ಹಾದಿ ತಪ್ಪಿದ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುವ ಎಲಿಕ್ಯಾಪ್ಟರ್, ಅಧಿಕಾರಿಗಳು ತಬ್ಬಿಬ್ಬು!!

Laxman Bariker
ಹಾದಿ ತಪ್ಪಿದ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುವ ಎಲಿಕ್ಯಾಪ್ಟರ್, ಅಧಿಕಾರಿಗಳು ತಬ್ಬಿಬ್ಬು!!
WhatsApp Group Join Now
Telegram Group Join Now

ಹಾದಿ ತಪ್ಪಿದ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುವ ಎಲಿಕ್ಯಾಪ್ಟರ್, ಅಧಿಕಾರಿಗಳು ತಬ್ಬಿಬ್ಬು!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಲ್ಲಿ ನಡೆಯುತ್ತಿರುವ ಅಮರೇಗೌಡ ಪಾಟೀಲ್ ಬಯ್ಯಾಪುರರವರ ಮೊಮ್ಮಗನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಉತ್ತಿರುವ ಸಿಎಂ ಸಿದ್ದರಾಮಯ್ಯನವರು ಪ್ರಯಾಣಿಸುತ್ತಿರುವ ಎಲಿಕ್ಯಾಪ್ಟರ್ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗದೆ ಬೇರೊಂದು ಕಡೆ ಲ್ಯಾಂಡ್ ಆಗಿದ್ದು ಕ್ಷಣಕಾಲ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಗೊಂದಲ ಉಂಟಾದ ಘಟನೆ ಜರುಗಿತು
ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರರವರಮೊಮ್ಮಗನಾದ ಅಭಿಷೇಕ ಪಾಟೀಲರ ಮದುವೆ ಸಮಾರಂಭಕ್ಕೆ ಆಗಮಿಸುತಲಿದ್ದ ಸಿಎಂ ಸಿದ್ದರಾಮಯ್ಯನವರು ಪ್ರಯಾಣಿಸುತ್ತಿದ್ದ ಎಲಿಕ್ಯಾಪ್ಟರ್ ಬರುತ್ತದೆ ಎಂದು ಡಿಸಿ ಎಸ್ಪಿ ಸೇರಿದಂತೆ ಜಿಲ್ಲಾಡಳಿತ,ತಾಲೂಕಾಡಳಿತ ಭದ್ರತೆಯೊಂದಿಗೆ ರಾಯಚುರು ರಸ್ತೆಯಲಿ ನಿರ್ಮಾನ ಮಾಡಿದ್ದ ಎಲಿಪ್ಯಾಡನ ಹತ್ತಿರ ಸ್ವಾಗತಕ್ಕೆ ಕಾಯುತ್ತಾ ನಿಂತಿದ್ದರು ಆದರೆ ಸಿಎಂ ರವರ ಎಲಿಕ್ಯಾಪ್ಟರ್ ಪಟ್ಟಣದ ಕಲಬುರಗಿ ರಸ್ತೆಯ ಎಲಿಪ್ಯಾಡ ಗೆ ತೆರಳಿದೆ ಅದೆ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರ ಎಲಿಕ್ಯಾಪ್ಟರ್ ಕಲಬುರಗಿ ರಸ್ತೆಯಲಿರುವ ಎಲಿಪ್ಯಾಡ ಗೆ ಬರಬೇಕಾಗಿತ್ತು ಅಲ್ಲಿ ಸಿದ್ದರಾಮಯ್ಯನವರ ಎಲಿಕ್ಯಾಪ್ಟರ್ ಇರುವ ಕಾರಣ ಅದು ರಾಯಚೂರು ರಸ್ತೆಯ ಎಲಿಪ್ಯಾಡಗೆ ಆಗಮಿಸಿದೆ ಸಿಎಂ ಬರುತ್ತಾನೆಂದು ಆಗಮನಕ್ಕೆ ಕಾಯ್ದು ನಿಂತಿದ್ದ ಅಧಿಕಾರಿಗಳಿಗೆ ಹಾಗೂ ಬಯ್ಯಾಪುರ ಕುಟುಂಬದವರಿಗೆ ಸತೀಶ ಜಾರಕಿಹೊಳಿಯವರನ್ನು ಕಾಣುತ್ತಲೆ ಗೊಂದಲದ ವಾತಾವರಣ ಉಂಟಾಗಿದೆ
ಕೂಡಲೆ ಎಚ್ಚೆತ್ತ ಡಿಸಿ ಹಾಗೂ ಎಸ್ಪಿಯವರು ಕಲಬುರಗಿ ರಸ್ತೆಯಲಿರುವ ಎಲಿಪ್ಯಾಡಗೆ ದೌಡಾಯಿಸಿದ್ದಾರೆ ಆದರೆ ಅಷ್ಟೊತ್ತಿಗೆ ಖಾಸಗಿ ವಾಹನದಲ್ಲಿ ಸಿಎಂ ಸಿದ್ದರಾಮಯ್ಯ ಮದುವೆಯ ಮಂಟಪದ ಕಡೆಗೆ ಆಗಮಿಸುತ್ತಿದ್ದು ರಸ್ತೆಯಲ್ಲಿ ಟ್ರಾಫಿಕ್ ಜಾಂ ಆಯಿತು ಎನ್ನಲಾಗುತ್ತಿದೆ
ಎಲಿಕ್ಯಾಪ್ಟರ್ ಲ್ಯಾಂಡಗೆ ಎಡಟ್ಟಾದ್ದೆಲ್ಲಿ?: ಸಿಎಂ ಸಿದ್ರಾಮಯ್ಯ ಪ್ರಯಾಣಿಸುತ್ತಿರುವ ಎಲಿಕ್ಯಾಪ್ಟರ್ ಹಾಗೂ ಸತೀಶ ಜಾರಕಿಹೊಳಿಯವರು ಪ್ರಯಾಣಿಸುತ್ತಿದ್ದ ಎಲಿಕ್ಯಾಪ್ಟರ್ ಎರಡು ಹೆಚ್ಚುಕಡಿಮೆ ಒಂದೇ ವೇಳೆಯಲ್ಲಿ ಆಗಮಿಸಿರುವುದರಿಂದ ಪೈಲೆಟ್ ಗಳ ಅಜಾರುಕತೆಯಿಂದ ಲ್ಯಾಂಡ್ ಆಗುವ ಸ್ಥಳಗಳು ಬದಲಾವಣೆಯಾದವೇ ಎನ್ನುವ ಮಾತುಗಳು ಕೇಳಿಬರುತ್ತಿವೆ ಅಲ್ಲದೆ ಸಿದ್ದರಾಮಯ್ಯನವರ ಎಲಿಕ್ಯಾಪ್ಟರ ಬರುವಾಗ ಅದೆ ಸ್ಥಳದಲ್ಲಿ ಡಿಸಿಎಂ ಡಿಕೆಶಿಯವರ ಎಲಿಕ್ಯಾಪ್ಟರ್ ಅಲ್ಲೆ ನಿಂತಿತ್ತು ಇದು ಕಾರಣವಾಯಿತೊ ತಿಳಿಯದು ಆದರೆ ಸ್ಥಳ ಬದಲಾವಣೆಯಿಂದ ಮಾತ್ರ ಗೊಂದಲವಾದದ್ದು ಸತ್ಯ
ಭೇಟಿಯಾಗದ ಸಿಎಂ,ಡಿಸಿಎಂ:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಒಂದೆ ಕಾರ್ಯಕ್ರಮಕ್ಕೆ ಬಂದಿದ್ದರು ಪರಸ್ಪರ ಭೇಟಿಯಾಗಲಿಲ್ಲ ಒಬ್ಬರು ಬರುತ್ತಲೆ ಮತ್ತೊಬ್ಬರು ಪ್ರಯಾಣ ಬೆಳೆಸಿದರು
ಒಟ್ಟಾರೆಯಾಗಿ ಎಲಿಕ್ಯಾಪ್ಟರ್ ಯಾವ ತೊಂದರೆಯಿಂದ ಲ್ಯಾಂಡ್ ಆಗುವಲ್ಲಿ ಸ್ಥಳ ಬದಲಾವಣೆಯಾಯಿತೊ ತಿಳಿಯದು ಆದರೆ ಒಂದುಕ್ಷಣ ಎಲ್ಲರಿಗೂ ಗೊಂದಲ ಉಂಟಾದದ್ದಂತು ಸತ್ಯ

WhatsApp Group Join Now
Telegram Group Join Now
Share This Article