ಜೀವನದ ಸತ್ಯತೆಯನ್ನು ತಿಳಿಸಿ ವ್ಯಕ್ತಿಯನ್ನು ಶಕ್ತಿಯನ್ನಾಗಿ ಮಾಡುವುದೆ ವಚನಗಳು-ಅಶೋಕ ಬರಗುಂಡಿ

Laxman Bariker
ಜೀವನದ ಸತ್ಯತೆಯನ್ನು ತಿಳಿಸಿ ವ್ಯಕ್ತಿಯನ್ನು ಶಕ್ತಿಯನ್ನಾಗಿ ಮಾಡುವುದೆ ವಚನಗಳು-ಅಶೋಕ ಬರಗುಂಡಿ
WhatsApp Group Join Now
Telegram Group Join Now

ಮನೆ-ಮನಗಳಲ್ಲಿ ವಚನ ವೈಭವ ಸಮಾರೋಪ::
ಜೀವನದ ಸತ್ಯತೆಯನ್ನು ತಿಳಿಸಿ ವ್ಯಕ್ತಿಯನ್ನು ಶಕ್ತಿಯನ್ನಾಗಿ ಮಾಡುವುದೆ ವಚನಗಳು-ಅಶೋಕ ಬರಗುಂಡಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಜೀವನದ ಸತ್ಯತೆಯನ್ನು ತಿಳಿಸುವುದರ ಮೂಲಕ ವ್ಯಕ್ತಿಯಲ್ಲಿ ಶಕ್ತಿಯನ್ನು ತುಂಬುವ ಕೆಲಸವನ್ನು ವಚನಗಳು ಮಾಡುತ್ತವೆ ಅದಕ್ಕಾಗಿ ಶರಣರ ವಚನಗಳನ್ನು ಅರಿಯುತ್ತಾ ಜೀವನದ ಸಾರ್ಥಕತೆಯನ್ನು ಪಡೆಯಬೇಕು ಎಂದು ಅಶೋಕ ಬರಗುಂಡಿಯವರು ಹೇಳಿದರು

oplus_0

ಸಮಾಜದಲ್ಲಿ ತುಂಬಿರುವ ಮೌಡ್ಯತೆಯನ್ನು ಕಳೆಯಲು ಶರಣರು ಸೇರಿದಂತೆ ಹಲವಾರು ವ್ಯಕ್ತಿಗಳು ಹೋರಾಟ ಮಾಡುತ್ತಲೆ ಬಂದಿದ್ದಾರೆ ಆದರೆ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎನ್ನುವುದು ಅಷ್ಟೆ ಸತ್ಯವಾಗಿದೆ ಸತ್ಯ ಹೇಳಲು ಹೋದವರ ಮೇಲೆ ತೊಂದರೆಗಳು ತಪ್ಪಿದ್ದಲ್ಲ ಎನ್ನುವಂತಾಗಿದೆ ಅದಕ್ಕಾಗಿ ಶರಣರು ವಚನಗಳ ಮೂಲಕ ಸಮಾಜದ ಮೌಡ್ಯತೆಯನ್ನು ತಿದ್ದಲು ಯತ್ನಿಸಿದಾಗ ಅವರ ಮೇಲೆ ರಕ್ತಕ್ರಾಂತಿಯು ನಡೆಯಿತು ನಾಡಿನ ಶರಣರು ಚದುರಿ ಹೋದರು ಅವರು ಹೋದೆಡೆಯಲ್ಲಿಯು ಸಮಾಜ ತಿದ್ದುವ ಕೆಲಸವನ್ನು ಮಾತ್ರ ಬಿಡಲಿಲ್ಲ
ಬಸವಣ್ಣನವರು ಇಷ್ಟಲಿಂಗವನ್ನು ನೀಡಿದ್ದಾರೆ ಲಿಂಗಾAಗ ಸಾಮರಸ್ಯ ಹೊಂದಿದಾಗ ಆತ್ಮ ಪರಮಾತ್ಮವಾಗಿ ತೋರುತ್ತದೆ ಅಂತಹ ಶಕ್ತಿ ಪ್ರತಿಯೊಬ್ಬರಲ್ಲಿಯು ಇದೆ ಎನ್ನುವುದನ್ನು ಶರಣರು ತೋರಿಸಿಕೊಟ್ಟಿದ್ದಾರೆ ಅವರೆಂದು ದೇವರನ್ನು ತೋರಿಸಲಿಲ್ಲ ನಿನ್ನಲ್ಲೆ ದೇವರು ಅಡಗಿದ್ದಾನೆ ಎನ್ನವುದನ್ನು ಸಾಬೀತುಪಡಿಸಿದ ದೊಡ್ಡ ಚಳುವಳಿಯಾಗಿತ್ತು ಜೀವನದ ನಿಜರ್ಥ ತಿಳಿಸುವ ವಚನಗಳ ನೀತಿಯನ್ನು ಸತ್ಯವನ್ನು ಬಿಚ್ಚಿಟ್ಟ ವ್ಯಕ್ತಿಗಳಿಗೆ ಕೆಲದುಶ್ಟ ಶಕ್ತಿಗಳು ಜೀವ ತೆಗೆಯುವ ಕೆಲಸ ಮಾಡಿದ್ದಾರೆ ಅದರಿಂದಾಗಿ ಎಂ ಎಂ ಕಲಬುರ್ಗಿಯಂತವರ ಮೇಲೆ ದಾಳಿಯಾಯಿತು
ಇಂದಿಗೂ ನಾವು ಎಂತಹ ಮೌಡ್ಯತೆಯಲ್ಲಿ ಬದುಕುತಿದ್ದೇವೆ ಎಂದರೆ ಇತ್ತೀಚೆಗೆ ಚಂದ್ರಯಾನಕ್ಕೆ ಉಪಗ್ರಹ ಕಳುಹಿಸುವಾಗ ತೊಂದರೆ ಉಂಟಾದಾಗ ವಿಜ್ಞಾನಿಗಳಾದವರು ಪೂಜೆಯನ್ನು ಸಲ್ಲಿಸುತ್ತಾರೆ ಎಂದರೆ ನಮ್ಮ ವಿಜ್ಷಾನಿಗಳಲ್ಲಿಯು ಎಂತಹ ಮೌಢ್ಯತೆ ಅಡಗಿದೆಯಲ್ಲವೇ ಎಂದು ಪ್ರಶ್ನಿಸಿದರು
ಶರಣರ ವಚನಗಳನ್ನು ತಿಳಿಸಿಕೊಡುವುದರ ಮೂಲಕ ಮೌಡ್ಯತೆಯನ್ನು ತೆಗೆಯುವ ಕೆಲಸ ನಿರಂತರವಾಗಿ ನಡೆಯುತಿದ್ದರು ಬಸವಣ್ಣನವರ ವಚನಗಳಿಗೆ ವಿಚಾರಗಳಿಗೆ ಮಸಿಬಳಿಯುವವರ ಕೆಲಸವು ನಿರಂತರವಾಗಿ ನಡೆಯುತ್ತಿದೆ ಅದಕ್ಕೆ ಪುಷ್ಟಿಕೊಡದೆ ನಿರಂತರವಾಗಿ ವಚನಗಳ ಸಾರ ನೀಡುವುದರ ಮೂಲಕ ಸಮಸಮಾಜದ ಕನಸು ನನಸು ಮಾಡುವುದರ ಜೊತೆಗೆ ವ್ಯಕ್ತಿಯು ಶಕ್ತಿಯಾಗಿ ಬೆಲೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು
ಬಸವಲಿಂಗಮಹಾಸ್ವಾಮಿಗಳು ಶಿರೂರು, ಹಾಗೂ ಇಲಕಲ್ಲಿನಗುರುಮಹಾಂತಶ್ರೀಗಳು ಆಶಿರ್ವಚನ ನೀಡಿದರು ವಿಜಯಮಹಾಂತೇಶ್ವರ ಶಾಖಾಮಠದ ಸಿದ್ದಲಿಂಗಮಹಾಸ್ವಾಮಿಗಳು ಇದ್ದರು
ವೈದ್ಯಕೀಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ ವನಮಾಲಾ ವಿಜಯಕುಮಾರರವರನ್ನು ಸನ್ಮಾನಿಸಲಾಯಿತು ವಿರುಪಾಕ್ಷಯ್ಯನವರ ಪುಸ್ತಕ ಬಿಡುಗಡೆ ಮಾಡಲಾಯಿತು ಸೋಮಶೇಖರ ಬಳಗಾನೂರು ಪ್ರಾಸ್ತಾವಿಕವಾಗಿ ಮಾತನಾಡಿದರು ದೊಡ್ಡಪ್ಪ ಸಾಹುಕಾರ ಸ್ವಾಗತಿಸಿದರು

WhatsApp Group Join Now
Telegram Group Join Now
Share This Article