ಲಿಂಗಸಗೂರು: ಶಿಕ್ಷಕರಿಂದಲೆ ಶಾಲಾವಧಿಯಲ್ಲಿ ನಾಮಫಲಕ ಬರೆಯುವ ಕೆಲಸ, ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳಲ್ಲಿ ಘಟನೆ,ಆಕ್ರೋಶ!!?

Laxman Bariker
ಲಿಂಗಸಗೂರು: ಶಿಕ್ಷಕರಿಂದಲೆ ಶಾಲಾವಧಿಯಲ್ಲಿ ನಾಮಫಲಕ ಬರೆಯುವ ಕೆಲಸ, ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳಲ್ಲಿ ಘಟನೆ,ಆಕ್ರೋಶ!!?
WhatsApp Group Join Now
Telegram Group Join Now

ಲಿಂಗಸಗೂರು: ಶಿಕ್ಷಕರಿಂದಲೆ ಶಾಲಾವಧಿಯಲ್ಲಿ ನಾಮಫಲಕ ಬರೆಯುವ ಕೆಲಸ, ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳಲ್ಲಿ ಘಟನೆ,ಆಕ್ರೋಶ!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಯುತ್ತಿರುವ ವಸತಿಶಾಲೆ ಇತ್ಯಾದಿಯಲ್ಲಿ ಶಾಲಾವಧಿಯಲ್ಲಿಯೆ ಶಿಕ್ಷಕರಿಂದಲೇ ನಾಮಫಲಕಗಳನ್ನು ಬರೆಯಲು ಶಿಕ್ಷಕರನ್ನು ಬಳಸಿಕೊಳ್ಳಲಾಗಿದ್ದು ಇದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

oplus_0

ಲಿಂಗಸಗೂರು ತಾಲೂಕಿನಲ್ಲಿ ಮೂರುಕಡೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯಿಮದ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ನಾಮಫಲಕಗಳನ್ನು ಶಿಕ್ಷಕರಿಂದಲೇ ಬರೆಯುತ್ತಿರುವ ಬಗೆಗೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದಾಗ ಸುಳಿವನ್ನು ಆಧರಿಸಿ ಕರಡಕಲ್ ಹತ್ತಿರವಿರುವ ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಇಬ್ಬರು ನಾಮಫಲಕ ಬರೆಯುವುದರಲ್ಲಿ ನಿರತರಾಗಿದ್ದರು

ಅವರನ್ನು ಮಾತನಾಡಿಸಿದಾಗ ನಾವು ತಾಲೂಕಿನ ಮುರಾರ್ಜಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತಿದ್ದು ಜಿಲ್ಲಾ ಅಲ್ಪಸಂಖ್ಯಾಥ ಇಲಾಖೆಯ ಆದೇಶದಂತೆ ನಾಮಫಲಕ ಬರೆಯಲು ಬಂದಿರುವದಾಗಿ ಹೇಳಿದರು ಅದರಂತೆ ಮಾನ್ವಿಯ ಇಲಾಖೆಯ ಮುರಾರ್ಜಿಯಲ್ಲಿ ಕೆಲಸ ಮಾಡುತ್ತಿದ್ದು ನನ್ನನ್ನು ಅಧಿಕಾರಿಗಳು ನಾಮಫಲಕ ಬರೆಯಲು ಇಲ್ಲಿಗೆ ಕಳುಹಿಸಿದ್ದಾರೆ ಎಮದು ಹೇಳಿದರು
ಶಾಲಾ ಅವಧಿಯಲ್ಲಿ ಶಿಕ್ಷಕರನ್ನು ಬೇರೆ ಕೆಲಸಗಳಿಗೆ ನಿಯೋಜಿಸಬಾರದೆಂದು ಆದೇಶವಿದ್ದರು ಸಹಿತ ಸದರಿ ಇಲಾಖೆಯ ಅಧಿಕಾರಿ ಬೇರೊಂದು ತಾಲೂಕಿನಿಂದ ನಾಮಫಲಕ ಬರೆಯುವ ಕೆಲಸಕ್ಕೆ ಕಳುಹಿಸಿದ್ದು ಆತನಿಗೆ ಯಾವುದೆ ರೀತಿಯ ಹೋಗಿಬರಲು ಖರ್ಚುವೆಚ್ಚಗಳನ್ನು ನೀಡಿಲ್ಲ ಎನ್ನುವ ಮಾಹಿತಿಯು ಲಭ್ಯವಾಗಿದೆ
ಅದರಂತೆ ಜಿಲ್ಲೆಯ ಸಿಂಧನೂರು,ಮಸ್ಕಿ,ಮಾನ್ವಿ,ದೇವದುರ್ಗ,ಲಿAಗಸಗುರು,ರಾಯಚೂರು ಎಲ್ಲಾ ಕಡೆಯಲ್ಲೂ ಶಿಕ್ಷಕರಿಂದಲೇ ನಾಮಫಲಕ ಬರೆಸುವುದಾಗಿ ಮಾಹಿತಿ ದೊರಕಿದ್ದು ಅಲ್ಪಸಂಖ್ಯಾತ ಇಲಾಖೆಗೆ ನಾಮಫಲಕ ಬರೆಸಲು ಶಾಲಾ ಶಿಕ್ಷಕರೆ ಬೇಕೆ ಎನ್ನುವಂತಾಗಿದೆ ನಿಮ್ಮ ನಿಯಮವೇನಿದೆ, ಪ್ರತಿವರ್ಷ ನಾಮಫಲಕ ಬರೆಸಲು ಯಾವಮಾನದಂಡ ಬಳಸುತ್ತಾರೆ, ಅದಕ್ಕಾಗಿಯೆ ಪ್ರತ್ಯೇಕ ಹಣ ಬರುತ್ತದೆಯೆ,ನಾಮಫಲÀಕ ಬರೆಯಲು ಗುತ್ತಿಗೆದಾರಿಕೆ ನೀಡುತ್ತಾರೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಜಿಲ್ಲ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಕರೆಮಾಡಿದಾಗಲೆಲ್ಲ ಮೀಟಿಂಗ್,ಸ್ವಿಚ್ ಆಫ್ ಸಹಾಯಕರ ಕೈಯಲ್ಲಿ ಫೋನ್ ಹೀಗೆ ಕರೆಗೆ ತಪ್ಪಿಸಿಕೊಂಡ ಘಟನೆಯು ನಡೆಯಿತು
ಶಾಲಾ ಅವಧಿಯಲ್ಲಿಯೆ ಶಿಕ್ಷಕರಿಗೆ ನಾಮಫಲಕ ಬರೆಯುವ ಕೆಲಸಕ್ಕೆ ನಿಯೋಜನೆಗೊಳಿಸಿದ ಇಲಾಖೆಯ ಜಿಲ್ಲಾಅಧಿಕಾರಿಯ ಕೆಲಸ ಎಷ್ಟು ಸರಿ? ಆತನ ಮೇಲೆ ಕ್ರಮವೇನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ

WhatsApp Group Join Now
Telegram Group Join Now
Share This Article