ಬಿಸಿಎಂ ವಸತಿ ನಿಲಯಕ್ಕೆ ಎಇಇ ತನುಜೇಂದ್ರ ಪಾಟೀಲ್ ಭೇಟಿ,ಪರಿಶೀಲನೆ
೨೦೨೫ರ ಜನವರಿಗೆ ಕಟ್ಟಡ ಉದ್ಘಾಟನೆಯಾಗಲಿದೆ,ಗುಣಮಟ್ಟದ ಬಗೆಗೆ ನಿಗಾವಹಿಸಲಾಗುವುದು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದಲಿ ನಡೆದಿರುವ ಬಿಸಿಎಂ ಇಲಾಖೆಯ ನೂತನ ಕಟ್ಟಡದ ಕಾಮಗಾರಿಯನ್ನು ಕರ್ನಾಟಕ ಗೃಹಮಂಡಳಿಯ ಎಇಇ ತನುಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಸದರಿ ವಸತಿ ನಿಲಯದ ಕಾಮಗಾರಿಯ ಗುಣಮಟ್ಟದ ಬಗೆಗೆ ಮೇಲಿಂದ ಮೇಲೆ ಕೇಳಿ ಬರುತ್ತಿದ್ದು ಅದಕ್ಕಾಗಿ ಪರಿಶೀಲನೆ ಮಾಡಲು ಬಂದಿರುವುದಾಗಿ ತಿಳಿಸಿದ ಅವರು ಸದರಿ ವಸತಿ ನಿಲಯದ ಕಟ್ಟಡವನ್ನು ೨ಕೋಟಿ ೩೨ ಲಕ್ಷ ಹಣದಲ್ಲಿ ಕಟ್ಟಲಾಗುತ್ತಿದ್ದು ಸದರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಕಟ್ಟಡ ಮುಗಿದ ಮೇಲೆ ಎರಡು ವರ್ಷದ ವರೆಗೆ ಅವರೆ ನಿರ್ವಹಣೆ ಮಾಡುವುದು ಇರುತ್ತದೆ ಇದರಿಂದಾಗಿ ಗುಣಮಟ್ಟದಲ್ಲಿ ಯಾವುದೆ ಲೋಪವಾಗದಂತೆ ಗುತ್ತಿಗೆದಾರರ ಕಾಮಗಾರಿಯನ್ನು ಮಾಡಬೇಕಾಗುತ್ತದೆ ನಾವು ಕಾಮಗಾರಿಯನ್ನು ವೀಕ್ಷಿಸಿದಾಗ ಯಾವುದೆ ರೀತಿಯ ಲೋಪಗಳು ಕಂಡುಬರಲಿಲ್ಲ ಆದರೂ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗೆಗೆ ನಿಗಾವಹಿಸಲಾಗುವುದು ಎಂದು ಅವರು ಹೇಳಿದರು
ಸುಮಾರು ೨ಕೋಟಿ ೩೨ ಲಕ್ಷದಲ್ಲಿ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗುತ್ತಿದ್ದು ೨೦೨೫ರ ಜನವರಿಯಲ್ಲಿ ಕಾಮಗಾರಿ ಮುಗಿಯಬೇಕಾಗಿದೆ ಅದೆ ಸಮಯದಲ್ಲಿ ಉದ್ಘಾಟನೆಯಾಗಲಿದೆ ಎನ್ನುವ ಭರವಸೆಯು ನಮಗಿದೆ ಸದರಿ ಕಟ್ಟಡವು ಉದ್ಘಾನಟಯಾದರೆ ಇದರಲ್ಲಿ ಸುಮಾರು ೧೨೫ ವಿದ್ಯಾರ್ಥಿಗಳು ವಾಸ ಮಾಡಲು ಅನುಕೂಲವಾಗುತ್ತದೆ ಇದರಲ್ಲಿ ಗ್ರಂಥಾಲಯದಕೋಣೆ,ಅಡುಗೆಕೋನೆ,ವಾಸದ ಕೋಣೆ, ಫೊಂಕ್ಷನ್ ಹಾಲ್ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸುವ ಕಟ್ಟಡ ನಿರ್ಮಾಣವಾಗುತ್ತದೆ ಎಂದು ತಾಲೂಕಾ ಬಿಸಿಎಂ ಅಧಿಕಾರಿ ರಮೇಶ ರಾಠೋಡ ಹೇಳಿದರು
ಕಟ್ಟಡದ ಗುಣಮಟ್ಟವಿಲ್ಲವೆಂದು ಆರೋಪಗಳು ಮಾಡುತ್ತಿದ್ದಾರೆ ಆದರೆ ಕಟ್ಟಡದ ನಿಯಮದಲ್ಲಿರುವುದಕಿಂತ ಉತ್ತಮವಾದ ಪರಿಕರಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವೆ ಸಾಗುವಾನಿ ಬಾಗಿಲುಗಳು, ಟಾಟಾ ಕಂಪನಿಯ ಟಿನ್ ಶೀಟ್ ಮತ್ತು ಸರಳುಗಳು ಬಳಕೆಮಾಡಲಾಗುತ್ತಿದೆ ಕ್ಯೂರಿಂಗ್ ಹಂತ ಹಂತವಾಗಿ ಉತ್ತಮವಾಗಿ ನಡೆದಿದೆ ಅಲ್ಲದೆ ಕಟ್ಟಡ ನಿರ್ಮಾಣ ಮಾಡಿ ಎರಡು ವರ್ಷದವರೆಗೆ ನಾವೆ ನಿರ್ವಹಣೆ ಮಾಡಬೇಕಿರುವುದರಿಂದ ಉತ್ತಮಗುಣಮಟ್ಟ ಕಾಪಾಡಲಾಗುತ್ತದೆ ಎಂದು ಗುತ್ತಿಗೆದಾರ ಲಕ್ಷ್ಮೀ ಕಾಂತ ಹೇಳಿದರು