ಸರಕಾರಿ ಆಸ್ಪತ್ರೆಯಲ್ಲಿ , ರಕ್ತಪರೀಕ್ಷೆಗೆ ಕೊಡಬೇಕು ಶುಲ್ಕ, ಹಣವಿಲ್ಲದೆ ಪರದಾಡುತ್ತಿರುವ ಬಡರೋಗಿಗಳು,
ಇದು ಸರಕಾರಿ ಆಸ್ಪತ್ರೆಯೋ?,ಖಾಸಗಿ ಆಸ್ಪತ್ರೆಯೋ,ಹಣವಿಲ್ಲದೆ ರಕ್ತಪರೀಕ್ಷೆ ಮಾಡುವುದಿಲ್ಲವಂತೆ..? ಇನ್ಮುಂದೆ ಬೆಡ್ ಗೂ ಕಟ್ಟಬೇಕಂತೆ ಶುಲ್ಕ !!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದರೆ ಇಲ್ಲಿ ಹಣಕೊಡಲೇಬೇಕು ಎನ್ನುವ ಫಾರ್ಮಾನು ಹೊರಡಿಸಲಾಗಿದ್ದು ಬಡವರು ಆಸ್ಪತ್ರೆಗೆ ಬಂದು ಸರತಿಸಾಲಿನಲ್ಲಿ ರಕ್ತಪರೀಕ್ಷೆಗೆ ನಿಂತು ಸರತಿ ಬಂದಾಗ ಹಣಕಟ್ಟಲು ಹಣ ಇಲ್ಲವೆಂದು ಮರಳಿ ಹೋದವರು,ಮನೆಗೆ ಹೋಗಿ ಹಣ ತಂದವರು,ಹಣವಿಲ್ಲದೆ ಹಿಂದಿರುಗಿದವರು ಕಂಡು ಬರುತಿದ್ದು ಇದಾವುದು ಖಾಸಗಿ ಆಸ್ಪತ್ರೆಯಲ್ಲ ಪಟ್ಟಣದ ಸರಕಾರಿ ಆಸ್ಪತ್ರೆಯು ಬಡವರ ರಕ್ತ ಹೀರುವ ಕತೆಯ ಪರಿಯಾಗಿದೆ
ಹೌದು ಪಟ್ಟಣದಲ್ಲಿರುವ ತಾಲೂಕಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಹೊಸ ನಿಯಮ ಸುರುವಾಗಿದ್ದು ಇದು ಯಾರು ಸುರುಮಾಡಿದರು ಎನ್ನುವುದೆ ನಿಗೂಢವಾಗಿದೆ
ಇತ್ತೀಚೆಗೆ ತಾಲೂಕಿನಲ್ಲಿ ವೈರಲ್ ಜ್ವರ ನೆಗಡಿ ಕೆಮ್ಮು ಪ್ರಾರಂಭವಾಗಿದ್ದು ತಾಲೂಕು ಹೊರತಾಲೂಕುಗಳಿಂದ ಸಾರ್ವಜನಿಕ ಆಸ್ಪತ್ರೆಗೆ ಸಾಕಷ್ಟು ಪ್ರಮಾಣದಲ್ಲಿ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯಲು ಬರುತಿದ್ದಾರೆ ರೋಗಿಗೆ ಜ್ವರ ಎನ್ನುತ್ತಲೆ ವೈದ್ಯರು ರಕ್ತ ಪರೀಕ್ಷೆಗೆ ಬರೆಯುವದು ಸಾಮಾನ್ಯವಾಗಿದೆ ರೋಗಿ ಅನಿವಾರ್ಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಹೋದರೆ ಆತನಿಗೆ ಎರಡುನೂರಾ ಐವತ್ತು ಮೂರುನೂರು ಹೀಗೆ ಕೇಳುತಿದ್ದಾರೆ
ಬಡವರು ನಮ್ಮದು ಪಡಿತರ ಚೀಟಿ ಇದೆ ಉಚಿತವಾಗಿ ಮಾಡಿ ಎಂದರೆ ಇಲ್ಲಿ ಪಡಿತರ ನಡೆಯುವುದಿಲ್ಲ ನೀವು ಹಣಕೊಡಲೇ ಬೇಕು ಎಂದು ಹೇಳುತ್ತಾರೆ ಹಣ ತರದವರು ಕೆಲವರು ತಮ್ಮ ಊರಿಗೆ ಹೋಗಿ ಹಣ ತಂದು ಪರೀಕ್ಷೆ ಮಾಡಿಸಿಕೊಂಡರೆ,ಕೆಲವರು ಹಣ ಇಲ್ಲದೆ ಯಾವ ಚಿಕಿತ್ಸೆ ಬೇಡ ಎಂದು ಮರಳಿದವರು ಇದ್ದಾರೆ
ಕರಡಕಲ್ಲಿನ ಗ್ರಾಮಸ್ಥರೊಬ್ಬರು ಚಿಕಿತ್ಸೆಗೆ ಬಂದಾಗ ರಕ್ತ ಪರೀಕ್ಷೆ ಬರೆಯಲಾಗಿದೆ ರಕ್ತ ಪರೀಕ್ಷೆ ಮಾಡಿಸಲು ಹೋದಾಗ ಮೂರುನೂರು ಕೇಳಿದ್ದಾರೆ ಹಣ ತಂದಿರಲಿಲ್ಲವAತೆ ಪುನಃ ಗ್ರಾಮಕ್ಕೆ ಹೋಗಿ ಹಣ ತಂದು ರಕ್ತ ಪರೀಕ್ಷೆ ಮಾಡಿಸುವಷ್ಟರಲ್ಲಿ ರಕ್ತ ಪರೀಕ್ಷಾ ಕೇಂದ್ರ ಬಂದ್ ಆಯಿತು ಆ ರೋಗಿ ಪುನಃ ಸಂಜೆವರೆಗೂ ಕಾದುಕುಳಿತುಕೊಂಡ ಘಟನೆ ಜರುಗಿತು ತುರ್ತು ಚಿಕಿತ್ಸೆ ಇದ್ದರೆ ಚಿಕಿತ್ಸೆ ಸಿಗದೆ ಪ್ರಾಣಕ್ಕೆ ಅಪಾಯವಾದರೂ ಹೊಣೆಯಾರು ಎಂದು ಸಾರ್ವಜನಿಕರು ಆರೋಪಿಸುತ್ತಾರೆ
ಕಸಬಾಲಿಂಗಸಗೂರಿನ ಮಹಿಳೆಯೊಬ್ಬರಿಗೂ ಎರಡುನೂರಾ ಐವತ್ತು ರೂಪಾಯಿಗಳನ್ನು ಕೇಳಿದಾರೆ ನಮ್ಮದು ಪಡಿತರ ಚೀಟಿ ಇದೆ ಎಂದು ಮಹಿಳೆ ಹೇಳಿದರೆ ಇಲ್ಲಿ ಪಡಿತರ ಚೀಟಿ ನಡೆಯೋಲ್ಲ ಹಣ ನೀಡಬೇಕು ಎಂದಿದ್ದಾರೆ
ವೈರಲ್ ಜ್ವರ ಹೆಚ್ಚಾಗಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆಗಾಗಿ ಬರುತಿದ್ದು ನಿತ್ಯವು ಲಕ್ಷಾಂತರಹಣ ಇಲ್ಲಿ ಬಡವರಿಮದ ಪಡೆಯಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಜಿಲ್ಲೆಯಲ್ಲಿ ಇರದ ನಿಯಮ ಲಿಂಗಸಗೂರಿನಲ್ಲಿ ಯಾಕೆ? ಜಿಲ್ಲೆಯ ಯಾವುದೆ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಹಣ ತೆಗೆದುಕೊಳ್ಳದೆ ಉಚಿತವಾಗಿ ಮಾಡಲಾಗುತ್ತಿದೆ ಎನ್ನಲಾಗುತಿದ್ದು ಕೆಲಪರೀಕ್ಷೆಗಳಿಗೆ ಮಾತ್ರ ಅಲ್ಪಪ್ರಮಾಣದ ಫೀಜು ಪಡೆಯಲಾಗುತ್ತದೆ ಅದರಲ್ಲಿ ಎಸ್ಸಿ/ಎಸ್ಟಿ,ಪಡಿತರಚೀಟಿದಾರರಿಗೆ ಉಚಿತವಾಗಿ ಮಾಡಲಾಗುತ್ತಿದೆ ಆದರೆ ಲಿಂಗಸಗೂರು ಆಸ್ಪತ್ರೆಯಲ್ಲಿ ಮಾತ್ರ ಹಣವಸೂಲಿ ನಿತ್ಯ ನಡೆಯುತ್ತಿದೆ
ಒಂದೆಡೆ ಜಿಲ್ಲಾಸ್ಪತ್ರೆ ಲಿಂಗಸಗೂರಿಗೆ ಸಿಗಲಿ ಎನ್ನುವ ಹೋರಾಟಗಳು ನಡೆದಿದ್ದರೆ ಇತ್ತ ರಕ್ತಪರೀಕ್ಷೆಗೆ ಹಣವಸೂಲಿ ನಡೆಯುತ್ತಿದೆ ಜಿಲ್ಲಾಸ್ಪತ್ರೆ ಬಂದರೆ ವಸೂಲಿ ಯಾವ ರೂಪದಲ್ಲಿ ಇರಬಹುದು ಎಂದು ಜನ ಮಾತನಾಡುತ್ತಿದ್ದಾರೆ
“ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಹಣ ಪಡೆಯುತ್ತಿರುವ ಬಗೆಗೆ ನನಗೆ ಯಾವುದೆ ಮಾಹಿತಿ ಇಲ್ಲ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಮಾತನಾಡಿ ಕ್ರಮವಹಿಸುತ್ತೇನೆ”-ಸಿಇಓ ಈಶ್ವರ ಕುಮಾರ ಕಾಂದೂ
“ಸರಕಾರಿ ನಿಯಮದ ಪ್ರಕಾರ ರಕ್ತಪರೀಕ್ಷೆಗೆ ಹಣಪಡೆಯಬೇಕಾಗಿತ್ತು ಇದುವರೆಗೂ ನಾವು ನಪಡೆಯುತ್ತಿರಲಿಲ್ಲ ಎಷ್ಟು ಪಡೆಯುತ್ತೇವೆ ಎನ್ನುವುದರ ನಾಮಫಲಕ ಹಾಕಿದ್ದೇವೆ(ಅದಕಿಂತಲೂ ಅಧಿಕ ಹಣ ಪಡೆಯಲಾಗುತ್ತದೆ) ಇನ್ನು ಮುಂದೆ ಬೆಡ್ ಗಳಿಗೂ ಹಣಪಡೆಯುತ್ತೇವೆ”-ಡಾ ರುದ್ರಗೌಡ ಪಾಟೀಲ್ ಮುಖ್ಯವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಲಿಂಗಸಗೂರು
“ಪಡಿತರಚೀಟಿದಾರರಿಗೆ ,ಎಸ್ಸಿ/ಎಸ್ಟಿಗಳಿಗೆ ಬಡವರಿಗೆ ರಕ್ತಪರೀಕ್ಷೆಗೆ ಹಣ ತೆಗೆದುಕೊಳ್ಳಬಾರದು ಜಿಲ್ಲೆಯಲ್ಲಿ ಬೇರೆ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳುವ ಬಗೆಗೆ ಮಾಹಿತಿ ಇಲ್ಲ ನಾನು ಲಿಂಗಸಗೂರು ಮುಖ್ಯವೈದ್ಯಾಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ”- ಡಾ ಸುರೇಂದ್ರಬಾಬು ಜಿಲ್ಲಾ ವೈದ್ಯಾಧಿಕಾರಿಗಳು ರಾಯಚೂರು