ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯದ ಕಂಪೌಂಡ ಕಾಮಗಾರಿ ಕಳಪೆ ಬಿಲ್ ತಡೆಯುವಂತೆ ಒತ್ತಾಯ
ಹ್ಯಾಬಿಟೇಟ್ ಕೇಂದ್ರದಿಂದ ನಡೆಯುತ್ತಿರುವ ಕಾಮಗಾರಿ, ಸ್ಥಳದ ಮೇಲೆ ಇರದ ಉಸ್ತುವಾರಿಗಳು!!
ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದ ತಾಯಿಮಕ್ಕಳ ಆಸ್ಪತ್ರೆಯ ಹತ್ತಿರವಿರುವ ಅಲ್ಪಸಂಖ್ಯಾತ ಇಲಾಖೆಯ ಮುರಾರ್ಜಿ ವಸತಿ ಶಾಲೆಗೆ ನೂತನವಾಗಿ ಕಂಪೌಂಡ ನಿರ್ಮಾಣ ಮಾಡಲಾಗುತ್ತಿದ್ದು ಕಾಮಗಾರಿಗೆ ಬಳಸುವ ಸಾಮಾಗ್ರಿ ಸೇರಿದಂತೆ ಎಲ್ಲವೂ ಕಳಪೆಯಾಗಿದ್ದು ಕೂಡಲೇ ಬಿಲ್ ತಡೆಯಬೇಕು ಎಂದು ಕರ್ನಾಟಕ ಬಹುಜನ ಚಳುವಳಿಯ ತಾಲೂಕಾಧ್ಯಕ್ಷ ಅಮರೇಶ ಗೋಸ್ಲೆ ಒತ್ತಾಯಿಸಿದ್ದಾರೆ
ಸದರಿ ಕಾಮಗಾರಿಯಲ್ಲಿ ಕಳಪೆಮಟ್ಟದ ಹಾಲೊಬ್ಲಾಕ್ ಬಳಸಲಾಗುತಿದ್ದು ಅವುಗಳು ಕ್ಯೂರಿಂಗ್ ಮಾಡದೆ ಕೈಯಲ್ಲಿ ಹಿಡಿದರೆ ಮುರಿದು ಬೀಳುತ್ತವೆ ಅಂತಹ ಹಾಲೋಬ್ಲಾಕ್ ಗಳನ್ನು ಬಳಸಿದ್ದಾರೆ ಅಡಿಪಾಯವನ್ನು ಕೇವಲ ಮೇಲ್ಭಾಗದಲ್ಲಿ ಹಾಕಲಾಗಿದೆ ಪಿಲ್ಲರಗಳಿಗೆ ರಿಂಗ್ ಗಳನ್ನು ಹತ್ತುಇಂಚು ಅಂತರದಲ್ಲಿ ಬಳಸಲಾಗಿದೆ ಕ್ಯೂರಿಂಗ್ ಮಾಡಲು ಸ್ಥಳದಲ್ಲಿ ನೀರಿನ ಲಭ್ಯತೆ ಇಲ್ಲ ಅದರಿಂದಾಗಿ ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ ಕಾಮಗಾರಿಯ ಸ್ಥಳದಲ್ಲಿ ವೆಚ್ಚದ ಬಗೆಗೆ ಹಾಗೂ ಕಾಮಗಾರಿ ಮಾಡುವವರ ವಿವರ ಎಷ್ಟುದಿನದಲ್ಲಿ ಮಾಡಬೇಕು ಎಷ್ಟುಹಣ ಮಂಜೂರಿಯಾಗಿದೆ ಏನೊಂದು ಮಾಹಿತಿ ದೊರೆಯುವುದಿಲ್ಲ ಕಾಮಗಾರಿಗೆ ಬಳಸುವ ಮರಳು, ಕಬ್ಬಿಣ ಸೇರಿದಂತೆ ಪರಿಕರಗಳು ಗುಣಮಟ್ಟದಿಂದ ಕೂಡಿಲ್ಲ ಕಾಮಗಾರಿಯ ಉಸ್ತುವಾರಿ ವಹಿಸಿಬೇಕಾದ ಹ್ಯಾಬಿಟೇಟ್ ಕೇಂದ್ರದ ಉಸ್ತುವಾರಿಗಳು ಇರುವುದಿಲ್ಲ ಕಾಮಗಾರಿ ನಡೆಯುವಾಗಲೆ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಂಡಿದೆ ಸದರಿ ಸ್ಥಳಲದಲ್ಲಿ ಶಾಲಾಮಕ್ಕಳು ಓಡಾಡುತ್ತಿರುತ್ತವೇ ಮಕ್ಕಳ ಮೇಲೆ ಅಥವ ಯಾವುದೆ ವ್ಯಕ್ತಿ ಜೀವಿಗಳ ಮೇಲೆ ಅಪ್ಪಿತಪ್ಪಿ ಬಿದ್ದರೆ ಜೀವಹಾನಿ ಗ್ಯಾರಂಟಿ ಕಳಪೆಯಾಗಿ ನಡೆಯುತ್ತಿರುವ ಕಾಮಗಾರಿಗೆ ಬಿಲ್ ಮಾಡಬಾರದು ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಮಾಡಬೇಕು ಎಂದು ಸಂಘಟನೆ ಒತ್ತಾಯಿಸುತ್ತಿದ್ದು ಕೂಡಲೆ ಸರಿಪಡಿಸಬೇಕು ಇಲ್ಲವಾದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಇಲಾಖೆಯ ನಿರ್ದೇಶಕರ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ
ಈ ಸಂದರ್ಭದಲ್ಲಿ ಜಾಂಬವ ಯುವಸೇನೆಯ ಶಶಿಕುಮಾರ, ಅಮರೇಶ ಪವಾರ ಸೇರಿದಂತೆ ಇದ್ದರು


