ನಕಲಿ ವೈದ್ಯರ ಹಾವಳಿ ವರದಿಗೆ ಡಿಎಚ್ ಒ, ಸ್ಪಂದನೆ, ಕ್ಲಿನಿಕ್ ಗೆ ಬೀಗಜಡಿಯಲು ಸೂಚನೆ, ತಾಲೂಕಾ ಆರೋಗ್ಯಾಧಿಕಾರಿಗೆ ತರಾಟೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲ್ಲಿ ನಕಲಿ ವೈದ್ಯನ ಬಗೆಗೆ ಡಾಕ್ಟರ್ ಶಿಕ್ಷಣ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಪಟ್ಟಣದಲ್ಲಿಯೆ ಕ್ಲಿನಿಕ್ ತೆಗೆದು ಪ್ರಾಕ್ಟಿಸ್ ನಡೆಸಿದರು ಕ್ಯಾರೆ ಎನ್ನದ ಇಲಾಖೆ ಎನ್ನುವ ಸುದ್ದಿಯನ್ನು ಪತ್ರಿಕೆ ಪ್ರಕಟಿಸಿದ್ದನ್ನು ಗಮನಿಸಿದ ಜಿಲ್ಲಾ ವೈದ್ಯಾಧಿಕಾರಿಯವರು ಕೂಡಲೆ ಸದರಿ ಕ್ಲಿನಿಕ್ ಬಂದ್ ಮಾಡಿಸಲು ತಾಲೂಕಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದಾರೆ
ಸದರಿ ಸುದ್ದಿಯ ಬಗೆಗೆ ತಾಲೂಕಾ ಆರೋಗ್ಯಾಧಿಕಾರಿಗೆ ಸೂಚಿಸಿ ಕ್ಲಿನಿಕ್ ತೆಗೆದು ಚಿಕಿತ್ಸೆ ನೀಡುತ್ತಿದ್ದರೆ ಅದು ಕೆಪಿಎಂ ಕಾಯ್ದೆ ಪರವಾನಿಗಿ ಪಡೆದಿದೆಯಾ ಎನ್ನುವುದನ್ನು ಪರಿಶೀಲಿಸುವ ಅಧಿಕಾರ ತಾಲೂಕಾ ಆರೋಗ್ಯ ಅಧಿಕಾರಿಗೆ ಇದ್ದು ನೀವು ಏನು ಮಾಡುತ್ತಿದ್ದೀರಿ ಕೂಡಲೆ ಸದರಿ ಆಸ್ಪತ್ರೆಗೆ ಬೀಗ ಜಡಿಯಿರಿ ಹಾಗೆ ಮುಂದುವರೆದರೆ ಅವರ ಮೇಲೆ ಪ್ರಕರಣ ದಾಖಲಿಸಿ ಎಂದು ತಾಲೂಕಾ ಆರೋಗ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ
ತಾಲೂಕಿನಲ್ಲಿ ಹಲವಾರು ಕಡೆಯಲ್ಲಿ ಇಂತಹ ನಕಲಿ ವೈದ್ಯರು ಪ್ರಾಕ್ಟಿಸ್ ನಡೆಸುತ್ತಿದ್ದು ಆರೋಗ್ಯ ಅಧಿಕಾರಿಗಳು ಕೂಡಲೆ ಕ್ರಮವಹಿಸಿ ನಕಲಿ ವೈದ್ಯರ ಹಾವಳಿ ತಡೆಗಟ್ಟಬಹುದೆ ಕಾದುನೋಡೋಣ


