ಸಿಂಧನೂರು:ಮಾಜಿ ಸೈನಿಕ ರುದ್ರೇಶ ಅವರಿಗೆ ಭವ್ಯವಾದ ಸ್ವಾಗತ
ಕಲ್ಯಾಣ ಕರ್ನಾಟಕ ವಾರ್ತೆ
ಸಿಂಧನೂರು:ಭಾರತೀಯ ಸೇನೆಯಲ್ಲಿ ಸುಮಾರು ೨೬ ವರ್ಷಗಳ ವರೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿ ರಕ್ಷಣಾ ಇಲಾಖೆಯಿಂದ ಬಿಡುಗಡೆಯಾಗಿ ಜನಸಾಮಾನ್ಯರೊಂದಿಗೆ ನಾಗರಿಕ ಜೀವನಕ್ಕೆ ಬಂದಿರುವ ಮಾಜಿ ಯೋಧ ರುದ್ರೇಶ ತಂದೆ ಮಹಾಂತಪ್ಪ ಅವರನ್ನು ಮಾಜಿ ಸೈನಿಕ ವೀರೇಶ ಯಾದವ, ಅಮರೇಶ ಅಲಬನೂರು, ಸುರೇಶ ಹಾಗೂ ಸೈನಿಕ ಸ್ನೇಹಿತರು ಸಿಂಧನೂರಿನ ಗಣ್ಯ ನಾಗರಿಕರು ಜನಪ್ರತಿನಿಧಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಡೊಳ್ಳು ತಂಡದ ಕಲಾವಿದರು ಭವ್ಯವಾದ ಸ್ವಾಗತ ಕೋರಿ ಶುಭಾಶಯಗಳನ್ನು ಸಲ್ಲಿಸಿದರು.
ಇದೇ ವೇಳೆ ರುದ್ರೇಶ ಹಾಗೂ ಅವರ ಮಾಜಿ ಸೈನಿಕ ಸ್ನೇಹಿತರು ಭವ್ಯವಾದ ಮೆರವೆಣಿಗೆಯ ಮೂಲಕ ಸ್ವಾಗತ ಕೋರಿದ ಎನ್.ಸಿ.ಸಿ., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಹಾಗೂ ಡೊಳ್ಳು ಕುಣಿತದ ಕಲಾ ತಂಡದ ಕಲಾವಿದರನ್ನು ಆತ್ಮೀಯತೆಯಿಂದ ಗೌರವಿಸಿ ಸನ್ಮಾನಿಸಿ ದೊಡ್ಡತನ ಮೆರೆದಿದ್ದಾರೆ. ಈ ಎಲ್ಲ ಮಾಜಿ ಸೈನಿಕರನ್ನು ಕಂಡು ವಿದ್ಯಾರ್ಥಿಗಳು ಬಹಳ ಸಂತಸ ಪಟ್ಟರು.