*ಭಾರತೀಯ ವಿಜ್ಞಾನ ಸಂಸ್ಥೆ (IISc)ಸಮಿತಿಗೆ ಸಂಸದ ಜಿ ಕುಮಾರ್ ನಾಯಕರವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ಆಯ್ಕೆ*
ಕಲ್ಯಾಣ ಕರ್ನಾಟಕ ವಾರ್ತೆ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಸಮಿತಿಗೆ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ ನಾಯಕ ರವರನ್ನು ನಾಮನಿರ್ದೇಶೀತ ಸದಸ್ಯರಾಗಿ ಆಯ್ಕೆ ಮಾಡಿದ್ದು ಭಾರತದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲೊಂದಾಗಿರುವ ಇಸ್ರೋ ನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ಮಹತ್ವದ ಗೌರವ ಮತ್ತು ಸೌಭಾಗ್ಯವೆಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಜೊತೆಗೆ ನಾಮನಿರ್ದೇಶದ ಸದಸ್ಯರಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಇಸ್ರೋ ಸಂಸ್ಥೆಯ ಮುಂದಿನ ಪ್ರಗತಿಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಸಮೂಹ ಪ್ರಯತ್ನಗಳು ಇಸ್ರೋ ಸಂಸ್ಥೆಯ ದೂರ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಿ ಭಾರತದ ವೈಜ್ಞಾನಿಕ ಭವಿಷ್ಯವನ್ನು ಬಲಗೊಳಿಸಲಿದೆ ಎಂಬ ನಂಬಿಕೆ ಇದೆ ಎಂಬ ಆಶಯವನ್ನು ತಿಳಿಸಿದರು.


