ನಂದವಾಡಗಿ ಏತ ನೀರಾವರಿ ವಿಳಂಬಕ್ಕೆ ಕಾರಣರಾದ ಗುತ್ತೆಗೆದಾರರ ಮೇಲೆ ಕ್ರಮ- ಎಂ.ಡಿ ಕುಲಕರ್ಣಿ

Laxman Bariker
ನಂದವಾಡಗಿ ಏತ ನೀರಾವರಿ ವಿಳಂಬಕ್ಕೆ ಕಾರಣರಾದ ಗುತ್ತೆಗೆದಾರರ ಮೇಲೆ ಕ್ರಮ- ಎಂ.ಡಿ ಕುಲಕರ್ಣಿ
WhatsApp Group Join Now
Telegram Group Join Now

ಮಧ್ಯ ಪ್ರದೇಶ ಮಾದರಿಯಲ್ಲಿ ಹರಿ ನೀರಾವರಿ, ಗುತ್ತಿಗೆದಾರರಿಗೆ ೩.೫೦ ಸಾವಿರ ಕೋಟಿ ರೂ ಬಿಲ್ ಬಾಕಿ
ನಂದವಾಡಗಿ ಏತ ನೀರಾವರಿ ವಿಳಂಬಕ್ಕೆ ಕಾರಣರಾದ ಗುತ್ತೆಗೆದಾರರ ಮೇಲೆ ಕ್ರಮ- ಎಂ.ಡಿ ಕುಲಕರ್ಣಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ :ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪೂರ ಜಲಾಶಯದಿಂದ ಹಿನ್ನೀರಿನಿಂದ ನಡೆಯುತ್ತಿರುವ ನಂದವಾಡಗಿ ಏತ ನೀರಾವರಿ ೩೬ ಸಾವಿರ ಎಕ್ಟರ ಜಮೀನಿಗೆ ನೀರು ಒದಗಿಸುವ ಗುರಿಯಾಗಿದ್ದು ಕಳೆದ ೭-೮ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರು ಕೆಲ ಭಾಗದಲ್ಲಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರಗಿಸಿ ಏತ ನೀರಾವರಿ ಪ್ರಗತಿಯಲ್ಲಿ ನಡೆಸಲಾಗುವದೆಂದು ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಪಾಕ ನಿರ್ದೇಶಕರಾದ ಕೃಷ್ಣಾಮೂರ್ತಿ ಬಿ. ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದರಿದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ನಂದವಾಡಗಿ ಏತ ನೀರಾವರಿ ಮೂರು ಹಂತದ ಹನಿ ನೀರಾವರಿ ಕಾಮಗಾರಿಯಾಗಿ ವಿನ್ಯಾಸ ಮಾಡಿದ್ದು ಆದರೆ ಹನಿ ನೀರಾವರಿ ಈ ಭಾಗದಲ್ಲಿ ಸಾದಕವಲ್ಲದ ಕಾರಣ ಮತ್ತು ರೈತ ಹಾಗೂ ಜನ ಪ್ರತಿ ನಿಧಿಗಳ ಒತ್ತಡ ಕಾರಣ ಮಧ್ಯ ಪ್ರದೇಶ ಮಾದರಿ ಪ್ರತಿ ೨ ಎಕ್ಟರಿಗೆ ಹರಿ ನೀರಾವರಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮೂದಲ ಹಂತದಲ್ಲಿ ಎಲ್&ಟಿ ಅವರು ಕಾಮಗಾರಿ ಪೂರ್ಣಗೊಳಿಸಿದ್ದಾರೆ ನೀರು ಲಿಫ್ಟ್ ಮಾಡುವ ಯೋಜನೆಯಾಗಿದು ಎರಡನೇ ಬ್ಲಾಕನಲ್ಲಿ ತೆಹಲ್ ಕಂಪನಿ ಗುತಿಗೆದಾರರು ಕಾಮಗಾರಿ ನಿಧನಾಗತಿಯಲ್ಲಿ ಸಾಗಿದ್ದು ವಿಳಂಬಕ್ಕೆ ಕಾರಣವಾಗಿದೆ, ಮೂರನೇ ಹಂತ ಎನ.ಡಿ ವಡ್ಡರವರ ಕಾಮಗಾರಿ ನಡೆದಿದ್ದೆ ವಿಳಂಬಕ್ಕೆ ಭೂ ಸ್ವಾಧೀನ ಪ್ರಕ್ರಿಯ ಹಾಗೂ ರೈತರಿಗೆ ಪರಿಹಾರ ನೀಡುವಲಿ ವಿಳಂಬವಾಗಿದೆ, ಏತ ನೀರಾವರಿ ಪ್ರತಿ ಎರಡು ಎಕ್ಟರಿಗೆ ರೈತರ ಜಮೀನುಗಳಿಗೆ ನೀರು ಬಿಡಲಾಗುತ್ತಿದ್ದು ಅಲ್ಲಿಂದ ರೈತ ಹರಿ ನೀರಾವರಿಯಾಗಿ ಚೆಕ್ ಡ್ಯಾಂ ಸ್ಪಿçಂಕ್ಲರ್ ಮೂಲಕ ಬಳಸಿಕೋಳುವುದಾಗಿದೆ .
ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಅಂದಾಜು ೩.೫೦ ಸಾವಿರ ಕೋಟಿ ರೂ ಗುತ್ತೆಗೆದಾರರಿಗೆ ಬಾಕಿ ಬಿಲ್ ಪಾವತಿಸಬೇಕಾಗಿದೆ, ಈಗಾಗಲೆ ನಾನು ಬೆಳಗ್ಗೆನಿಂದಲೆ ನಂದವಾಡಗಿ ಏತ ನೀರಾವರಿ ಕಾಮಗಾರಿ ಪರಿಶೀಲನೆ ಮಾಡಿದ್ದು ಈಗಿರುವ ಸಾಮಗ್ರಿಗಳನ್ನು ಬಳಸಿಕೊಂಡು ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುವದು ಆದಷ್ಟು ತೀವ್ರ ಗತಿಯಲ್ಲಿ ಏತ ನೀರಾವರಿ ಕಾಮಗಾರಿ ಪೂರ್ಣಗೋಳಿಸುತ್ತೆವೆ.
ರಾಂಪೂರ ಏತ ನೀರಾವರಿ ಪೂರ್ವ ಭಾಗದಲ್ಲಿ ಕಾಲುವೆಗಳನ್ನು ತೊಡ್ಡಿದ್ದು ನೀರು ಹರಿಯುತ್ತಿಲ್ಲ ಕಾರಣ ಇದು ಮೂರನೇ ಹಂತದಲ್ಲಿರುತ್ತದೆ, ಮಾರ್ಚನಲ್ಲಿ ಕ್ಲೋಜರ್ ಕಾಮಗಾರಿ ಮಾಡುವದು ಹಾಗೂ ನಿರ್ವಹಣೆಗಾಗಿ ಅಷ್ಟೊಂದು ಮೊತ್ತ ಹಣ ಇರುವುದಿಲ್ಲ, ಇದ್ದಿದರಲ್ಲಿ ಸಣ್ಣ ಪುಟ್ಟ ಕಾಮಗಾರಿ ನಿರ್ವಹಿಸಲಾಗುವದು, ಕಾಮಗಾರಿ ಕಳಪೆಯಾಗಿ ಕಂಡು ಬಂದಲ್ಲಿ ಬೇರೆ ವಿಭಾಗದಿಂದ ಪರಿಶೀಲಿಸಿ ವರದಿ ಅನ್ವಯ ಕ್ರಮ ಜರಗಿಸಲಾಗುತ್ತದೆ.
ನಾರಾಯಣಪೂರ ಬಲದಂಡೆ ಅಧುನಿಕರಣ ಕಾಮಗಾರಿಯಲ್ಲಿ ಹಲುವಾರು ದೂರುಗಳಿದ್ದು ನ್ಯಾಯಾಮೂರ್ತಿ ನಾಗಮೋಹನ ದಾಸ ವರದಿ ನಂತರ ಸರಕಾರ ಕ್ರಮ ಕೈಗೊಳ್ಳಲಾಗುವದು, ನಾನು ಈ ಭಾಗದವನೇ ಆಗಿದ್ದು ಆದಷ್ಟು ತೀವ್ರ ನಂದವಾಡಗಿ ಏತ ನೀರಾವರಿ ಪೂರ್ಣಗೋಳಿಸಲು ವಿಶೇಷ ಕಾಳಜಿವಹಿಸಲಾಗುವದು.
ಮೂದಲನೆ ಹಂತದಲ್ಲಿ ತೆಹಲ್ ಕಂಪನಿ ೨೮೮ ಕೋಟಿ ಎರಡನೇ ಹಂತದಲ್ಲಿ ೩೮೪ ಕೋಟಿ ಮೂರನೆ ಹಂತದ ಎನಡಿ ವಡ್ಡರ್ ಕಂಪನಿಗೆ ೪೬೩ ಕೋಟಿ ಬಿಲ್ ಹಣ ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆಂದರು.
ಈ ಸಂದರ್ಬದಲ್ಲಿ ಮುಖ್ಯ ಇಂಜಿನೆಯರ ಜಿ.ಜಿ ಪವಾರ, ಎಸ.ಇ ಆರ್.ಜಿ ರಾಠೋಡ, ಕಾರ್ಯನಿರ್ವಾಹಕ ಅಭಿಯಂತರರು ಸುರೇಂದ್ರ ರೆಡ್ಡಿ, ಎಇಇಗಳಾದ ನಾಗೇಶ, ಚಂದ್ರಕಾAತ ಮದ್ದಯ್ಯ, ಮಲ್ಲಪ್ಪ ಹಾಗೂ ಇತರರು ಭಾಗವಹಿಸಿದರು.

WhatsApp Group Join Now
Telegram Group Join Now
Share This Article