ನಾಗರ ಅಮವಾಸ್ಯೆ ಅಮರೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಅಪಾರ ಭಕ್ತರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನಾಗರ ಅಮವಾಸ್ಯೆ ರವಿವಾರ ಬಂದಿರುವುದರಿಂದ ತಾಲೂಕಿನ ಐತಿಹಾಸಿ ಅಮರೇಶ್ವರ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
ನಾಗರಮವಾಸ್ಯೆ ಶ್ರಾವಣ ಮಾಸದ ಆರಂಭ ಅದರಲ್ಲಿಯು ರವಿವಾರ ಅಮವಾಸ್ಯೆ ಬಂದಿರುವುದರಿಂದ ತಾಲೂಕಿನ ಐತಿಹಾಸಿಕ ದೇವಸ್ಥಾನ ಅಮರೇಶ್ವರಕ್ಕೆ ಜನಸಾಗರವೇ ಹರಿದುಬಂತು ದೇವಸ್ಥಾನ ಕಿರಿದಾಗಿರುವದುರಿಂದ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಕಂಡುಬAತು
ದೇವಸ್ಥಾನದಲ್ಲಿ ಬೆಳಗಿನಿಂದಲೇ ಪೂಜಾ ಸೇವೆಗಳು ಸಾಂಗವಾಗಿ ನೆರವೇರಿದವು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಬಂದಿರುವುದರಿಂದ ನೂಕುನುಗ್ಗಲು ಆಗದಂತೆ ನಿಗಾವಹಿಸಲು ಪೊಲೀಸರು ಆಗಮಿಸಿ ಬಿಗಿಬಂದೋಬಸ್ತ ಮಾಡಿದ್ದರು
ಈ ಭಾಗದ ಆರಾಧ್ಯದೈವ ಅಮರೇಶ್ವರನಿಗೆ ರಾಜ್ಯ ಹೊರರಾಜ್ಯದಲ್ಲಿಯು ಅಪಾರ ಪ್ರಮಾಣದಲ್ಲಿ ಭಕ್ತರು ಇದ್ದು ಇಂತಹ ವಿಶೇಷ ಸಂದರ್ಭದಲ್ಲಿ ಆಗಮಿಸುವುದು ಸಹಜವಾಗಿದೆ
ದೇವಸ್ಥಾನದ ಮುಂಭಾಗದಲ್ಲಿಯೆ ವಾಹಗಳನ್ನು ನಿಲುಗಡ ಮಾಡುವುದರಿಂದ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ತೊಂದರೆಯಾಗುತ್ತಿತ್ತು ಆಡಳಿತ ಮಂಡಳಿ ಇಂತಹ ಸಂದರ್ಭದಲ್ಲಿ ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲುಗಡೆ ಮಾಡಿದರೆ ದೇವಸ್ಥಾನ ಬರುವ ಭಕ್ತರಿಗೆ ಓಡಾಡಲು ಅನುಕೂಲವಾಗುತ್ತದೆ ಎಂದು ಭಕ್ತರ ಅಭಿಪ್ರಾಯವಾಗಿದೆ