ್ಯಮಂತ್ರಿ ಬದಲಾವಣೆ ಸುಳಿವು : ಬಸನಗೌಡ ಯತ್ನಾಳ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು : ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಬಸಲಾವಣೆ ನಡೆಯಲಿ ಎನ್ನಲಾದ ಸುಳಿವು ಅಧಿವೇಶನದಲ್ಲಿ ಕಂಡು ಬಂದಿದೆ ಎಂದು ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ನಿವಾಸಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ನಡೆದ ಶಾಸಕರ ಪೋಟೊ ಸೇಷನ್ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಬದಲಾವಣೆಯಾದರೆ ಮುಂಬರುವವರು ಹಡಗು ಮುಳಿಗಿಸುವವರು ಮುಖ್ಯಮಂತ್ರಿ ಬರುತ್ತಾರೆ ಎಂದು ವ್ಯಗವಾಡಿದರು.
ರಾಜ್ಯದಲ್ಲಿ ಬಜೆಟ್ನಲ್ಲಿ ಮುಸ್ಲಿಂಮರಿಗೆ ಹೆಚ್ಚಿನ ಆದ್ಯತೆ ನೀಡಿಲಾಗಿದೆ, ದಲಿತರು ಹಿಂದುಳಿದವರನ್ನು ಸಂಪೂಣವಾಗಿ ಕಡೆಗಾಣಿಸಲಾಗಿದೆ. ಎಸ್ಇಪಿ ಮತ್ತು ಟಿಎಸ್ಪಿ ಯೋಜನೆ ೪೦ ಸಾವಿರ ಕೋಟಿ ಹಣ ಬೇರೆ ಕಡೆಗೆ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಒಳ ಮೀಸಲಾತಿ ಜಗಳ ಹಚ್ಚಿದ್ದಾರೆ ಎಂದರು.
ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರು ಪರವಾಗಿ ಪ್ರಚಾರಕ್ಕೆ ಹೋಗುವ ವಿಜಯೇಂದ್ರರ ಪರವಾಗಿ ಅಲ್ಲ ಹಿಂದುಗಳ ಕರೆದಲ್ಲಿ ನಾನು ಪ್ರಚಾರಕ್ಕೆ ಹೋಗುತ್ತೇನೆ ದಾವಣಗೇರೆ ಅಭ್ಯರ್ಥಿ ಪರವಾಗಿ ವಿಚಾರ ಮಾಡಿ ಪ್ರಚಾರಕ್ಕೆ ತರೆಳುವೇನು ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ದಾಖಲೆ ಸಮೇತವಾಗಿ ಆರೋಪ ಮಾಡಲಾಗಿದೆ. ಸರ್ಕಾರ ಯಾವುದೇ ಕ್ರಮ ಜರುಗಿಸಲಿಲ್ಲ. ಭೋವಿ ನಿಗಮದಲ್ಲಿ ಅವ್ಯವಹಾರ ನಡೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಹೆಸರಿನಲ್ಲಿ ಅವರ ಪುತ್ರ ಯತೀಂದ್ರ ಮತ್ತು ಬೈರತಿ ಬಸವರಾಜರ ಭ್ರಷ್ಟಚಾರದಿಂದ ರಾಜ್ಯದಲ್ಲಿ ದಿವಾಳಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ್, ಈಶ್ವರ ವಜ್ಜಲ್, ಗಿರಿಮಲ್ಲನಗೌಡ ಪಾಟೀಲ್, ಅಯ್ಯಪ್ಪ ವಕೀಲ ಮಾಳೂರು ಸೇರಿದಂತೆ ಇದ್ದರು


