ತಾಲೂಕಿನಲ್ಲಿ ಎಲ್ಲೆಂದರಲ್ಲಿ ತುಂಬಿದ್ದಾರೆ ನಕಲಿ ಬಂಗಾಲಿ ವೈದ್ಯರು, ೧೦ನೇ ತರಗತಿ ಮುಗಿಯದಿದ್ದರು ಪ್ರಾಕ್ಟೀಸ್ ಬಲುಜೋರು, ಗ್ರಾಮೀಣರ ಜೀವ ಹಿಂಡುತ್ತಿದ್ದಾರೆ ಇವರನ್ನು ಕೇಳುವವರು ಯಾರು?

Laxman Bariker
ತಾಲೂಕಿನಲ್ಲಿ ಎಲ್ಲೆಂದರಲ್ಲಿ ತುಂಬಿದ್ದಾರೆ ನಕಲಿ ಬಂಗಾಲಿ ವೈದ್ಯರು, ೧೦ನೇ ತರಗತಿ ಮುಗಿಯದಿದ್ದರು ಪ್ರಾಕ್ಟೀಸ್ ಬಲುಜೋರು, ಗ್ರಾಮೀಣರ ಜೀವ ಹಿಂಡುತ್ತಿದ್ದಾರೆ ಇವರನ್ನು ಕೇಳುವವರು ಯಾರು?
WhatsApp Group Join Now
Telegram Group Join Now

ತಾಲೂಕಿನಲ್ಲಿ ಎಲ್ಲೆಂದರಲ್ಲಿ ತುಂಬಿದ್ದಾರೆ ನಕಲಿ ಬಂಗಾಲಿ ವೈದ್ಯರು, ೧೦ನೇ ತರಗತಿ ಮುಗಿಯದಿದ್ದರು ಪ್ರಾಕ್ಟೀಸ್ ಬಲುಜೋರು, ಗ್ರಾಮೀಣರ ಜೀವ ಹಿಂಡುತ್ತಿದ್ದಾರೆ ಇವರನ್ನು ಕೇಳುವವರು ಯಾರು?

ವಾಸದ ನಿವಾಸವೇ ಇವರ ಕ್ಲಿನಿಕ್, ನೆಲದ ಮೇಲೆ ಬಿದ್ದಿರುತ್ತವೆ ಮೆಡಿಷನ್!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಲ್ಲಿರುವ ಬಂಗಾಲಿ ನಕಲಿ ವೈದ್ಯರ ಬೆನ್ನು ಹತ್ತಿದ ಪತ್ರಿಕೆ ವಿಷಯ ಹುಡುಕುತ್ತಾ ಹೋದಂತೆ ತಾಲೂಕಿನ ಹಳ್ಳಿಹಳ್ಳಿಯಲಿ ಎಲ್ಲೆಂದರಲ್ಲಿ ಬಂಗಾಲಿ ನಕಲಿ ವೈದ್ಯರು ಹರಡಿಕೊಂಡಿದ್ದಾರೆ ಇವರು ಯಾವ ಶಾಲೆಯಲ್ಲಿಯು ವೈದ್ಯಕೀಯ ಕಲಿತಿಲ್ಲ ಚನ್ನಾಗಿ ಹತ್ತನೆ ತರಗತಿಯನ್ನು ಪಾಸ್ ಮಾಡದ ಕೆಲವರು ಭರ್ಜರಿಯಾಗಿ ಪ್ರಾಕ್ಟೀಸ್ ನಡೆಸಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು ಆದರು ಸತ್ಯ, ಆದರೆ ಆರೋಗ್ಯ ಇಲಾಖೆ ಮಾತ್ರ ಇದಾವುದು ತನಗೆ ಸಂಬಂಧವೇ ಇಲ್ಲವೆಂಬಂತೆ ಮೌನವಹಿಸಿರುವುದು ಕಂಡರೆ ಬಡವರ ಜೀವನ ಜೊತೆಗೆ ಆಟ ಆಡುತ್ತಿದೆಯಾ ಎನ್ನುವ ಸಂಶಯಗಳು ಮೂಡುತ್ತವೆ


ಬಂಗಾಲಿ ವ್ಯದ್ಯರೆಂದು ಲಿಂಗಸಗೂರು ಪಟ್ಟಣದಲ್ಲಿ ಹಲವೆಡೆ ಬಿಎಎಂಎಸ್ ಎಂದು ಕೆಲವರು ನಾಮಫಲಕಗಳನ್ನು ಹಾಕಿಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದರು ಹತ್ತಾರು ವರ್ಷಗಳಿಂದ ಯಾವ ಅಧಿಕಾರಿಗಳು ಇವರನ್ನು ಮಾತನಾಡಿಸಿಲ್ಲ ಎನ್ನುವುದೆ ಸೋಜಿಗ ಕಲ್ಯಾಣ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಲೆ ಸದ್ಯ ಕೆಲವರು ನಾಮಫಲಕ ಕಿತ್ತಿಹಾಕಿ ಕ್ಲಿನಿಕ್ ನ ಕದವನ್ನು ಬಂದ್ ಮಾಡಿದ್ದಾರೆ ಆದರೆ ಗ್ರಾಮೀಣ ಭಾಗದಲ್ಲಿ ಯಾವುದೆ ಹೆದರಿಕೆ ಇಲ್ಲದೆ ರಾಜಾರೋಷವಾಗಿ ಪ್ರಾಕ್ಟೀಸ್ ನಡೆಸಿದ್ದಾರೆ

oplus_0

ಗೊರೇಬಾಳದಲ್ಲಿ ಇಟ್ಟಿದ್ದಾರೆ ದೊಡ್ಡ ಮೆಡಿಕಲ್ ಶಾಪ್ ವೈದ್ಯರು ಬಂಗಾಲಿ: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಬಂಗಾಲಿಗಳೆ ದೊಡ್ಡದಾದ ಪಲ್ಲವಿ ಮೆಡಿಕಲ್ ಶಾಪ್ ಎಂದು ತೆಗೆದಿದ್ದು ಇದರಲ್ಲಿ ಕುಮಾರ ಎನ್ನುವವರು ಚಿಕಿತ್ಸೆ ನೀಡುತ್ತಿದ್ದಾರಂತೆ ಆದರೆ ಮೆಡಿಕಲ್ ನವ ನಾನು ಬಂಗಾಲಿ ಆದರೆ ಮೆಡಿಕಲ್ ಮಾತ್ರ ಇಟ್ಟಿದ್ದೇನೆ ಎನ್ನುತ್ತಾನೆ ಔಷಧಿಕೊಡಲು ವೈದ್ಯರ ಚೀಟಿ ಎಂದರೆ ಬೇರೆಕಡೆ ಇದ್ದಾರೆ ಎನ್ನುತ್ತಾನೆ ಅಷ್ಟರಲ್ಲಿಯೆ ಪೇಶಂಟ್ ಬಂದರು ಇಲ್ಲಿ ಡಾ ಕುಮಾರ ಎನ್ನುವವರು ನೋಡುತ್ತಾರೆ ಎಂದು ಹೇಳಿದರು ಮೆಡಿಕಲ್ ನವನ ಕಳ್ಳಾಟ ಹೊರಬಿತ್ತು ಅಸಲಿಗೆ ಇಲ್ಲಿ ಬಂಗಾಲಿ ವೈದ್ಯ ಬರುತಿದ್ದು ಇಲ್ಲಿಯೆ ಚಿಕಿತ್ಸೆ ನೀಡುತ್ತಾನೆ ಔಷಧಿ ಅಂಗಡಿಯು ಬಂಗಾಲಿಗಳದೆ ಆಗಿದೆ

ಗೋನವಾಟ್ಲ ತಾಂಡದಲ್ಲಿ ನಕಲಿ ವೈದ್ಯನ ಪ್ರಾಕ್ಟೀಸ್ ಬಲುಜೋರು: ವಾಸದ ಮನೆಯನ್ನೆ ಚಿಕಿತ್ಸಾಲಯವನ್ನಾಗಿ ಮಾಡಿಕೊಂಡು ಸಾಲದೆಂಬಂತೆ ಮಣಿಶಂಕರ ಸರದಾರ ಎನ್ನುವ ಎಂ,ಬಿಬಿಎಸ್ ಡಾಕ್ಟರ ನಾಮಫಕವನ್ನು ಹಾಕಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಇಲ್ಲಿ ಚಿಕಿತ್ಸೆ ನೀಡುವವನ ಹೆಸರು ದೇವರಾಜ ಮಂಡಲ ಎನ್ನುವ ಬಂಗಾಲಿ ಯಾಗಿದ್ದು ತನ್ನ ಶಿಕ್ಷಣ ನರ್ಸಿಂಗ್ ಎನ್ನುತ್ತಾನೆ ಸರ್ಟಿಫಿಕೇಟ್ ಎಲ್ಲಿ ಎಂದರೆ ಮನೆಯಲ್ಲಿವೆ ಎನ್ನುತ್ತಾನೆ ಯಾವ ಊರು ಎಂದರೆ ಸಿಂಧನೂರು ಎನ್ನುತ್ತಾನೆ ಆದರೆ ಇವನುಕೂಡ ಬಂಗಾಲಿಕ್ಯಾಂಪಿನವನೆ ಎನ್ನುತ್ತಾನೆ

ಎಲ್ಲೆಂದರಲ್ಲಿ ರಾಸಿ ರಾಸಿ ಔಷಧಿಗಳು: ಈಗಾಗಲೆ ಹೇಳಿದಂತೆ ಈತ ವಾಸದ ಮನೆಯಲ್ಲಿ ಕ್ಲಿನಿಕ್ ತೆಗೆದಿದ್ದು ಯಾವುದೆ ನಾಮಫಲಕ ಹಾಕಿಲ್ಲ ವೈದ್ಯರ ಫಲಕ ಒಳಗೆ ಇಟ್ಟಿದ್ದಾನೆ ಇಡೀ ಮನೆಯಲ್ಲಿ ನೆಲದ ಮೇಲೆಯೆ ಔಷಧಿಗಳು ಎಲ್ಲೆಂದರಲ್ಲಿ ಹಾಕಿದ್ದಾನೆ ಔಷಧಿಯನ್ನು ಹೇಗೆ ಇಡಬೇಕು ಎನ್ನುವ ಪದ್ದತಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕು ಆದರೆ ನೆಲವೇ ಈತನ ಔಷಧಾಲಯವಾಗಿದ್ದು ಅವು ಅವಧಿ ಮುಗಿದಿಯೋ ಅಥವ ರಸಾಯನಕ್ರಿಯೆ ಹೊಂದಿ ಏನಾದರು ಆಗಿವೆಯೋ ಬಲ್ಲವರಾರು ಆದರು ಈತ ಔಷಧಿಯನ್ನು ನೆಲದ ಮೇಲೆಯೆ ಹಾಕಿದ್ದು ಬಂದ ರೋಗಿಗಳಿಗೆ ಅವನ್ನೆ ನೀಡುತ್ತಾನೆ ಆರೋಗ್ಯ ಇಲಾಖೆಯವರು ಇತ್ತ ಸುಳಿದಿಲ್ಲ ಡ್ರಗ್ಸ್ ನವರು ಭೇಟಿ ನೀಡಿಲ್ಲ ಎಂಥ ವಿಚಿತ್ರ, ಪ್ರತಿನಿತ್ಯ ಪ್ರಾಕ್ಟೀಸ್ ಮಾತ್ರ ಬಲುಜೋರು ನಡೆದಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು

ಗೋನವಾಟ್ಲದಲ್ಲಿ ಡ್ರಿಪ್ ಹಾಕಿದ್ದಾರೆ ಆದರೆ ವೈದ್ಯರೆ ನಾಪತ್ತೆ: ಗೋನವಾಟ್ಲ ಗ್ರಾಮ ಚಿಕ್ಕದಾದರು ಇಲ್ಲಿ ಸುಮಾರು ಮರ‍್ನಾಲ್ಕು ಜನ ಪ್ರಾಕ್ಟೀಸ್ ಮಾಡುತಿದ್ದು ಇವರು ಕೂಡ ವೈದ್ಯಕೀಯ ಶಿಕ್ಷಣ ಪಡೆದವರಲ್ಲ ವಿಚಿತ್ರವೆಂದರೆ ಪತ್ರಿಕೆ ಭೇಟಿ ನೀಡಿದ ಸಂದರ್ಭದಲ್ಲಿ ರೋಗಿಯೊಬ್ಬರಿಗೆ ಡ್ರಿಪ್ ಹಾಕಿ ಆತ ಬೇರೆ ಊರಿಗೆ ಹೋಗಿದ್ದ ರೋಗಿಗೆ ಹೆಚ್ಚುಕಡಿಮೆಯಾದರೆ ಜವಾಬ್ದಾರರಾರು?

ಪೂಲಬಾವಿಯಲ್ಲಿದ್ದಾನೆ ೧೦ನೇ ತರಗತಿ ಮುಗಿಸಿ ಪ್ರಾಕ್ಟಿಸ್ ಸುರುಮಾಡಿದ್ದಾನೆ: ತಾಲೂಕಿನ ಪೂಲಬಾವಿ ಗ್ರಾಮದಲ್ಲಿ ಹತ್ತನೆ ತರಗತಿ ಮುಗಿಯುತ್ತಲೆ ವೈದ್ಯನಾಗಿದ್ದಾನೆ ಮೃತ್ಯಂಜಯ ಈತನು ಬಂಗಾಲಿಯಾಗಿದ್ದು ಹತ್ತನೆ ತರಗತಿಗೆ ಹೇಗೆ ಚಿಕಿತ್ಸೆ ಕೊಡುತ್ತಿಯಾ ಎಂದರೆ ನಾನು ಎಲ್ಲಾ ಕಲಿತಿದ್ದೇನೆ ಎನ್ನುತ್ತಾನೆ ಎಲ್ಲಿ ಕಲಿತಿ ಎಂದರೆ ಸಿಂಧನೂರಿನ ಯಾವುದೊ ಒಂದು ಆಸ್ಪತ್ರೆ ಹೆಸರು ಃಏಳುತ್ತಾನೆ ಈತ ಕಲಿತದ್ದು ೧೯ನೇ ತರಗತಿಯಾದರು ಎಂ,ಬಿ ಬಿಎಸ್ ಡಾಕ್ಟರಂತೆ ಎಲ್ಲಾ ನಮೂನೆ ಚಿಕಿತ್ಸೆ ನೀಡುತ್ತಾನಂತೆ ಸಣ್ಣಪುಟ್ಟ ಖಾಯಿಲೆಗಳಿಗೆ ೧೫೦ರಿಂದ ೨೦೦ ತೆಗೆದುಕೊಳ್ಳುತ್ತಾನಂತೆ ಡ್ರಿಪ್ ಹಾಕಿದರೆ ೫೦೦ ಪಡೆಯುತ್ತಾನಂತೆ ಪಟ್ಟಣದಲ್ಲಿ ಪ್ರಾಕ್ಟಿಸ್ ಮಾಡುವ ನುರಿತ ವೈದ್ಯರು ಸಹ ಈತನಷ್ಟು ಫೀಜು ತೆಗೆದುಕೊಳ್ಳುತ್ತಾರೋ ಇಲ್ಲ ತಿಳಿಯದು ಈತ ಮಾತ್ರ ಫೀಜು ಜಬದಸ್ತ ತೆಗೆದುಕೊಳ್ಳುತ್ತಾನೆ ಈತನು ಮನೆಯಲ್ಲಿ ಔಷಧಿಗಳನ್ನು ಎಲ್ಲೆಂದರಲ್ಲಿ ಹಾಕಿದ್ದಾನೆ ಅವುಗಳನ್ನೆ ರೋಗಿಗಳಿಗೆ ನೀಡುತ್ತಾನೆ
ಇನ್ನು ಭಯಾನಕವೆಂದರೆ ಕೆಲ ನಕಲಿ ವೈದ್ಯರು ಅಬಾರ್ಷನ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತವೆ
ಒಟ್ಟಾರೆಯಾಗಿ ತಾಲೂಕಿನಲ್ಲಿ ಬಂಗಾಲಿ ನಕಲಿ ವೈದ್ಯ ರು ಹೆಚ್ಚುಹೆಚ್ಚು ಪ್ರಾಕ್ಟೀಸ್ ನಡೆಸುತಿದ್ದು ಗ್ರಾಮೀಣ ಜನರ ಜೀವನ ಜೊತೆಗೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳುವುದು ಯಾವಾಗ?

WhatsApp Group Join Now
Telegram Group Join Now
Share This Article