ಉಪಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆsಸ್ ಗೆಲುವು ಕಾರ್ಯಕರ್ತರಿಂದ ಸಂಭ್ರಮಾಚರಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಸಂಡೂರು, ಶಿಗ್ಗಾವಿ ಚೆನ್ನಪಟ್ಟಣ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರಿಂದ ತಾಲೂಕು ಬ್ಲಾಕ್ ಕಾಂಗ್ರೆಸ್ಸ ಅಧ್ಯಕ ಗೋವಿಂದ ನಾಯಕ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಗಡಿಯಾರ ಚೌಕನಲ್ಲಿ ಪಟಾಕಿ ಸಿಡಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಆ ಕ್ಷೇತ್ರಗಳ ಮತದಾರರು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಕಾಂಗ್ರೆಸ್ ಗೆಲ್ಲಲು ಕಾರಣವಾಯಿತು ಈ ಭಾರಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ ಹಿಂದೆ ರಾಜ್ಯದಲ್ಲಿ ಹಾಗೂ ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ದುರಾಡಳಿತಕ್ಕೆ ಮತದಾರರು ಬೇಸತ್ತು ಬಿಜೆಪಿ ಸೋಲಿಸುವ ಮೂಲಕ ತಕ್ಕಪಾಠ ಕಲಿಸಿದ್ದಾರೆ. ಈ ಉಪ ಚುನಾವಣೆಯ ಫಲಿತಾಂಶ ೨೦೨೮ರ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಹಿರಿಯ ಮುಖಂಡರಾದ ಖಾದರಪಾಶಾ, ಶರಣಬಸವ ಮೇಟಿ, ಪುರಸಭೆ ಸದಸ್ಯರಾದ ಮಹ್ಮದ ರಫಿ, ಯಮನಪ್ಪ ದೇಗಲಮಡಿ, ರುದ್ರಪ್ಪ ಬ್ಯಾಗಿ, ಮುಖಂಡರಾದ ಹಾಜಿಬಾಬು ಕರಡಕಲ್,ಕುಪ್ಪಣ್ಣ ಕೊಡ್ಲಿ, ಸಂಜೀವಪ್ಪ ಚಲುವಾದಿ, ಅಲ್ಲಾವುದ್ದೀನ್ ಪಟೇಲ್, ಮಂಜುನಾಥ ಆನೆಹೊಸೂರು, , ಬಾಲನಗೌಡ, ಪರಸಪ್ಪ ಹುನಕುಂಟಿ, ಖಾಜಾಹುಸೇನ್ ಪೂಲವಾಲೆ ಗದೆನಗೌಡ ಹಾಗೂ ಇತರರು ಇದ್ದರು.