ಡಾಕ್ಟರ ಶಿಕ್ಷಣ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ, ಪಟ್ಟಣದಲ್ಲಿಯೆ ಪ್ರಾಕ್ಟೀಸ್ ನಡೆಸಿದರು ಕ್ಯಾರೆ ಎನ್ನದ ಇಲಾಖೆ!!?

Laxman Bariker
ಡಾಕ್ಟರ ಶಿಕ್ಷಣ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ, ಪಟ್ಟಣದಲ್ಲಿಯೆ ಪ್ರಾಕ್ಟೀಸ್ ನಡೆಸಿದರು ಕ್ಯಾರೆ ಎನ್ನದ ಇಲಾಖೆ!!?
WhatsApp Group Join Now
Telegram Group Join Now

ಡಾಕ್ಟರ ಶಿಕ್ಷಣ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ, ಪಟ್ಟಣದಲ್ಲಿಯೆ ಪ್ರಾಕ್ಟೀಸ್ ನಡೆಸಿದರು ಕ್ಯಾರೆ ಎನ್ನದ ಇಲಾಖೆ!!?

ಎಸ್ ಕುಮಾರ ಎಂದು ಹೇಳುವ ಬಂಗಾಲಿ ವೈದ್ಯ, ಪೈಲ್ಸ್, ಸೆಕ್ಸ್ ಗೆ ಚಿಕಿತ್ಸೆ ನೀಡುತ್ತಾನಂತೆ!!

ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕ್ರಮ ಜರುಗಿಸುವುದಾದರು ಯಾವಾಗ?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಈತನಿಗೆ ವೈದ್ಯಕೀಯ ಶಿಕ್ಷಣದ ಗಂಧ ಗಾಳಿ ಒಮದು ಗೊತ್ತಿಲ್ಲ ಆದರೆ ಪೈಲ್ಸ್ ಹಾಗೂ ಸೆಕ್ಸ್ ವೀಕನೆಸ್ ಗೆ ಚಿಕಿತ್ಸೆ ನೀಡುತ್ತೇನೆಂದು ಜನರಿಂದ ಹಣ ವಸೂಲಿ ಮಾಡುತ್ತಾನೆ ಹತ್ತಾರು ವರ್ಷಗಳಿಂದ ಲಿಂಗಸಗೂರು ಪಟ್ಟಣದಲ್ಲಿ ಚಿಕಿತ್ಸೆ ನೀಡುತ್ತಿದ್ದರು ಇಲಾಖೆ ಮೌನವಾಗಿರುವುದು ದುರಂತವೇ ಸರಿ?

ಪಟ್ಟಣದಲ್ಲಿರುವ ಸಂತೆಬಜಾರಿನ ಮಟನ್ ಮಾರ್ಕೆಟ್ ಹತ್ತಿರ ಕ್ಲಿನಿಕ್ ತೆಗೆದಿದ್ದು ಹತ್ತಾರು ವರ್ಷಗಳಿಂದ ಅಲ್ಲಿಯೆ ಚಿಕಿತ್ಸೆ ನೀಡುತ್ತಿದ್ದಾನೆ ಗ್ರಾಮೀಣ ಭಾಗದ ಜನರನ್ನೆ ಗುರಿಯಾಗಿಸಿಕೊಂಡು ನಿಮಗೆ ಪೈಲ್ಸ್ ಆಗಿದೆ ಸೆಕ್ಸ್ ವೀಕ್ ಇದೆ ಹೇಳುತ್ತಾ ನಿಮಗೆ ಚಿಕಿತ್ಸೆ ನೀಡಬೇಕು ಎಂದು ಸಾವಿರಾರು ಗಟ್ಟಲೆ ಹಣ ಪಡೆಯುತ್ತಾನೆ ಎನ್ನುವ ದೂರುಗಳು ಕೇಳಿ ಬರುತ್ತಿವೆ
ಶನಿವಾರ ವ್ಯಾಪಾರ ಬಲುಜೋರು: ಗ್ರಾಮೀಣ ಭಾಗದ ಜನರಿಗೆ ಗುರಿಯಾಗಿಸಿಕೊಂಡು ಶನಿವಾರ ಸಂತೆದಿನ ಈತನ ಕ್ಲಿನಿಕ್ ಪುಲ್ ಓಪನ್ ಇರುತ್ತದೆ ಗುಪ್ತ ಸಮಸ್ಯೆಗಳ ಬಗೆಗೆ ಈತನಲ್ಲಿಗೆ ಬಂದು ಚಿಕಿತ್ಸೆ ಪಡೆದುಹೋಗುತ್ತಾರೆ ಅದು ಎಷ್ಟರಮಟ್ಟಿಗೆ ಸಫಲವೋ ವಿಫಲವೊ ಯಾಕೆಂದರೆ ಅದು ಗುಪ್ತರೋಗ ಅಥವ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರು ಅವರಿಗೆ ಅದರ ಬಗೆಗೆ ಗಮನವು ಇರುವುದಿಲ್ಲ ಅಂತಹದ್ದನ್ನೆ ಗುರಿಯಾಗಿಸಿಕೊಂಡು ಭರ್ಜರಿ ವ್ಯಾಪಾರದ ಚಿಕಿತ್ಸೆ ನೀಡುವ ಈತ ಯಾವುದೆ ವೈದ್ಯಕೀಯ ಓದಿಲ್ಲ ಆದರು ಡಾಕ್ಟರ ಎನ್ನುವುದೆ ಸೊಜಿಗದ ವಿಷಯವಾಗಿದೆ
ಆಸ್ಪತ್ರೆಯ ಹೊರಗೆ ಮಾ ಮಾನಸಾ ಕ್ಲಿನಿಕ್ ಎಂದು ಬರೆದಿದ್ದು ಅದರ ಕೆಳಗೆ ಡಾ ಎಸ್ ಕುಮಾರ ಎಂದು ಬರೆದುಕೊಂಡಿದ್ದಾನೆ ಆದರೆ ನೀನು ಕಲಿತಾದ್ದರು ಏನು ನಿನ್ನ ಸರ್ಟಿಫಿಕೇಟ್ ಎಲ್ಲಿ ಎಂದರೆ ಯಾವುದು ಇಲ್ಲವೆನ್ನುತ್ತಾನೆ ತಾನು ಯಾವ ವೈದ್ಯಕೀಯ ಶಿಕ್ಷಣ ಪಡೆದಿದ್ದೇನೆ ಎನ್ನುವುದನ್ನು ಅಲ್ಲಿ ನಮೂದಿಸಿಲ್ಲ ಯಾಕೆಂದರೆ ಅಸಲಿಗೆ ಈತ ಶಿಕ್ಷಣವೇ ಪಡೆದಿಲ್ಲ
ಯಾವುದೆ ವೈದ್ಯಕೀಯ ಶಿಕ್ಷಣ ಪಡೆಯದೆ ಪಟ್ಟಣದಲ್ಲಿಯೆ ರಾಜಾರೋಷವಾಗಿ ಕ್ಲಿನಿಕ್ ತೆಗೆದು ಆರೋಗ್ಯ ಇಲಾಖೆಯ ಯಾವುದೆ ನಿಬಂಧನೆಗಳನ್ನು ಪಾಲಿಸದೆ ಪ್ರಾಕ್ಟೀಸ್ ಮಾಡುತ್ತಿದ್ದರು ಈತನ ಚಿಕಿತ್ಸೆಯ ಬಗೆಗೆ ಇಲಾಖೆ ಮೌನವಾಗಿರುವುದರ ಗುಟ್ಟೇನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ
ಇಂತಹ ನಕಲಿ ಡಾಕ್ಟರುಗಳಿಗೆ ಇನ್ನುಮುಂದಾದರು ಕಡಿವಾಣ ಬೀಳಬಹುದೆ? ಹೌದು ಯಾವುದೆ ವೈದ್ಯಕೀಯ ಶಿಕ್ಷಣವನ್ನು ಪಡೆಯದೆ ಮುಗ್ದ ಜನರನ್ನೆ ಗುರಿಯಾಗಿಸಿಕೊಂಡು ಚಿಕಿತ್ಸೆಯ ರೂಪದಲ್ಲಿ ಹಣ ಹಾಗೂ ಆರೋಗ್ಯವನ್ನು ಕಸಿಯುತ್ತಿರುವ ಇಂತವರಿಗೆ ಆರೋಗ್ಯ ಇಲಾಖೆ ಕ್ರಮವಹಿಸಿಉವುದಾದರು ಯಾವಾಗ
ಈತನೆ ಹೇಳಿದಂತೆ ತಾಲೂಕಿನ ಇತರೆಡೆಯಲ್ಲಿ ಬಂಗಾಲಿಗರೆ ಪ್ರಾಕ್ಟಿಸ್ ಮಾಡುತ್ತಿದ್ದಾರಂತೆ ಹಂಚಿನಾಳ ಹಾಗೂ ಗೋನವಾಟ್ಲ ತಾಂಡದಲ್ಲಿ ಇಂತಹವೆ ಚಿಕಿತ್ಸೆ ನೀಡುತ್ತಿದ್ದಾರೆಂದು ಹೇಳಲಾಗುತ್ತಿದ್ದು ಇನ್ನು ಹುಡುಕಿದರೆ ಎಷ್ಟುಜನ ಸಿಗಬಹುದು?

WhatsApp Group Join Now
Telegram Group Join Now
Share This Article