ತೊರಣದಿನ್ನಿ: ಆಸ್ಪತ್ರೆ ಹಿಂದೆ ಶಿಶು ಶವ ಪತ್ತೆ, ಗರ್ಭಪಾತ ಮಾಡಿಸಿ ಎಸೆದುಹೋದವರು ಯಾರು!!?

Laxman Bariker
ತೊರಣದಿನ್ನಿ: ಆಸ್ಪತ್ರೆ ಹಿಂದೆ ಶಿಶು ಶವ ಪತ್ತೆ, ಗರ್ಭಪಾತ ಮಾಡಿಸಿ ಎಸೆದುಹೋದವರು ಯಾರು!!?
WhatsApp Group Join Now
Telegram Group Join Now

*ತೊರಣದಿನ್ನಿ: ಆಸ್ಪತ್ರೆ ಹಿಂದೆ ಶಿಶು ಶವ ಪತ್ತೆ, ಗರ್ಭಪಾತ ಮಾಡಿಸಿ ಎಸೆದುಹೋದವರು ಯಾರು!!?

ರುಂಡವಿಲ್ಲದ ನವಮಾಸ ತುಂಬದ ಭ್ರೂಣ ತಿಪ್ಪೆಯಲಿ ಪತ್ತೆ

ಕಲ್ಯಾಣ ಕರ್ನಾಟಕ ವಾರ್ತೆ

ವರದಿ: ಸಿದ್ದಾರ್ಥ ಪೊ.ಪಾ ಹಾಲಾಪೂರ

*ಮಸ್ಕಿ* ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ನವಜಾತ ಶಿಶುಗಳ ಹತ್ಯೆ ಪ್ರಕರಣ ಬಹಳಷ್ಟು ಕಂಡುಬರುತಿದ್ದು ಕಲ್ಲೂರಿನ ಘಟನೆ ಮಾಸುವ ಮುನ್ನವೇ , ಮಸ್ಕಿ ತಾಲ್ಲೂಕಿನ ತೊರಣದಿನ್ನಿ ಗ್ರಾಮದಲಿ ಕಂಡು ಬಂದಿದೆ

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದುಗಡೆ ಇರುವ ತಿಪ್ಪೆಯಲಿ ರುಂಡವಿಲ್ಲದ ದೇಹಮಾತ್ರ ಕಂಡು ಬಂದಿದ್ದು ಪ್ರಾಣಿಗಳು ತಿಂದು ಹಾಕಿದವೇ ಎನ್ನುವ ಅನುಮಾನಗಳು ಮೂಡುತ್ತವೆ
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿಯೆ ಶಿಶುವಿನ ಶವಕಂಡು ಬಂದಿದ್ದು ಆಸ್ಪತ್ರೆ ಯವರೆ ಗರ್ಭಪಾತ ಮಾಡಿಸಿ ಹೀಗೆ ಎಸೆದಿರಬಹುದೇ ಎನ್ನುವ ಮಾತುಗಳು ಕೇಳಿಬಂದವು

ಗರ್ಭಪಾತ ಘಟನೆ ಬೆಳಗಿನ ಜಾವ ನಡೆದಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ

ಈ ಒಂದು ಘಟನೆ ತೊರಣದಿನ್ನಿ ಆರೋಗ್ಯ ಕೇಂದ್ರದ ಹಿಂದುಗಡೆ ನಡೆದಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ, ಈ ಘಟನೆ ನಡೆದು ಐದಾರು ಗಂಟೆ ಕಳೆದರು ಸಹ ಯಾರೊಬ್ಬರು ಸದರಿ ಶಿಶು ಶವದ ಬಗೆಗೆ ಗಮನಹರಿಸಿಲ್ಲ
ವಿಷಯ ಮಾಧ್ಯಮ ದವರ ಗಮನಕ್ಕೆ ಬಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೊಟ್ಟಾಗ ಆಗ ವೈದ್ಯ ಅಧಿಕಾರಿ ಪಿ ಬಿ ಸಿಂಗ್ ರವರು ಭ್ರೂಣ ಇದ್ದ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿ ಈ ಘಟನೆ ಬಗ್ಗೆ ಮಾಹಿತಿ ಇಲ್ಲ , ನಮ್ಮ ಆಶಾ ಕಾರ್ಯಕರ್ತೆರು ಮತ್ತು ಸಿಬ್ಬಂದಿಗಳ ಜೊತೆ ಮಾತಾಡಿ ವಿಷಯ ತಿಳಿಸುತ್ತೇನೆ ಎಂದರು ವೈದ್ಯ ಅಧಿಕಾರಿ ಪಿಬಿ ಸಿಂಗ್ ಕವಿತಾಳ ಪೊಲಿಸ್ ಠಾಣಿಗೆ ವಿಷಯ ತಿಳಿಸಿದರು,ಮುಖ್ಯವಾಗಿ ಸಾರ್ವಜನಿಕ ಮಾತುಗಳೆಂದರೆ ಭ್ರೂಣ ಹತ್ಯೆಯ ಹಿಂದೆ ತೊರಣದಿನ್ನಿ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯರ ಸಹಮತ ಇದೆ,ಅದನ್ನು ಅವರು ನಮಗೆ ಗೊತ್ತೆ ಇಲ್ಲ ಎಂದು ಜಾರಿಕೊಳ್ಳುವ ಮಾತು ಆಡುತ್ತಾರೆ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ, ಸರಕಾರ ಮತ್ತು ಕಾನೂನು ಗರ್ಭಪಾತದ ಬಗ್ಗೆ ಎಷ್ಟೊಂದು ಕ್ರಮಕೈಗೊಂಡರು ಇಂತಹ ಹೀನ ನೀಚ ಕೃತ್ಯ ಘಟನೆಗಳು ನಡೆಯುತ್ತಿರುವುದು ಮನುಷ್ಯತ್ವಕ್ಕೆ ನಾಚಿಕೆ ಸಂಗತಿಯಾಗಿದೆ .ಈ ಬಗ್ಗೆ ಸ್ಥಳೀಯ ಹನುಮಂತಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article