ಲಿಂಗಸಗೂರು,ಹಟ್ಟಿ,ಮುದಗಲ್,ಕುಡಿಯುವ ನೀರಿನ ಸಮಸ್ಯೆ,ಪರಿಹಾರಕ್ಕೆ ಶಾಸಕ ವಜ್ಜಲ್ ಸದನದಲ್ಲಿ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕ್ಷೇತ್ರದ ಲಿಂಗಸಗೂರು,ಹಟ್ಟಿ ಹಾಗೂ ಮುದಗಲ್ ಪಟ್ಟಣಗಳಿಗೆ ಹತ್ತುದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ ಬೇಸಿಗೆ ಸಮಿಪಿಸುತ್ತಿದೆ ಕೃಷ್ಣಾನದಿ ಹತ್ತಿರವಿದ್ದರು ಕುಡಿಯುವ ನೀರುಕೊಡುವಲ್ಲಿ ಸರಕಾರ ವಿಫಲವಾಗುತ್ತಿದೆ ಎಂದು ಶಾಸಕ ವಜ್ಜಲ್ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದರು
ಲಿಂಗಸಗೂರು ಪಟ್ಟಣಕ್ಕೆ ಅಮೃತ ಕುಡಿಯುವ ನೀರು ಯೋಜನೆ ಜಾರಿಯಾಗಿದೆ ಆದರೆ ಅದು ಮುಗಿಯಲು ಎರಡು ವರ್ಷಗಳೆ ಬೇಕು ಹಾಗೆ ಹಟ್ಟಿ ಪಟ್ಟಣಕ್ಕೆ ಜೆಜೆಎಂ ಕಾಮಗಾರಿ ಮಂಜೂರಿಯಾಗಿದೆ ಅದು ವಿಳಂಬವಾಗುತ್ತಿದೆ ಆದರೆ ಮುದಗಲ್ ಪಟ್ಟಣಕ್ಕೆ ಯಾವುದೆ ಯೋಜನೆ ಇಲ್ಲ ಹಲವು ವರ್ಷಗಳ ಹಿಂದೆ ಮಮಜೂರಿಯಾದ ಯೋಜನೆ ಕುಂಟುತ್ತಾ ಸಾಗಿದೆ ಸದರಿ ಪಟ್ಟಣಗಳ ಜನತೆಗೆ ಸುಮಾರು ಹತ್ತುದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ ಕ್ಷೇತ್ರದ ಜನತೆ ಕುಡಿಯುವ ನೀರಿಗೆ ಒತ್ತಾಯಿಸಿ ನಿತ್ಯವು ಭೇಟಿಯಾಗಿ ಸಮಸ್ಯೆ ವಿವರಿಸುತ್ತಿದ್ದಾರೆ ನೀರು ಕೊಡಲು ಆಗುತ್ತಿಲ್ಲವೆ ಎಂದು ದೂರುತಿದ್ದಾರೆ
ಕೃಷ್ಣಾ ನದಿಯ ಪಕ್ಕದಲ್ಲಿರುವ ನಮ್ಮ ಕ್ಷೇತ್ರದ ನಗರಗಳಿಗೆ ಕನಿಷ್ಟ ಕುಡಿಯುವ ನೀರು ಕೊಡಲಾಗುತ್ತಿಲ್ಲವೆಂದು ಛೀ ಮಾರಿ ಹಾಕುವಂತಾಗಿದೆ ಸಚಿವರು ಪ್ರಶ್ನೆ ಕೇಳಿದಾಗಲೆಲ್ಲ ಹಾರಿಕೆಯ ಉತ್ತರ ಕೊಡುತ್ತಾ ಬಂದಿದ್ದಾರೆ ಎರಡುವರೆ ವರ್ಷದಿಂದ ಹೀಗೆ ಹೇಳುತ್ತಲೆ ಬರುತ್ತೀರಿ ಆದರೆ ನೀರು ಸಿಗುತ್ತಿಲ್ಲ ಕೂಡಲೆ ನೀರು ದೊರಕಿಸಿಕೊಡುವ ಯತ್ನ ಮಾಡಬೇಕು ಎಂದು ಸದನದಲ್ಲಿ ಒತ್ತಾಯಿಸಿದರು
ಶಾಸಕ ಮಾನಪ್ಪ ವಜ್ಜಲರ ಪ್ರಶ್ನೆಗೆ ಸಚಿವ ಭೈರೇತಿ ಬಸವರಾಜ ಉತ್ತರಿಸಿ ಈಗಾಗಲೆ ಲಿಂಗಸಗೂರು ಹಾಗೂ ಹಟ್ಟಿ ಪಟ್ಟಣದಲ್ಲಿ ಕಾಮಗಾರಿಯು ಪ್ರಗತಿಯಲ್ಲಿ ಮುದಗಲ್ ಕಾಮಗಾರಿಗೆ ಹಣ ನೀಡಲಾಗುತ್ತದೆ ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಉತ್ತರ ನೀಡಿದರು
ತೃಪ್ತರಾಗದ ಶಾಸಕರು ಬರಿ ಉತ್ತರ ನಮಗೆ ಬೇಕಾಗಿಲ್ಲ ಮೊದಲು ನೀರುಕೊಟ್ಟು ಜನರ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದ ಘಟನೆ ನಡೆಯಿತು


