ತೊಗರಿ ಬೆಲೆ ಹೆಚ್ಚಿಸಿದ ವರ್ತಕರು, ಮಾರಾಟಕ್ಕೆ ಮುಗಿಬಿದ್ದ ರೈತರು, ಸರಕಾರಿ ತೊಗರಿ ಖರೀದಿ ಕೇಂದ್ರ ಬಣಬಣ!!

Laxman Bariker
ತೊಗರಿ ಬೆಲೆ ಹೆಚ್ಚಿಸಿದ ವರ್ತಕರು, ಮಾರಾಟಕ್ಕೆ ಮುಗಿಬಿದ್ದ ರೈತರು, ಸರಕಾರಿ ತೊಗರಿ ಖರೀದಿ ಕೇಂದ್ರ ಬಣಬಣ!!
WhatsApp Group Join Now
Telegram Group Join Now

ಲಿಂಗಸಗೂರು ಎಪಿಎಂಸಿ::
ತೊಗರಿ ಬೆಲೆ ಹೆಚ್ಚಿಸಿದ ವರ್ತಕರು, ಮಾರಾಟಕ್ಕೆ ಮುಗಿಬಿದ್ದ ರೈತರು, ಸರಕಾರಿ ತೊಗರಿ ಖರೀದಿ ಕೇಂದ್ರ ಬಣಬಣ!!

ಕಲ್ಯಾಣ ಕರ್ನಾಟಕ ವಾರ್ತೆ

(ಲಕ್ಷ್ಮಣ ಬಾರಿಕೇರ್)

ಲಿಂಗಸಗೂರು:ಪಟ್ಟಣದಲಿ ಸರಕಾರಿ ತೊಗರಿ ಖರೀದಿ ಪ್ರಾರಂಭವಾಗುತ್ತಿರುವAತೆ ಎಪಿಎಂಸಿ ವರ್ತಕರು ತೊಗರಿ ಬೆಲೆಯನ್ನು ಹೆಚ್ಚಿಸಿರುವುದರಿಂದ ಸರಕಾರಿ ಖರೀದಿ ಕೇಂದ್ರಕ್ಕೆ ಹೋಗದೆ ರೈತರು ಖಾಸಗಿ ವರ್ತಕರ ಅಂಗಡಿಗೆ ಮುಗಿಬಿದ್ದು ಮಾರಾಟ ಮಾಡುವುದು ಕಂಡುಬಂತು
ಇತ್ತೀಚೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶಾಸಕ ಮಾನಪ್ಪ ವಜ್ಜಲರು ಸರಕಾರಿ ಪ್ರಾಯೋಜಿತ ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿ ತಾಲೂಕಿನ ತೊಗರಿ ಬೆಳೆದ ರೈತರು ಸದರಿ ಕೇಂದ್ರದ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದ್ದರು ಅದರಂತೆ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರು ನೊಂದಾಯಿಸಿ ಮಾರಾಟಕ್ಕೆ ಮುಂದಾಗಿದ್ದರಿಂದ ಎಪಿಎಂಸಿಯಲ್ಲಿರುವ ವರ್ತಕರಿಗೆ ತೊಗರಿ ಬಾರದಂತಾಯಿತು ಇದರಿಂದ ಆತಂಕಕ್ಕೆ ಒಳಗಾದ ವರ್ತಕರು ಕೂಡಲೇ ತೊಗರಿ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಮಾಡಿ ಖರೀದಿಸಲು ಮುಂದಾದಾಗ ಹೆಚ್ಚಿನ ರೈತರು ಖಾಸಗಿ ಮಾರಾಟಗಾರರಿಗೆ ತಮ್ಮ ತೊಗರಿಮಾರಾಟಕ್ಕೆ ಮುಂದಾಗಿದ್ದರಿಂದ ಇಂದು ಪಟ್ಟಣದ ಎಪಿಎಂಸಿಯಲ್ಲಿ ಹೆಚ್ಚಿನ ರೈತರು ಆಗಮಿಸಿರುವುದು ಕಂಡುಬಂತು
ಬಣಗುಡುತ್ತಿರುವ ಸರಕಾರಿ ತೊಗರಿ ಖರೀದಿ ಕೇಂದ್ರ: ಎಪಿಎಂಸಿಯಲ್ಲಿ ವರ್ತಕರು ಏಳುಸಾವಿರದ ಏಳುನೂರು ಅಥವ ಎಂಟುನೂರಕ್ಕೆ ಖರೀದಿ ಮಾಡುತ್ತೇವೆ ಎನ್ನುತ್ತಲೆ ತೊಗರಿ ಬೆಳೆದ ರೈತರು ಸರಕಾರಿ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿದ್ದರು ಎಪಿಎಂಸಿಯ ಖಾಸಗಿ ಖರೀದಿದಾರರಿಗೆ ತೊಗರಿ ಮಾರಾಟ ಮಾಡಲು ಮುಂದಾಗಿದ್ದರಿಂದ ಸರಕಾರಿ ತೊಗರಿ ಖರೀದಿ ಕೇಂದ್ರದ ಮುಂದೆ ರೈತರು ಬಾರದೆ ಬಣಗುಡುತ್ತಿರುವ ದೃಶ್ಯ ಕಂಡು ಬಂತು
ಎರಡು ಕೆ,ಜಿ ಸೂಟ್, ಕಮಿಷನ್ ಮುರಿದರು ಖಾಸಗಿ ಅಂಗಡಿಗಳಿಗೆ ಬರುವ ರೈತರು: ಎಪಿಎಂಸಿಯಲ್ಲಿ ಖಾಸಗಿ ವ್ಯಾಪಾರಿಗಳು ರೈತರ ಮಾಲು ತೂಕ ಮಾಡುವಾಗ ಮೋಸ ಮಾಡಲಾಗುತ್ತದೆ ಎಂದು ಹಲವಾರು ಸಲ ರೈತಸಂಘ ಹೋರಾಟ ಮಾಡಿದರು ತೂಕದಲ್ಲಿ ಸೂಟ್ ಮುರಿಯುವುದು ಮಾತ್ರ ಎಗ್ಗಿಲ್ಲದೆ ನಡೆದಿದೆ ಎಂದು ಹೆಸರು ಹೇಳಲು ಇಚ್ಚಿಸದ ರೈತ ಆರೋಪ ಮಾಡುತ್ತಾನೆ ಪ್ರತಿ ಕ್ವಿಂಟಲ್ ಗೆ ಎರಡು ಕೆ,ಜಿ ಸೂಟ್ ಮುರಿಯಲಾಗುತ್ತದೆ, ಅಲ್ಲದೆ ಶೇ೨ರಷ್ಟು ಕಮಿಷನ್ ಮುರಿಯಲಾಗುತ್ತದೆ ನಗದಿಯಾದರೆ ಎಳುಸಾವಿರದ ಏಳುನೂರು ಅಥವ ಎಂಟುನೂರುಗಳಿಗೆ ಖರೀದಿ ಮಾಡುತ್ತಾರೆ ಒಂದು ತಿಂಗಳ ಆದರೆ ಎಂಟು ಸಾವಿರ ಕೊಡುತ್ತೇವೆಂದು ಖರೀದಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ
ಸರಕಾರಿ ತೊಗರಿ ಮಾರಾಟ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದರೆ ಎಂಟು ಸಾವಿರ ಹಾಗೂ ರಾಜ್ಯ ಸರಕಾರ ಐದುನೂರು ರೂ ನೀಡಲಾಗುತ್ತದೆ ಆದರೆ ಹಣ ತಡವಾಗಿ ಸಿಗುತ್ತದೆ ಅದಕ್ಕಾಗಿ ಖಾಸಗಿ ವ್ಯಾಪಾರಿಗಳಿಗೆ ನೀಡಿದರೆ ಹಣಬೇಗನೆ ಸಿಗುತ್ತದೆ ಎಂಬ ಕಾರಣದಿಂದ ತಮಗೆ ನಷ್ಟವಾದರು ಪರವಾಗಿಲ್ಲ ಎಂದು ಖಾಸಗಿಯವರ ಬಳಿಯೆ ವ್ಯಾಪಾರ ಮಾಡುವುದು ಕಂಡು ಬಂತು
ರೈತರು ಖಾಸಗಿಯಾಗಿ ಮಾರಾಟ ಮಾಡಿದರೆ ಸರಕಾರಿ ತೊಗರಿ ಖರೀದಿ ಕೇಂದ್ರದ ಸದುಪಯೋಗ ಯಾವಾಗ ಎನ್ನುವಂತಾಗಿದೆ

WhatsApp Group Join Now
Telegram Group Join Now
Share This Article