ಯರಗುಂಟಿ:ಆಲಾಯಿ ಕುಣಿಬೆಂಕಿಯಲ್ಲಿ ಬಿದ್ದ ವ್ಯಕ್ತಿಗೆ ಸುಟ್ಟಗಾಯ ಆಸ್ಪತ್ರೆಗೆ ದಾಖಲು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಯರಗುಂಟಿ ಗ್ರಾಮದಲಿ ಆಲಾಯಿಕುಣಿಯಲ್ಲಿ ಬಿದ್ದ ವ್ಯಕ್ತಿಗೆ ಸುಟ್ಟ ಗಾಯವಾಗಿ ಆಸ್ಪತ್ರೆ ಗೆ ದಾಖಲಾದ ಘಟನೆ ಜರುಗಿದೆ
ಮೊಹರಂ ಹಬ್ಬದ ನಿಮಿತ್ಯವಾಗಿ ಗ್ರಾಮದ ಆಲಾಯಿ ಕುಣಿಯಲಿ ಬೆಂಕಿ ಹಾಕಿದ್ದು ಅದರ ಹತ್ತಿರ ಆಗಮಿಸಿದ ಗ್ರಾಮದ ವ್ಯಕ್ತಿ ಹನಮಂತ ನಾಯಕ ಎನ್ನುವಾತ ಆಯತಪ್ಪಿ ಬೆಂಕಿಗೆ ಬಿದ್ದಿದ್ದು ಕೂಡಲೆ ಅಕ್ಕಪಕ್ಕದವರು ಆಗಮಿಸಿ ಬೆಂಕಿಯಿಂದ ಹೊರತೆಗೆದು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಗೆ ರಾಯಚೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ
ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡರಸುತಿದ್ದಾರೆ