ರಡ್ಡೇರ ಪತ್ತಿನ ಸೌಹಾರ್ಧ ಸಹಕಾರಿಗೆ ೨.೫೨ ಕೋಟಿ ನಿವ್ವಳ ಲಾಭಾಂಶ
ವಿಶ್ವಾಸ-ಪ್ರಾಮಾಣಿಕತೆಯಿಂದ ಸಹಕಾರಿ ಬೆಳವಣಿಗೆ ಸಾಧ್ಯ : ಹೆಡಗಿಮುದ್ರಾ ಶಿವಾಚಾರ್ಯರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು ಜುಲೈ27:
ಸಹಕಾರಿ ತತ್ವದಡಿ ಆರಂಭವಾಗಿರುವ ಸಹಕಾರಿ ಸಂಘಗಳ ಬೆಳವಣಿಗೆಯಾಗಲು ಗ್ರಾಹಕರು ಸಹಕಾರಿ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ಸಹಕಾರಿ ಆಡಳಿತ ಮಂಡಳಿ ನಿಸ್ವಾರ್ಥ ಸೇವೆ ಮತ್ತು ಅಧಿಕಾರಿಗಳ ಪ್ರಾಮಾಣಿಕತೆ ಪ್ರಮುಖ ಪಾತ್ರವಹಿಸಲಿದ್ದು ಆಗ ಮಾತ್ರ ಸಹಕಾರಿ ಉತ್ತಮ ಸಾಧನೆ ಬೆಳವಣಿಗೆ ಕಾರಣವಾಗಲಿದೆ ಎಂದು ಹೆಡಗಿ ಮುದ್ರಾ ಸಂಸ್ಥಾನ ವ್ಮಠದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ಸ್ವಾಮಿಗಳು ಹೇಳಿದರು.

ಪಟ್ಟಣದ ರಡ್ಡೇರ ಪತ್ತಿನ ಸೌಹಾರ್ಧ ಸಹಕಾರಿ ಸಂಘದ ೧೫ವೇ ವಾರ್ಷಿಕ ಮಹಾಸಭೆ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀಗಳು ೮ ರಿಂದ ೧೧ ಲಕ್ಷರೂಗಳ ಶೇರು ಬಂಡವಾಳದಿAದ ಆರಂಭವಾದ ಈ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಕುಮಾರೆಪ್ಪ ಹೊಳೆಯಾಚಿ ಅವರ ನಿಸ್ವಾರ್ಥ ಸೇವೆ ಫಲವಾಗಿ ೧೧ ಶಾಖೆಗಳ ಮೂಲಕ ಇಂದು ೨೦೦ ಕೋಟಿರೂಗಳ ವಹಿವಾಟು ನಡೆಸುತ್ತಿದೆ. ಇಚಿತಹ ಮಹಾನ್ ಸಾಧನೆಗೆ ಗ್ರಾಹಕರು ಹಾಗೂ ಬ್ಯಾಂಕ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಒಬ್ಬರ ಮೇಲೆ ಒಬ್ಬರು ಇಟ್ಟಿರುವ ವಿಶ್ವಾಸ ಪ್ರಾಮಾಣಿಕತೆ ಸಾಕ್ಷಿಯಾಗಿದೆ.

ಸಹಕಾರಿಯಿಂದ ಜನರ ಆರ್ಥೀಕ ಸುಧಾರಣೆ ಜತೆ ಜತೆಗೆ ಸಮಾಜಮುಖಿ ಕಾರ್ಯ ಮತ್ತು ಉತ್ತಮ ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ ಸಹಕಾರಿ ಅಧ್ಯಕ್ಷ ಕುಮಾರೆಪ್ಪ ಹೊಳೆಯಾಚಿ ಮಾತನಾಡಿ ೨.೨೧ಕೋಟಿ ಶೇರು ಬಂಡವಾಳ ೭.೭೯ ಕೋಟಿ ನಿಧಿಗಳು ೧೩೩.೮೫ ಕೋಟಿ ಠೇವುಗಳು, ೧೧೬.೦೯ ಕೋಟಿ, ೨೪.೦೯ಕೋಟಿ ಹೂಡಿಕೆಗಳು, ೧೪೩.೮೫ ಕೋಟಿ ದುಡಿಯುವ ಬಂಡವಾಳವಿದೆ. ೨೪೯.೯೪ ಕೋಟಿ ವ್ಯವಹಾರ ನಡೆಸಿ ಪ್ರಸಕ್ತ ವರ್ಷ ೨.೫೨ ಕೋಟಿ ಲಾಭಾಂಶ ಗಳಿಸಿದೆ ಎಂಬ ಮಾಹಿತಿ ನೀಡಿದರು. ಆರ್ಡಿಸಿಸಿ ಬ್ಯಾಂಕ ನಿರ್ದೆಶಕ ಸೋಮನಗೌಡ ಬಾದರ್ಲಿ ಹಾಗೂ ಸಿಇಓ ಅಮರೇಗೌಡ ಪಾಟೀಲ್ ಮಾತನಾಡಿದರು.
ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ತಮ ಅಂಕಗಳಿಸಿದ ಹತ್ತನೇ ತರಗತಿ ಪಿಯುಸಿ ಮಕ್ಕಳಿಗೆ ಸನ್ಮಾನಿಸಲಾಯಿತು. ಶರಣಯ್ಯ ತಾತ ಹುನಕುಂಟಿ ಉಪಾಧ್ಯಕ್ಷ ಬಸವರಾಜ ಕರೆಕಲ್, ನಿರ್ದೆಶಕರಾದ ಅಮರಪ್ಪ ಜಿರಾಳ, ಸುರೇಂದ್ರಗೌಡ ಆದಾಪೂರ, ವಿರುಪನಗೌಡ ಅನ್ವರಿ, ಭೀಮಣ್ಣ ಕರೆಕಲ್, ನಿಂಗನಗೌಡ ನಾಗರಹಾಳ, ವೀರನಗೌಡ ಕನ್ನಾಳ ಸೇರಿ ಸಹಕಾರಿ ಎಲ್ಲಾ ನಿರ್ದೆಶಕರುಗಳು ಕಾನೂನು ಸಲಹೆಗಾರರಾದ ಅಶೋಕ ಕರೆಕಲ್, ಶರಣಪ್ಪ ನಾಗಲಾಪೂರ, ಅಕೌಂಟೆಂಟ್ ತಿಪ್ಪೇಸ್ವಾಮಿ ಸಹಕಾರಿ ವ್ಯವಸ್ಥಾಪಕರು ಅಧಿಕಾರಿ ವರ್ಗ, ಶೇರುದಾರರು ಗ್ರಾಹಕರು ಭಾಗಿಯಾಗಿದ್ದರು. ಮೃತ ಶೇರುದಾರರಿಗೆ ಮೌನಾಚರಣೆ ಮೂಲಕ ಗೌರವಿಸಲಾಯಿತು.