ಸರ್ಜಾಪುರ: ಕುಡಿಯುವ ನೀರು ಕೇಳಲು ಹೋದವರಿಗೆ ಪ್ರಕರಣದಾಖಲಿಸಿದ ಪಿಡಿಓ, ರದ್ದುಪಡಿಸಿಲು ಗ್ರಾಮಸ್ಥರ ಮನವಿ

Laxman Bariker
ಸರ್ಜಾಪುರ: ಕುಡಿಯುವ ನೀರು ಕೇಳಲು ಹೋದವರಿಗೆ ಪ್ರಕರಣದಾಖಲಿಸಿದ ಪಿಡಿಓ, ರದ್ದುಪಡಿಸಿಲು ಗ್ರಾಮಸ್ಥರ ಮನವಿ
WhatsApp Group Join Now
Telegram Group Join Now

ಸರ್ಜಾಪುರ: ಕುಡಿಯುವ ನೀರು ಕೇಳಲು ಹೋದವರಿಗೆ ಪ್ರಕರಣದಾಖಲಿಸಿದ ಪಿಡಿಓ, ರದ್ದುಪಡಿಸಿಲು ಗ್ರಾಮಸ್ಥರ ಮನವಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಬೇಸಿಗೆ ಬಂದಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು ನಮಗೆ ನೀರುಕೊಡಿ ಎಂದು ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಆಕ್ರೋಶಕ್ಕೆ ಪಿಡಿಓ ಗ್ರಾಮಸ್ಥರ ಸುಮಾರು ೭೦-೮೦ ಜನರ ಮೇಲೆ ಪ್ರಕರಣ ದಾಖಲಿಸಿದ್ದು ವಾಪಸ್ ತೆಗೆಯಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶಟ್ಟಿಯವರಿಗೆ ಮನವಿ ಸಲ್ಲಿಸಿ ಹಿಂಪಡೆಯಬೇಕೆಂದು ಮನವಿ ಮಾಡಿದರು
ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಬಹಳ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು ಬೇಸಿಗೆ ಬಂದರೆ ಉಲ್ಬಣಿಸುತ್ತದೆ ಅದಕ್ಕಾಗಿ ಗ್ರಾಮಸ್ಥರು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪಿಡಿಓ ಗಮನಕ್ಕೆ ತಂದರು ಸಮಸ್ಯೆಯನ್ನು ಸರಿಪಡಿಸದೆ ಇದ್ದಾಗ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಪಂಚಾಯ್ತಿಗೆ ಬಂದು ಪ್ರತಿಭಟನೆ ನಡೆಸಿದರು ಆದರು ಪಿಡಿಓ ಉಡಾಫೆಯಾಗಿ ಮಾತನಾಡಿದಾಗ ವಿಷಯ ಪೊಲೀಸ್ ಠಾಣೆಗೆ ತಂದು ರಸ್ತೆತಡೆ ಮಾಡುತ್ತೇವೆ ಎಂದಾಗ ಪೊಲೀಸ್ ಬಗೆಹರಿಸುತ್ತೇವೆ ಎಂದು ವಾಪಸ್ ಕಳಿಸಿದ್ದಾರೆ ಈ ನಡುವೆ ಪಿಡಿಓ ಶೋಭಾರಾಣಿ ಗ್ರಾಮದ ಸುಮಾರು ೭೦-೮೦ ಜನರು ಗಲಾಟೆ ಮಾಡಿದ್ದಾರೆಂದು ಗ್ರಾಮಸ್ಥರ ವಿರುದ್ದ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದು ಅದನ್ನು ಕೂಡಲೇ ರದ್ದು ಪಡಿಸಬೇಕು ಮತ್ತು ನಮಗೆ ಕುಡಿಯುವ ನೀರು ಕೊಡಬೇಕು ಎಂದು ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಗ್ರಾಮದ ನೂರಾರು ಜನರು ಬಂದು ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಅಮರೇಶ ಸಾಲವಾಡಗಿ,ಬಾಬುರಾಮ,ಬಸವರಾಜ ಗುಂಟಿ, ಸಿದ್ದಮ್ಮ, ಯಂಕಮ್ಮ, ರಿಂದಮ್ಮ, ರಾಮಣ್ಣ ಕೂಡ್ಲೂರು, ಅಮರಪ್ಪ ರತ್ತಾಳ, ಶಿವಪುತ್ರಮ ಹುಚ್ಚಪ್ಪ, ಅಂಬಮ್ಮ, ಗಂಗಮ್ಮ ಶಟ್ಟಿ, ಮಲ್ಲಮ್ಮ ಬಿಳವಾರ, ಮಹಾಲಕ್ಷಿö್ಮÃ, ದೇವರಾಜ, ಗುರುರಾಜ, ಯಲ್ಲಪ್ಪ ಕಾವಲಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article