ಲಿಂಗಸಗೂರು:ಹೋಟೆಲ್ ಗೆ ನುಗ್ಗಿದ ಕಾರು,ಪ್ರಾಣಾಪಾಯದಿಂದ ಪಾರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಮಾತೇ ಮಾಣಿಕೇಶ್ವರಿ ಮಠದ ಹತ್ತಿರವಿರುವ ವೀರೇಶ ಎನ್ನುವವರ ಹೋಟೇಲ್ ಗೆ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ನುಗ್ಗಿದ್ದು ಯಾವುದೆ ಪ್ರಾಣಾಪಾಯವಾಗಿಲ್ಲವೆನ್ನುವುದೆ ಸಮಾಧಾನದ ಸಂಗತಿಯಾಗಿದೆ
ಬುಧವಾರ ಬೆಳಗ್ಗೆ ಹತ್ತುವರೆ ಹನ್ನೊಂದು ಗಂಟೆ ಸುಮಾರಿಗೆ ಬೀದರ ಶ್ರೀರಂಗಪಟ್ಟಣ ೧೫೦ಎ ರಾಷ್ಟಿಯ ಹೆದ್ದಾರಿಯ ಪಟ್ಟಣದ ಮಾತೇಮಾಣಿಕೇಶ್ವರಿ ಮಠದ ಹತ್ತಿರ ಘಟನೆ ನಡೆದಿದೆ
ವಾಹನವನ್ನು ಅಪ್ರಾಪ್ತರು ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು ಗುರುಗುಂಟಾ ಕಡೆಯಿಂದ ಲಿಂಗಸಗೂರು ಪಟ್ಟಣಕ್ಕೆ ಬರುತ್ತಿರುವಾಗ ಕಾರನ್ನು ಅತೀವೇಗವಾಗಿ ಚಲಾಯಿಸಿದ್ದೆ ಘಟನೆಗೆ ಕಾರಣ ಎನ್ನಲಾಗುತ್ತಿದೆ ಅತೀ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಹೋಡೆಯುತ್ತಾ ಹೋಟೇಲ್ ಕಂಪೌಂಡಗೋಡೆ ಕುಸಿತವಾಗಿ ಹೊಟೇಲ್ ಒಳಗೆ ಬಿದ್ದಿದ್ದು ಕಾರಿನಲ್ಲಿರುವವರು ಮಾತ್ರ ಪ್ರಾಣಾಪಾದಿಂದ ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ
ಹೋಟೆಲ್ ಕಾರ್ಯಕ್ರಮ ದ ನಿಮಿತ್ಯವಾಗಿ ಬಂದ್ ಮಾಡಲಾಗಿತ್ತು ಎಂದು ಹೇಳಲಾಗುತಿದ್ದು ಹೊಟೇಲ್ ತೆಗೆದಿದ್ದರೆ ಹೆಚ್ಚು ಜನಕ್ಕೆ ಅಪಾಯವಾಗುವ ಸಂಭವವಿತ್ತೆಂದು ಜನರು ಮಾತನಾಡುವುದು ಕೇಳಿಬಂತು


