ಸಂಪಾದಕೀಯ
ಡಿ೨೬ರಿಂದ ಜ೨ರವರೆಗೆ ನಡೆಯುವ ಕಾರ್ಯಕ್ರಮ
ತತ್ವಪದಕಾರರ ನಾಡಿನಲ್ಲಿ ಪುನರ್ ಮನನದ ಮಹಾಯಾನ ಗುರುಕಾರುಣ್ಯ ಕಾರ್ಯಕ್ರಮ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗುರು ತಾಲೂಕು ಪುರಾತನಕಾಲದಿಂದಲೂ ಮಾತುಗಳ ಮೌಲ್ಯ ಉಳಿಸಿಕೊಂಡು ಬೆಳೆದುಬಂದ ನೆಲವಿದು ಅಂತೆಯೆ ಇಲ್ಲಿ ಮಾತಿಗೂ ಕೃತಿಗೂ ಸಮ್ಮೇಳಿತವಾದ ಬದುಕು ಸಹಜವಾಗಿ ಬದುಕಿದವರ ಬದುಕುಗಳು ಹಾಸುಹೊಕ್ಕಾಗಿವೆ ಅದನ್ನು ಪುನರ್ ನೆನಹು ಮಾಡಲು ವೀರಶೈವ ವಿದ್ಯಾವರ್ಧಕ ಸಂಘ ಮಹಾನ್ ಕೆಲಸ ಮಾಡುತ್ತಿರುವುದು ನಿಜಕ್ಕೂ ಸ್ತಯತ್ಯಾರ್ಹವಾಗಿದೆ
ವೀರಶೈವ ವಿದ್ಯಾವರ್ಧಕ ಸಂಘವು ಶ್ರೀ ಬಸವೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಬೆರ್ಳಳಿ ಹಬ್ಬ ಸಂಭ್ರಮದಲ್ಲಿ ನಾನು ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಎನ್ನುವ ಸಮಾನ ಮನಸ್ಕರ ತಂಡವು ದೂರವಾಗುತ್ತಿರುವ ಸಂಬAಧಗಳನ್ನು ಮನಸುಗಳನ್ನು ಒಂದೆಡೆ ತಂದು ನಿಲ್ಲಿಸುವ ಕೆಲಸಕ್ಕೆ ಕೈಹಾಕಿ ಗುರುಕಾರುಣ್ಯ ಭಾವೈಕ್ಯ ಬದುಕಿಗೆ ತತ್ವಪದ ಮಹಾಯಾನ ಎನ್ನುವ ಮಾನವ ಬಂಧುತ್ವ ಬೆಸೆಯುವ ಮಹಾನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ
ಈ ಮೊದಲೆ ಹೇಳಿದ ಹಾಗೆ ಸೊಸೆಯ ಶಾಪಕ್ಕೆ ಅತ್ತಿ ಸೊಸೆ ಗುಡ್ಡ ಕಲ್ಲಾಗಿರುವುದು ಕಣ್ಣೆದುರಿಗಿದೆ ಹಾಗೆ ಕೊರವಂಜಿಯ ಮಾತಿಗೆ ಸರ್ಜಾಪೂರದ ಹಳ್ಳ ಉಪ್ಪು ನೀರಾಗಿರುವುದು ಹಾಗೆ ಕೊರವಂಜಿಯ ಮಾತಿಗೆ ಗೋಧಿರಾಶಿ ಕಲ್ಲಾಗಿರುವುದು ಇದೇ ಕಸಬಾಲಿಂಗಸಗೂರು ಸೀಮೆಯ ಹೊಲದಲ್ಲಿ ಇದು ಆಡಿದ ಮಾತುಗಳೆ ಶಾಪವಾಗುತಿದ್ದವು ಅಂತಹ ನಡೆನುಡಿಯ ಜನ ಇಲ್ಲಿದ್ದರು ಎನ್ನುವುದಕ್ಕೆ ಇವು ತಾಜಾ ಉದಾಹರಣೆಗಳಾಗಿವೆ
ಆಯ್ದಕ್ಕಿ ಲಕ್ಕಮ್ಮ ಈ ನೆಲದ ವಚನಕಾರ್ತಿ ಇನ್ನು ತತ್ವಪದಕಾರರ ಸಾಲಿಗೆ ಸಂತೆಕಲ್ಲೂರಿನ ¸ಘನಮಠದಾರ್ಯರು, ಅಂಕಲಿಮಠದ ನಿರುಪಾದೀಶ್ವರರು, ನೀರಲಕೇರಿಯ ಬಸವಲಿಂಗ ಶರಣರು, ಯಲಗಟ್ಟಿಯ ವಡಿಕೆಪ್ಪ ತಾತನವರು ಈ ನೆಲದಲ್ಲಿ ಆಗಿಹೋಗಿದ್ದಾರೆ ಅವರೆಲ್ಲ ಈ ನೆಲದಲ್ಲಿ ಮಾನವತೆಯ ಸೆಲೆಯನ್ನು ಬಿತ್ತಿಹೋದವರೆ ಆಗಿದ್ದಾರೆ ತತ್ವ ಪದಗಳು ಎಂದರೆ ನೈತಿಕ ಧಾರ್ಮಿಕ, ಮತ್ತು ಆಧ್ಯಾತ್ಮೀಕ ಸತ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಹಾಡುಗಳ ರೂಪದಲ್ಲಿ ಹೇಳುವ ಸಾಹಿತ್ಯವಾಗಿದೆ
ಅಂತವರ ನೆಲದಲ್ಲಿ ಆಧುನಿಕತೆಗೆ ಸಿಲುಕಿ ಅವರ ಮಾತುಗಳು ಮರೆಯಾಗುತ್ತಿವೆ ಅದನ್ನು ಪುನರ್ ನೆನಪಿಸಬೇಕು ಮತ್ತೊಮ್ಮೆ ಮಾನವೀಯತೆ ಬಿತ್ತಬೇಕು ಮನಸುಗಳನ್ನು ಒಂದುಗೂಡಿಸಬೇಕೆAಬ ನಿಲುವಿನ ಆಶಯಗಳೊಂದಿಗೆ ಬಸವಂತ್ರಾಯ ಕುರಿ ಹಾಗೂ ಅವರ ತಂಡ ಒಮದು ವಾರಗಳ ಕಾಲ ಭಾವೈಕ್ಯದ ಬದುಕಿಗೆ ತತ್ವಪದಗಳ ಮಹಾಯಾನ ಎನ್ನುವ ಕಾರ್ಯಕ್ರಮ ಏರ್ಪಡಿಸಿ ಅದಕ್ಕೆ ನಾಡಿನ ಪ್ರಬುದ್ದ ವಿಚಾರವಂತರನ್ನು ಕರೆಯಿಸಿ ತತ್ವಪದ ವಾಚಿಸಿ ಅದನ್ನು ನುರಿತ ಕಲಾವಿದರಿಂದ ಹಾಡುಗಳನ್ನು ಹಾಡಿಸಿ ಅದನ್ನು ಬಿಡಿಸಿ ಹೇಳುವ ಮಹಾನ್ ಕೆಲಸಕ್ಕೆ ಕೈಹಾಕಿರುವುದು ದೊಡ್ಡ ಕೆಲಸವೇ ಸರಿ
ಇಂತಹ ಉತ್ತಮವಾದ ಮತ್ತು ಅಪರೂಪದ ಕಾರ್ಯಕ್ರಮವನ್ನು ತಪ್ಪದೆ ಭಾಗವಹಿಸಿ ಅದರ ಸ್ವಾದ ಅರಿತು ಬದುಕಿನಲಿ ನೆನಪಿಸಿ ನಡೆದರೆ ಅದೆ ಸಾರ್ಥಕ ಅಲ್ಲವೇ? ಅವರ ಪ್ರಯತ್ನಕ್ಕೆ ಕಲ್ಯಾಣ ಕರ್ನಾಟಕ ಪತ್ರಿಕೆ ಶುಭಹಾರೈಸುತ್ತದೆ
ಲಕ್ಷ್ಮಣ ಬಾರಿಕೇರ್ ಸಂಪಾದಕರು ಕಲ್ಯಾಣ ಕರ್ನಾಟಕ ಪತ್ರಿಕೆ


