ಎ,ಇ.ಇ ವಾಸವಿಲ್ಲದ ವಸತಿಗೃಹಕ್ಕೆ ಸುಣ್ಣಬಣ್ಣ ನಿರ್ವಹಣೆ ಹೆಸರಿನಲ್ಲಿ ಲಕ್ಷಾನುಗಟ್ಟಲೆ ಹಣ ಖರ್ಚು ತನಿಖೆಗೆ ಒತ್ತಾಯ!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಲೋಕೊಪಯೋಗಿ ಇಲಾಖೆ ಸರಕಾರಿ ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ಅಧಿಕೃತ ಸರಕಾರಿ ನಿವಾಸದಲ್ಲಿ ಕಳೆದ ೬ ವರ್ಷದಿಂದ ಯಾರು ವಾಸವಿಲ್ಲ ಆದರೆ ಇಲಾಖೆಗೆ ಸಂಬಂದಿಸಿದ ಜೆ ಇ. ಗೃಹ ನಿರ್ವಹಣೆಗೆ ಪ್ರತಿವರ್ಷ ಸುಣ್ಣ ಬಣ್ಣದ ಹೆಸರಿನಲ್ಲಿ ಲಕ್ಷಾಂತರ ರೂ ಹಣ ಬೊಗಸ್ ಬಿಲ ಸೃಷ್ಠಿಸಿ ಹಣ ದುರ್ಬಳಕೆ ಮಾಡುತ್ತಿದ್ದು ಬಯಲಾಗಿದ್ದು ಇಲಾಖೆಗೆ ಸಂಬಂದಿಸಿದಂತೆ ಸಮಗ್ರ ತನಿಖೆಗೆ ದ,ಸ,ಸ ಮುಖಂಡ ಯಲ್ಲಪ್ಪ ಒತ್ತಾಯಿಸಿದ್ದಾರೆ.
ಪ್ರತಿವರ್ಷ ನಿರ್ವಹಣೆಗಾಗಿ ಪ್ಯಾಕೇಜ ಮೂಲಕ ಟೆಂಡರ ಕರೆದು ತಾಲೂಕಿನ ಮುದಗಲ್ ಅಮರೇಶ್ವರ ಮಸ್ಕಿ ಇತರೆ ಪ್ರವಾಸಿ ಮಂದಿರಗಳಿಗೆ ಹಾಗೂ ಸಹಾಯಕ ಆಯುಕ್ತg ವಸತಿ ಗೃಹ ಕೋರ್ಟ ಮತ್ತು ನೌಕರರ ವಸತಿಗೃಹಗಳಿಗೆ ಮತ್ತ ಇಲಾಖೆ ಕಾರ್ಯಾಲಯಗಳಿಗೆ ಜೆಇಗಳು ತಮ್ಮ ಸಂಬಂದಿಕರಿಗೆ ಪ್ಯಾಕೇಜ ಕಾಮಗಾರಿ ನೀಡಿ ತಾವೆ ಬಿಲ್ ಸೃಷ್ಠಿಸಿ ಎಇಇ ರುಜುವಿನೊಂದಿಗೆ ಹಣ ಲಪಟಾಯಿಸುತ್ತುರುವದು ನಿರಂತರ ನಡೆದಿದೆ
ಲಿಂಗಸುಗೂರ ಪಿಡಬ್ಲುಡಿ ಇಲಾಖೆ ಎಇಇಗಳ ಮಾತ್ರ ವರ್ಗಾವಣೆ ಬದಲಾವಣೆಯಾಗುತ್ತಿದ್ದು ಅದರೆ ಕಳೆದ ಹಲವು ವರ್ಷದಿಂದ ಜೆಇಗಳಾದ ಯಲಗೂರೇಷ ಹುಸೇನ ಬಾಷಾ ಸೇರಿದಂತೆ ಹಲವರು ವರ್ಗಾವಣೆಯಾಗುವದಿಲ್ಲಾ ಹೀಗಾಗಿ ಇಲಾಖೆ ಹಣ ದುರ್ಬಳಕೆಗೆ ಕಡಿವಾಣವಿಲ್ಲದಂತಯಾಗಿದೆ ಕಾರಣ ಇವುರುಗಳಿಗೆ ಜನ ಪ್ರತಿನಿಧಿಗಳ ಆಶಿರ್ವಾದ ಇದೆ ಎನ್ನಲಾಗುತ್ತದೆ.
ಲೋಕೋಪಯೋಗಿ ಇಲಾಖೆ ವಿವಿಧ ಶಿರ್ಷಕೆಯಡಿ ರಸ್ತೆ ಕಟ್ಟಡ ೨೦೫೯, ೩೦೫೪, ೨೨೧೬, ೫೦೫೪ ಬಂದಿರುವ ೨೦೨೨ರಿಂದ೨೪ ರವರೆಗೆ ಲೋಕಾಯುಕ್ತರಿಂದ ಸಮಗ್ರ ತನಿಖೆಯಾದಾಗ ಮಾತ್ರ ಇಲಾಖೆ ಅವ್ಯವಹಾರ ಬಯಲಾಗುವದು ನಿಶ್ಚಿತವೆಂದು ದೂರಲಾಗಿದೆ.
“ನಾನು ಲಿಂಗಸುಗೂರಿಗೆ ಫೆಬ್ರುವರಿ ತಿಂಗಳಲ್ಲಿ ಅಧಿಕಾರ ಸ್ವಿಕರಿಸಿದ್ದು ಹಿಂದಿನ ಯಾವದೆ ಮಾಹಿತಿ ಇರುವದಿಲ್ಲಾ ಮಾಹಿತಿ ಹಕ್ಕಿನಡಿ ಅರ್ಜ ಸಲ್ಲಿಸಿದರೆ ಸಂಪೂರ್ಣ ಮಾಹಿತಿ ನೀಡುವದಾಗಿ ನಾನು ಇಲ್ಲಿಯವರೆಗೆ ಯಾವದೆ ಬಿಲ್ ಮಂಜೂರ ಮಾಡಿಲ್ಲಾ ಎಂದು ಪಿಡಬ್ಲಯೂಡಿ ಎಇಇ ಪ್ರಕಾಶ ಜ್ಯೊತಿ ಲಿಂಗಸುಗೂರ ತಿಳಿಸಿರಿರುವರು.”