ವಾಕಿಂಗ್ ವೇಳೆ ಯೋಧನ ಮೇಲೆ ಮಾರಣಾಂತಿಕ ಹಲ್ಲೆ

Laxman Bariker
ವಾಕಿಂಗ್ ವೇಳೆ ಯೋಧನ ಮೇಲೆ ಮಾರಣಾಂತಿಕ ಹಲ್ಲೆ
WhatsApp Group Join Now
Telegram Group Join Now

ವಾಕಿಂಗ್ ವೇಳೆ ಯೋಧನ ಮೇಲೆ ಮಾರಣಾಂತಿಕ ಹಲ್ಲೆ,

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಪುರಸಭೆ ವ್ಯಾಪ್ತಿಯ ಸರಕಾರಿ ಪದವಿ ಕಾಲೇಜ್ ಹತ್ತಿರದಲಿ ಯೋಧ ವಾಕಿಂಗ್ ಮಾಡುವ ವೇಳೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜರುಗಿದೆ

ಪುರಸಭೆ ವ್ಯಾಪ್ತಿಯ ಕಸಬಾಲಿಂಗಸಗೂರಿನ ಯೋಧ ಚನ್ನಬಸವ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಬೆಳಗ್ಗೆ ಸರಕಾರಿ ಡಿಗ್ರಿ ಕಾಲೇಜು ಹತ್ತಿರದಲಿರುವ ಲೇಔಟ್ ದಲಿ ವಾಕ್ ಮಾಡುವಾಗ ಸ್ಥಳಕ್ಕೆ ಟಿ ವಿ ಎಸ್ ವಾಹನದಲಿ ಬಂದ ಅಮರೇಶ ತಂದೆ ಶರಣಪ್ಪ ಎಂಬಾತ ಹತ್ತಿರ ಬಂದವನೆ ಚನ್ನಬಸವನ ಮೇಲೆ ಮಚ್ಚು ಬೀಸಿದ್ದಾನೆ ಕೂಡಲೆ ಬೀಸುವ ಮಚ್ಚಿಗೆ ಯೋಧ ಚನ್ನಬಸವ ಕೈ ಅಡ್ಡ ತಂದಿದ್ದಾನೆ ಆದರು ಕೈ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿದ್ದು ಅವರಿಂದ ತಪ್ಪಿಸಿಕೊಂಡು ಲಿಂಗಸಗೂರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಬಂದಿದ್ದಾನೆ ಹಿಂದೆ ಬೆನ್ನು ಹತ್ತಿದ್ದ ಅಮರೇಶನನ್ನು ಪೊಲೀಸ್ ಹಿಡಿದು ಠಾಣೆಗೆ ಕರೆತಂದಿದ್ದಾರೆ
ಗಾಯಾಳು ಚನ್ನಬಸವನಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ
ಘಟನೆಗೆ ಕಾರಣ:ಘಟನೆ ಗೆ ಮುಖ್ಯ ಕಾರಣ ಭೂವಿವಾದ ಘಟನೆಗೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ ಘಟನೆ ಕುರಿತು ಲಿಂಗಸಗೂರು ಠಾಣೆಯಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ್ದಾರೆ

WhatsApp Group Join Now
Telegram Group Join Now
Share This Article