ಗಂಡನಿದ್ದರು ವಿಧವೆಕೋಟಾದಲ್ಲಿ ನೇಮಕ ಆರೋಪ!!? ಸಿಡಿಪಿಓ ಇಲಾಖೆಯಲ್ಲಿ ತಾತ್ಕಾಲಿಕ ನೇಮಕಾತಿ ಪಟ್ಟಿ ಯಲ್ಲಿ ಅವಾಂತರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ವಿವಿಧ ಅಂಗನವಾಡಿಗಳಿಗೆ ನೂತನವಾಗಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ನೇಮಕಾತಿಯ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಗಂಡನಿದ್ದರು ವಿಧವೆಕೋಟಾದಲ್ಲಿ ನೇಮಕಾತಿ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ
ತಾಲೂಕಿನ ಸುಮಾರು ೧೫ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ೬೩ ಸಹಾಯಕಿಯರ ಹುದ್ದೆಗಳಿಗೆ ಸಿಡಿಪಿಓ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿತ್ತು ಅದರಂತೆ ಬಂದ ಅರ್ಜಿಗಳನ್ನು ಪರಿಶೀಲಿಸಿ ನೇಮಕಾತಿ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಹಲವಾರು ಅರ್ಹರಿಗೆ ಹುದ್ದೆ ಸಿಕ್ಕಿಲ್ಲ ಹಣಕೊಟ್ಟವರಿಗೆ ಮಾತ್ರ ಆಯ್ಕೆ ಮಾಡಲಾಗಿದೆ ಎನ್ನುವ ಕೂಗು ಒಂದೆಡೆ ಕೇಳಿ ಬರುತ್ತಿದ್ದರೆ ಇದು ನಿಜವೇ ಎಂಬAತೆ ಇಲ್ಲೊಂದು ಆರೋಪ ಕೇಳಿ ಬರುತ್ತಿದೆ
ತಾಲೂಕಿನ ಯಳಗುಂದಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ವಿಧವಾ ಕೋಟಾದಲ್ಲಿ ಆಯ್ಕೆ ಮಾಡಲಾಗಿದ್ದು ವಾಸ್ತವದಲ್ಲಿ ಸದರಿ ಮಹಿಳೆಗೆ ಗಂಡನಿದ್ದಾನೆAದು ಗಂಡನಿದ್ದರು ವಿಧವೆ ಕೋಟಾದಲ್ಲಿ ಅಂಗನವಾಡಿ ಹುದ್ದೆಗೆ ಆಯಕೆ ಮಾಡಲಾಗಿದೆ ಎಂದು ಗ್ರಾಮದ ದುರಗಪ್ಪನಾಯಕ ಆಕ್ಷೇಪಣೆ ಅರ್ಜೀಯನ್ನು ಸಲ್ಲಿಸಿದ್ದಾನೆ
ಇದೊಂದು ಮೇಲುನೋಟಕ್ಕೆ ಕಂಡು ಬರುವ ಆರೋಪವಾಗಿದ್ದು ಒಳಹೊಕ್ಕು ನೋಡಿದರೆ ಇನ್ನು ಎಷ್ಟು ಹವಾಮತರಗಳು ಹೊರಬಲಿವೆಯೊ ತನಿಝೆಗೆ ಒಳಪಡಿಸಿದಾಗ ಸತ್ಯಹೊರಬೀಳಲಿದೆ
ಗಂಡನಿದ್ದರು ವಿಧವೆ ಎಂದು ಸರ್ಟಿಫಿಖೇಟ್ ನೀಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದಾದರು ಯಾವಾಗ ಎನ್ನುವ ಸಾರ್ವಜನಿಕ ಪ್ರಶ್ನೆಗಳು ಕೇಳಿಬರುತ್ತಿವೆ
ಹೇಳಿಕೆ:ನಮಗೆ ದಾಖಲೆಗಳು ಮುಖ್ಯವಾಗುತ್ತವೆ ಅವುಗಳನ್ನು ನೋಡಿ ಆಯ್ಕೆ ಮಾಡಿರುತ್ತೇವೆ ಅಷ್ಟಕ್ಕೂ ಇದು ಕೊನೆಯಪಟ್ಟಿಯಲ್ಲಿ ಆಕ್ಷೇಪಣೆಗಳು ಬಂದರೆ ಸ್ವೀಕರಿಸಲಾಗುತ್ತದೆ ತಪ್ಪುಗಳಾಗಿದ್ದರೆ ಖಂಡಿತ ಸರಿಪಡಿಸುತ್ತೇವೆ- ನಾಗರತ್ನನಾಯಕ ಸಿಡಿಪಿಓ ಲಿಂಗಸಗೂರು


