ಅನಧೀಕೃತ ಕ್ಲಿನಿಕ್ ಗಳ ಮೇಲೆ ಆರೋಗ್ಯಾಧಿಕಾರಿಗಳ ತಂಡ ದಾಳಿ, ಬೀಗ ಜಡಿದು ನೋಟೀಸ್ ಜಾರಿ

Laxman Bariker
ಅನಧೀಕೃತ ಕ್ಲಿನಿಕ್ ಗಳ ಮೇಲೆ ಆರೋಗ್ಯಾಧಿಕಾರಿಗಳ ತಂಡ ದಾಳಿ, ಬೀಗ ಜಡಿದು ನೋಟೀಸ್ ಜಾರಿ
WhatsApp Group Join Now
Telegram Group Join Now

ಕಲ್ಯಾಣ ಕರ್ನಾಟಕ ಸುದ್ದಿ ಎಫೆಕ್ಟ್
ಅನಧೀಕೃತ ಕ್ಲಿನಿಕ್ ಗಳ ಮೇಲೆ ಆರೋಗ್ಯಾಧಿಕಾರಿಗಳ ತಂಡ ದಾಳಿ, ಬೀಗ ಜಡಿದು ನೋಟೀಸ್ ಜಾರಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಕಲ್ಯಾಣ ಕರ್ನಾಟಕ ಪತ್ರಿಕೆಯು ನಿರಂತರವಾಗಿ ನಕಲಿ ವೈದ್ಯರು ಹಾಗೂ ಬಂಗಾಲಿ ವೈದ್ಯರ ಕುರಿತು ಸರಣಿ ಸುದ್ದಿಗಳನ್ನು ಪ್ರಕಟಿಸಿದ್ದು ಸುದ್ದಿಯನ್ನು ಗಮನಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದಂತೆ ತಾಲೂಕಾ ಆರೋಗ್ಯಾಧಿಕಾರಿಗಳ ತಂಡ ಪಟ್ಟಣ ಸೇರಿದಂತೆ ವಿವಿದೆಡೆ ದಾಳಿ ನಡೆಸಿ ಹಲವಾರು ಅನಧೀಕೃತ ಕ್ಲಿನಿಕ್ ಗಳಿಗೆ ಬೀಗ ಜಡಿದು ನೋಟಿಸ್ ಅಂಟಿಸಿ ಬಂದಿದೆ


ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣಭಾಗದಲ್ಲಿಯು ಬಂಗಾಲಿ ನಕಲಿ ವೈದ್ಯರು ಹಾಗೂ ಇತರೆ ಯವರು ಅನಧೀಕೃತವಾಗಿ ಕ್ಲಿನಿಕ್ ಹಾಗೂ ಮೆಡಿಕಲ್ ಗಳನ್ನು ತೆಗೆದು ಭರ್ಜರಿಯಾಗಿ ಪ್ರಾಕ್ಟಿಸ್ ಮಾಡುವ ಕುರಿತು ಪತ್ರಿಕೆಯು ಅಗ್ರಲೇಖಗಳನ್ನು ಮಾಡಿ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿತ್ತು ದಿನ್ನು ಗಮನಿಸಿದ ಆರೊಗ್ಯ ಇಲಾಖೆಯು ವಿವಿಧ ಭಾಗಗಳಲ್ಲಿ ಸಂಚರಿಸಿ ಅನಧೀಕೃತ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿ ಕೆಪಿಎಂ ನಿಯಮದಡಿಯಲ್ಲಿ ನಡೆಯುತ್ತಿದೆಯಾ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿ ನಕಲಿ ಎಂದು ಕಂಡು ಬಂದರೆ ಅಂತಹ ವ್ಯದ್ಯರ ಕ್ಲಿನಿಕ್ ಗಳಿಗೆ ಬೀಗ ಜಡಿಯುವ ಕೆಲಸ ನಡೆಯುತ್ತಿದೆ
ಮೊದಲದಿನ ಮಸ್ಕಿ ಭಾಗದಲ್ಲಿ ಓಡಾಡಿದ ತಂಡ ಮಸ್ಕಿ ಹಾಗೂ ಸಾನಬಾಳ ಗ್ರಾಮದಲ್ಲಿ ಸೇರಿ ೪ ಸಂತೆಕಲ್ಲೂರಿನಲ್ಲಿ ೩ ಒಟ್ಟು ೭ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದೆ ಹಾಗೆ ಗುರುಗುಂಟಾದಲ್ಲಿ ದಾಳಿ ನಡೆಸಿ ಎರಡು ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ
ಇAದು ಲಿಂಗಸಗೂರು ಪಟ್ಟಣದ ವಿವಿದೆಡೆ ದಾಳಿ ನಡೆಸಿದ ತಂಡ ಸುಮಾರು ಎಂಟತ್ತು ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿರುವುದಾಗಿ ಹೇಳುತ್ತಾರೆ ಕರಡಿ ಡಾಕ್ಟರ್, ಖಾಜಾಹುಸೇನ,ಜಾವೇದ, ಮುರ್ತುಜಾ ಸೇರಿದಂತೆ ಹಲವು ಅನಧೀಕೃತ ಕ್ಲಿನಿಕ್ ಗಳಿಗೆ ತೆರಳಿ ಸಂತೆಬಜಾರಿನ ಬಂಗಾಲಿ ವ್ಯದ್ಯ ಕುಮಾರ ಸೇರಿದಂತೆ ಸುಮಾರು ಎಂಟತ್ತು ಕ್ಲಿನಿಕ ಗಳ ಮೇಲೆ ದಾಳಿ ನಡೆಸಿದರು
ತಾಲೂಕಾ ಕೇಂದ್ರ ಸೇರಿದಂತೆ ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿಯು ಇಂತಹ ನಕಲಿ ವೈದ್ಯರ ಹಾವಳಿ ಹೆಚ್ಚಿದ್ದು ತಂಡ ಇನ್ನಷ್ಟು ದಾಳಿ ನಡೆಸಬಹುದೆ ಕಾದುನೋಡೋಣ
ತಂಡದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ ಅಮರೇಶ ಪಾಟೀಲ್ ತಾಲೂಕಾ ಆಯುಷ್ಯ ಅಧಿಕಾರಿ ಡಾ ಡಿ ಎಚ್ ಹುಲ್ಲೂರು ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಸೇರಿದಂತೆ ಇದ್ದರು

ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದಂತೆ ಅನಧೀಕೃತ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಕ್ರಮವನ್ನು ಅಲ್ಲಿ ನಿರ್ಣಯಿಸಲಾಗುತ್ತದೆ” – ಡಾ ಅಮರೇಶ ಪಾಟೀಲ್ ತಾಲುಕಾ ಆರೋಗ್ಯಾಧಿಕಾರಿಗಳು ಲಿಂಗಸಗೂರು

WhatsApp Group Join Now
Telegram Group Join Now
Share This Article